ಫ್ರಾನ್ಸ್ ನಲ್ಲಿ ಸರ್ಕಾರದ ವಿರುದ್ದ ಜನರ ದಂಗೆ, ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆ

ಫ್ರಾನ್ಸ್ ನಲ್ಲಿ ಸರ್ಕಾರದ ವಿರುದ್ದ  ಜನರು ದಂಗೆ ಎದ್ದಿದ್ದಾರೆ.ಆ ಮೂಲಕ  ಕಳೆದ ಒಂದು ದಶಕದ ಅವಧಿಯಲ್ಲಿ ಫ್ರಾನ್ಸ್ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ.

Last Updated : Dec 2, 2018, 03:52 PM IST
ಫ್ರಾನ್ಸ್ ನಲ್ಲಿ ಸರ್ಕಾರದ ವಿರುದ್ದ ಜನರ ದಂಗೆ, ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆ title=
Photo courtesy: EPA

ನವದೆಹಲಿ: ಫ್ರಾನ್ಸ್ ನಲ್ಲಿ ಸರ್ಕಾರದ ವಿರುದ್ದ  ಜನರು ದಂಗೆ ಎದ್ದಿದ್ದಾರೆ.ಆ ಮೂಲಕ  ಕಳೆದ ಒಂದು ದಶಕದ ಅವಧಿಯಲ್ಲಿ ಫ್ರಾನ್ಸ್ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ.

ಮುಖಕ್ಕೆ ಮಾಸ್ಕ್ ಧರಿಸಿರುವ ಪ್ರತಿಭಟನಾಕಾರರು ಪ್ಯಾರಿಸ್ ಬೀದಿಗಿಳಿದು ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.ಈ ಕುರಿತಾಗಿ ಯುರೋಪ್ 1 ರೇಡಿಯೋಗೆ  ಪ್ರತಿಕ್ರಿಯಿಸಿರುವ  ಗ್ರಿವೆಕ್ಸ್ " ನಾವು ಇಂತಹ  ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ತಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ.ಕಳೆದ ಎರಡುವಾರಗಳಿಂದ ಪ್ರತಿಭಟನೆ ತೀವ್ರಗೊಂಡಿದ್ದು  ಪ್ರತಿಭಟನಾಕಾರರು ಎದೆಗೆ ಹಳದಿ ಕವಚಗಳನ್ನು ಧರಿಸಿ ಧೈನನಿಂದ ವಸ್ತುಗಳು ಮತ್ತು ಇಂಧನ ದರದ ಹೆಚ್ಚಳಕ್ಕೆ ಆಕ್ರೋಶಕೊಂಡಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಈಮ್ಯಾನುವಲ್ ಮ್ಯಾಕ್ರೋನ್  ತುರ್ತು ಸಭೆಯನ್ನು  ಪ್ರಧಾನಮಂತ್ರಿಯೊಂದಿಗೆ ಕರೆದಿದ್ದು ಪ್ರತಿಭಟನೆಯನ್ನು ಹೇಗೆ ಶಾಂತಗೊಳಿಸಬೇಕು ಮತ್ತು ಹೋರಾಟಗಾರ ಜೊತೆಗಿನ  ಮಾತುಕತೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.ಈ ಪ್ರತಿಭಟನೆ ನವಂಬರ್ 17 ರಂದು  ಪ್ರಾರಂಭವಾಗಿದ್ದು ಇದರಲ್ಲಿ ಒಟ್ಟು 133 ಜನರು ಗಾಯಗೊಂಡಿದ್ದಾರೆ ಎಂದು  ತಿಳಿದುಬಂದಿದೆ.ಅಲ್ಲದೆ  ಹಳದಿಗವಚ ಧರಿಸಿರುವ 412 ಪ್ರತಿಭಟನಾಕಾರರನ್ನು ಬಂದಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

  

Trending News