ಕೇವಲ 30 ಸೆಕೆಂಡ್ ಗಳಲ್ಲಿ ನಡೆಯಲಿದೆ Corona Test, ಭಾರತ-ಇಸ್ರೇಲ್ ನಿಂದ ಜಂಟಿಯಾಗಿ ಟೆಸ್ಟ್ ಕಿಟ್ ಅಭಿವೃದ್ಧಿ

ಭಾರತೀಯ ಮಾರುಕಟ್ಟೆಯಲ್ಲಿ ಈ ಕಿಟ್‌ನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿಯ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಇಸ್ರೇಲ್ ತನ್ನ ತಂತ್ರಜ್ಞಾನ ಉಪಯೋಗಿಸಲಿದೆ.  

Last Updated : Jul 24, 2020, 11:57 AM IST
ಕೇವಲ 30 ಸೆಕೆಂಡ್ ಗಳಲ್ಲಿ ನಡೆಯಲಿದೆ Corona Test, ಭಾರತ-ಇಸ್ರೇಲ್ ನಿಂದ ಜಂಟಿಯಾಗಿ ಟೆಸ್ಟ್ ಕಿಟ್ ಅಭಿವೃದ್ಧಿ title=

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ತಡೆಗಟ್ಟುವಿಕೆಗಾಗಿ, ವಿಶ್ವದ ಎಲ್ಲಾ ದೇಶಗಳು ಲಸಿಕೆಗಳನ್ನು ತಯಾರಿಸುವಲ್ಲಿ ನಿರತವಾಗಿವೆ. ತನಿಖೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹಿನ್ನೆಲೆ ಭಾರತದ ವಿಜ್ಞಾನಿಗಳು ಕೇವಲ 30 ಸೆಕೆಂಡುಗಳಲ್ಲಿ ಕರೋನಾವನ್ನು ಪರೀಕ್ಷಿಸಬಲ್ಲ ಕಿಟ್ ವಿನ್ಯಾಸದಲ್ಲಿ ನಿರತರಾಗಿದ್ದಾರೆ ಮತ್ತು ಈ ಕಿಟ್ ಇದುವರೆಗಿನ ಎಲ್ಲಾ ಕಿಟ್‌ಗಳಿಗಿಂತ ಅಗ್ಗದ ದರದಲ್ಲಿ ಲಭಿಸಲಿದೆ ಎನ್ನಲಾಗಿದೆ. ಈ ಕಿಟ್ ಅಭಿವೃದ್ಧಿಪಡಿಸಲು ಭಾರತ ಹಾಗೂ ಇಸ್ರೇಲ್ ವಿಜ್ಞಾನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದ ಭಾಗವಾಗಿ ಭಾರತಕ್ಕೆ ಸಂಶೋಧನಾ ತಂಡವನ್ನು ಕಳುಹಿಸಲಾಗುವುದು. ಈ ತಂಡವು ಭಾರತೀಯ ವಿಜ್ಞಾನಿಗಳೊಂದಿಗೆ ರೋಗವನ್ನು ಪರೀಕ್ಷಿಸಲು ತ್ವರಿತ ಪರೀಕ್ಷಾ ಕಿಟ್ ತಯಾರಿಸಲು ಕೆಲಸ ಮಾಡಲಿದೆ ಎಂದಿದೆ. ಈ ಕಿಟ್ ಕೇವಲ 30 ಸೆಕೆಂಡುಗಳಲ್ಲಿ ಫಲಿತಾಂಶಗಳನ್ನು ನೀಡಲಿದೆ ಎಂದು ಇಸ್ರೇಲ್ ಹೇಳಿದೆ.

ಮುಂದಿನ ವಾರಗಳಲ್ಲಿ ಇಸ್ರೇಲ್ನ ವಿದೇಶಾಂಗ ವ್ಯವಹಾರ, ರಕ್ಷಣಾ ಮತ್ತು ಆರೋಗ್ಯ ಸಚಿವಾಲಯವು ಉಭಯ ದೇಶಗಳ ನಡುವೆ ಕೋವಿಡ್ -19 ಸಹಕಾರ ವಿರೋಧಿ ಅಭಿಯಾನವನ್ನು ಆರಂಭಿಸಲಿದೆ ಎಂದು ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.

ಇದಕ್ಕಾಗಿ ಟೆಲ್ ಅವೀವ್‌ನಿಂದ ವಿಶೇಷ ವಿಮಾನವೊಂದು ನವದೆಹಲಿಗೆ ತಲುಪಲಿದೆ. ಈ ವಿಮಾನದ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ಕೋವಿಡ್ -19 ಪತ್ತೆ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ಬರಲಿದೆ, ಕೆ.ಕೆ. ವಿಜಯ್ ರಾಘವನ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಈ ವಿಶೇಷ ವಿಮಾನದಲ್ಲಿ ಮೆಕ್ಯಾನಿಕಲ್ ವೆಂಟಿಲೇಟರ್ ಗಳೂ ಕೂಡ ಬರಲಿದ್ದು, ಇವುಗಳನ್ನು ಭಾರತಕ್ಕೆ ರಫ್ತು ಮಾಡಲು ಇಸ್ರೇಲ್ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಿಟ್‌ನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿಯ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಇಸ್ರೇಲ್ ತನ್ನ ತಂತ್ರಜ್ಞಾನ ಉಪಯೋಗಿಸಲಿದೆ.

Trending News