ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆ ವೃದ್ದಿಗೊಳ್ಳಲಿದೆ- ಬಿಲ್ ಗೇಟ್ಸ್

ಮುಂದಿನ ದಶಕದಲ್ಲಿ ಭಾರತವು ಅತ್ಯಂತ ಶೀಘ್ರ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ, ಇದು ಜನರನ್ನು ಬಡತನದಿಂದ ಹೊರಹಾಕುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣದ ಆದ್ಯತೆಗಳಲ್ಲಿ ಹೂಡಿಕೆ ಮಾಡಲು ಸರ್ಕಾರ ಅವಕಾಶ ನೀಡುತ್ತದೆ ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದರು.

Last Updated : Nov 17, 2019, 05:19 PM IST
ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆ ವೃದ್ದಿಗೊಳ್ಳಲಿದೆ- ಬಿಲ್ ಗೇಟ್ಸ್    title=
file photo

ನವದೆಹಲಿ: ಮುಂದಿನ ದಶಕದಲ್ಲಿ ಭಾರತವು ಅತ್ಯಂತ ಶೀಘ್ರ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ, ಇದು ಜನರನ್ನು ಬಡತನದಿಂದ ಹೊರಹಾಕುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣದ ಆದ್ಯತೆಗಳಲ್ಲಿ ಹೂಡಿಕೆ ಮಾಡಲು ಸರ್ಕಾರ ಅವಕಾಶ ನೀಡುತ್ತದೆ ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದರು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬಿಲ್ ಗೇಟ್ಸ್ ಅವರು ಭಾರತದ ಆಧಾರ್ ಗುರುತಿನ ವ್ಯವಸ್ಥೆಯನ್ನು ಮತ್ತು ಹಣಕಾಸು ಸೇವೆಗಳು ಮತ್ತು ಔಷಧ ಕ್ಷೇತ್ರಗಳಲ್ಲಿ ದೇಶದ ಸಾಧನೆಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರ್ಥಿಕ ಸಂಕಷ್ಟದಲ್ಲಿರುವ ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ ಗೇಟ್ಸ್ ಅವರು 'ನನಗೆ ಹತ್ತಿರದ ಅವಧಿಯ ಬಗ್ಗೆ ಯಾವುದೇ ಜ್ಞಾನವಿಲ್ಲ, ಆದರೆ ಮುಂದಿನ ದಶಕದಲ್ಲಿ ಶೀಘ್ರ ಬೆಳವಣಿಗೆ ಸಾಧ್ಯವಿದೆ, ಇದು ಜನರನ್ನು ಬಡತನದಿಂದ ಮೇಲಕ್ಕೆತ್ತುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಆದ್ಯತೆಗಳು ನಿಜವಾಗಿಯೂ ಅದ್ಬುತ ರೀತಿಯಲ್ಲಿ ಇರುತ್ತವೆ. 

64 ವರ್ಷದ ಬಿಲ್ ಗೇಟ್ಸ್ 110 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಶುಕ್ರವಾರದಂದು ಅಮೆಜಾನ್ ಇಂಕ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಮರಳಿ ಪಡೆದರು. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಇದುವರೆಗೆ 35 ಶತಕೋಟಿ ಡಾಲರ್‌ಗಳನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ಬಡತನ ಕಡಿತ ಮತ್ತು ವಿವಿಧ ದೇಶಗಳಲ್ಲಿನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ದೇಣಿಗೆ ನೀಡಿದ್ದಾರೆ.

ಬಿಲ್ ಗೇಟ್ಸ್ ಪ್ರಸ್ತುತ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ದೇಶದಲ್ಲಿ ಅವರ ಪ್ರತಿಷ್ಠಾನದ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.

Trending News