ಭಾರತ, ಚೀನಾ,ರಷ್ಯಾದಂತ ದೇಶಗಳಿಗೆ ಮಾಲಿನ್ಯ ಅಥವಾ ಸ್ವಚ್ಚತೆ ಪ್ರಜ್ಞೆಯಿಲ್ಲ-ಡೊನಾಲ್ಡ್ ಟ್ರಂಪ್

ಜಾಗತಿಕ ಹವಾಮಾನ ವಿಚಾರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ ,ಹಾಗೂ ರಷ್ಯಾದಂತಹ ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

Last Updated : Jun 6, 2019, 12:22 AM IST
ಭಾರತ, ಚೀನಾ,ರಷ್ಯಾದಂತ ದೇಶಗಳಿಗೆ ಮಾಲಿನ್ಯ ಅಥವಾ ಸ್ವಚ್ಚತೆ ಪ್ರಜ್ಞೆಯಿಲ್ಲ-ಡೊನಾಲ್ಡ್ ಟ್ರಂಪ್ title=

ನವದೆಹಲಿ: ಜಾಗತಿಕ ಹವಾಮಾನ ವಿಚಾರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ ,ಹಾಗೂ ರಷ್ಯಾದಂತಹ ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಬ್ರಿಟನ್ ಚಾನಲ್ ಐಟಿವಿಗೆ ನೀಡಿರುವ ಸಂದರ್ಶನದಲ್ಲಿ  ರಾಜಕುಮಾರ ಚಾರ್ಲ್ಸ್ ಅವರ ಜೊತೆಗಿನ ಭೇಟಿ ಕುರಿತಾಗಿ ಪ್ರಶ್ನಿಸಿದಾಗ ಉತ್ತರಿಸಿದ ಡೊನಾಲ್ಡ್ ಟ್ರಂಪ್ "ನಾವು 15 ನಿಮಿಷಗಳ ಮಾತುಕತೆ ನಡೆಸಬೇಕಾಗಿತ್ತು ಹೊಂದಿದ್ದೇವೆ  ಅದು ಒಂದು ಗಂಟೆಯಿಂದ ಒಂದು ವರೆ ಗಂಟೆಯ ವರೆಗೂ ಸಾಗಿತು ... ಅವರು ಮಾತುಕತೆ ವೇಳೆ ಹವಾಮಾನ ಬದಲಾವಣೆ ವಿಚಾರವಾಗಿಯೂ ಕೂಡ ಮಾತನಾಡಿದರು  ಎಂದು ಟ್ರಂಪ್ ಹೇಳಿದರು. 

ಇನ್ನು ಮುಂದುವರೆದು ಟ್ರಂಪ್ ""ನೀವು ಕೆಲವು ನಗರಗಳಿಗೆ ಹೋದರೆ ... ನಾನು ಈ ನಗರಗಳಿಗೆ ಹೆಸರಿಸುವುದಿಲ್ಲ,  ಅಲ್ಲಿ ನಿಮಗೆ  ಉಸಿರಾಡಲು ಸಾಧ್ಯವಿಲ್ಲ, ಅವರು ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದು ಟ್ರಂಪ್ ದೂರಿದರು."ಎಲ್ಲಾ ಅಂಕಿಅಂಶಗಳ ಆಧಾರದ ಮೇಲೆ ಅಮೇರಿಕಾ  ಸ್ವಚ್ಛವಾದ ವಾತಾವರಣದಲ್ಲಿದೆ ಮತ್ತು ಅದು ಇನ್ನೂ ಉತ್ತಮಗೊಳ್ಳುತ್ತಿದೆ ಎಂದು ನಾನು ಹೇಳಿದೆ. ಚೀನಾ, ಭಾರತ, ರಶಿಯಾ, ಇತರ ದೇಶಗಳು, ಅವರು ಉತ್ತಮ ಗಾಳಿ, ಉತ್ತಮ ನೀರನ್ನು  ಹೊಂದಿಲ್ಲ ಅಲ್ಲ, ಅವರಿಗೆ ಮಾಲಿನ್ಯ ಮತ್ತು ಸ್ವಚ್ಛತೆಯ ಪರಿಕಲ್ಪನೆ ತಿಳಿದಿಲ್ಲ " ಎಂದು ಅವರು ಹೇಳಿದರು.

ಡೊನಾಲ್ಡ್ ಟ್ರಂಪ್ ಮೂರು ದಿನಗಳ ಭೇಟಿಗಾಗಿ ಬ್ರಿಟನ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕ್ವಿನ್ ಎಲಿಜೆಬೆತ್ ,ರಾಜಕುಮಾರ್ ಚಾರ್ಲ್ಸ್ ಅವರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಭೇಟಿಯಾದರು.ಈ ಸಂದರ್ಭದಲ್ಲಿ ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಇಬ್ಬರು ಸುರ್ದೀರ್ಘ ಚರ್ಚೆ ನಡೆಸಿದರು.

Trending News