ಪತ್ನಿ, ಮಗನಿಗೆ ಗುಂಡು ಹಾರಿಸಿ ಹತ್ಯೆಗೈದು ಮಂಡ್ಯದ ಮೂಲದ ಉದ್ಯಮಿ ಆತ್ಮಹತ್ಯೆಗೆ ಶರಣು!!

ಹರ್ಷವರ್ಧನ ಮತ್ತು ಶ್ವೇತಾ ದಂಪತಿ ಅನ್ಯೋನ್ಯವಾಗಿಯೇ ಇದ್ದರಂತೆ. ಇದಲ್ಲದೇ ನೆರೆಹೊರೆಯವರ ಬಳಿಯೂ ಈ ಕುಟುಂಬದವರು ಚೆನ್ನಾಗಿದ್ದರೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Written by - Puttaraj K Alur | Last Updated : Apr 30, 2025, 11:00 PM IST
  • ಅಮೆರಿಕದಲ್ಲಿ ಪತ್ನಿ ಮತ್ತು ಮಗನಿಗೆ ಗುಂಡು ಹಾರಿಸಿ ಹತ್ಯೆ
  • ಮಂಡ್ಯ ಮೂಲದ ಟೆಕ್‌ ಉದ್ಯಮಿ ಆತ್ಮಹತ್ಯೆಗೆ ಶರಣು
  • ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿ ಏಪ್ರಿಲ್ 24ರಂದು ಘಟನೆ ನಡೆದಿದೆ
ಪತ್ನಿ, ಮಗನಿಗೆ ಗುಂಡು ಹಾರಿಸಿ ಹತ್ಯೆಗೈದು ಮಂಡ್ಯದ ಮೂಲದ ಉದ್ಯಮಿ ಆತ್ಮಹತ್ಯೆಗೆ ಶರಣು!!

HoloWorld CEO Harshavardhana Kikkeri: ಪತ್ನಿ ಮತ್ತು ಮಗನಿಗೆ ಗುಂಡು ಹಾರಿಸಿ ಹತ್ಯೆಗೈದ ನಂತರ ಮಂಡ್ಯ ಮೂಲದ ಟೆಕ್‌ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿ ಏಪ್ರಿಲ್ 24ರಂದು ಈ ಘಟನೆ ನಡೆದಿದೆ. 

Add Zee News as a Preferred Source

ಮೃತರನ್ನು ಹರ್ಷವರ್ಧನ ಎಸ್ ಕಿಕ್ಕೇರಿ (57), ಶ್ವೇತಾ ಪನ್ಯಂ (44) ಹಾಗೂ ದಂಪತಿಯ 14 ವರ್ಷದ ಮಗ ಎಂದು ಗುರುತಿಸಲಾಗಿದೆ. ಈ ಸಮಯದಲ್ಲಿ ದಂಪತಿಯ ಮತ್ತೊಬ್ಬ ಮಗ ಮನೆಯಲ್ಲಿಲ್ಲದ ಕಾರಣ ಬಚಾವ್‌ ಆಗಿದ್ದಾನೆಂದು ವರದಿಯಾಗಿದೆ. ಮೃತ ಬಾಲಕ ಹಾಗೂ ಮತ್ತೊಬ್ಬ ಮಗನ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: Explainer: ಎಲ್ಓಸಿ ಎಂದರೇನು? ಇದು ಭಾರತ-ಪಾಕ್ ನಡುವೆ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?

ಈ ಕೃತ್ಯಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಹರ್ಷವರ್ಧನ ಮತ್ತು ಶ್ವೇತಾ ದಂಪತಿ ಅನ್ಯೋನ್ಯವಾಗಿಯೇ ಇದ್ದರಂತೆ. ಇದಲ್ಲದೇ ನೆರೆಹೊರೆಯವರ ಬಳಿಯೂ ಈ ಕುಟುಂಬದವರು ಚೆನ್ನಾಗಿದ್ದರೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರ್ಷವರ್ಧನ್ ಅವರು 2017ರಲ್ಲಿ ಅಮೆರಿಕದಿಂದ ಬಂದು, ಮೈಸೂರಿನಲ್ಲಿ ಹೋಲೋವರ್ಲ್ಡ್ ಕಂಪನಿ ಸ್ಥಾಪಿಸಿದ್ದರು. ಅವರ ಪತ್ನಿ ಕಂಪನಿಯ ಸಹ-ಸಂಸ್ಥಾಪಕರಾಗಿದ್ದರು. 2022ರ ಕೋವಿಡ್ -19 ಸಮಯದಲ್ಲಿ ಈ ಕಂಪನಿಯು ಬಂದ್‌ ಆಗಿತ್ತು. ಬಳಿಕ ಅವರು ಮತ್ತೆ ಅಮೆರಿಕಕ್ಕೆ ತೆರಳಿದ್ದರು.

ಇದನ್ನೂ ಓದಿ: ಪಾಕ್ ನಟಿ ಹನಿಯಾ ಅಮೀರ್‌ಗೆ ಭಾರತೀಯ ಅಭಿಮಾನಿಗಳಿಂದ ನೀರಿನ ಬಾಟಲ್ ಉಡುಗೊರೆ, ವಿಡಿಯೋ ವೈರಲ್

ಹರ್ಷವರ್ಧನ್ ಅವರು ಗಡಿ ಭದ್ರತೆಯ ವಿಚಾರದಲ್ಲಿ ರೋಬೋಟ್‌ಗಳನ್ನ ಬಳಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ರೊಬೊಟಿಕ್ಸ್‌ನಲ್ಲಿ ಪರಿಣಿತರಾಗಿದ್ದ ಅವರು ಅಮೆರಿಕದಲ್ಲಿ ಮೈಕ್ರೋಸಾಫ್ಟ್‌ ಕಂಪನಿಯಲ್ಲಿಯೂ ಕೆಲಸ ಮಾಡಿದ್ದರಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News