Iran-Israel War: ಸ್ಲೀಪರ್ ಸೆಲ್‌ಗಳು ಎಂದರೇನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Iran-Israel War: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ಹಿತಾಸಕ್ತಿಗಳ ವಿರುದ್ಧದ ಮಿಲಿಟರಿ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಬಹುದು ಎಂದು ಪಾಶ್ಚಿಮಾತ್ಯ ಗುಪ್ತಚರ ಸೇವೆಗಳು ಎಚ್ಚರಿಸಿದೆ. ಇದರ ಬೆನ್ನಲ್ಲೇ ಸ್ಲೀಪರ್ ಸೆಲ್‌ಗಳು ಬೆಳಕಿಗೆ ಬಂದಿವೆ.

Written by - Puttaraj K Alur | Last Updated : Jun 22, 2025, 02:20 PM IST
  • ಸ್ಲೀಪರ್ ಸೆಲ್ ಎಂದರೆ ಗುಪ್ತವಾಗಿ ಕಾರ್ಯನಿರ್ವಹಿಸುವ ಜನರ ಗುಂಪು
  • ಸ್ಲೀಪರ್ ಸೆಲ್‌ಗಳು ತಮ್ಮ ಮೇಲಧಿಕಾರಿಗಳೊಂದಿಗೆ ಗುಪ್ತ ಮಾರ್ಗಗಳ ಮೂಲಕ ಸಂವಹನ ನಡೆಸುತ್ತಾರೆ
  • ಭಯೋತ್ಪಾದಕ ದಾಳಿ, ಗೂಢಚಾರಿಕೆ ಮತ್ತು ಗುರಿ ನಾಶಪಡಿಸುವ ಉದ್ದೇಶ ಹೊಂದಿರುತ್ತಾರೆ
Iran-Israel War: ಸ್ಲೀಪರ್ ಸೆಲ್‌ಗಳು ಎಂದರೇನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Iran-Israel War: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ಹಿತಾಸಕ್ತಿಗಳ ವಿರುದ್ಧದ ಮಿಲಿಟರಿ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಬಹುದು ಎಂದು ಪಾಶ್ಚಿಮಾತ್ಯ ಗುಪ್ತಚರ ಸೇವೆಗಳು ಎಚ್ಚರಿಸಿದೆ. ಇದರ ಬೆನ್ನಲ್ಲೇ ಸ್ಲೀಪರ್ ಸೆಲ್‌ಗಳು ಬೆಳಕಿಗೆ ಬಂದಿವೆ.

Add Zee News as a Preferred Source

ಸ್ಲೀಪರ್ ಸೆಲ್‌ಗಳು ಎಂದರೇನು?

ಒಂದು ಸಮುದಾಯದಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುವ ಭಯೋತ್ಪಾದಕ ಗುಂಪುಗಳು ಸಕ್ರಿಯಗೊಳ್ಳುವವರೆಗೆ ಅವುಗಳನ್ನು ಸ್ಲೀಪರ್ ಸೆಲ್‌ಗಳು ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ಅಥವಾ ಗುಂಪುಗಳು ಒಂದು ರಾಷ್ಟ್ರದಲ್ಲಿಯೇ ಇದ್ದು, ನಿರ್ದಿಷ್ಟ ಕಾರ್ಯಾಚರಣೆಗಾಗಿ ಆದೇಶಗಳನ್ನು ನೀಡುವವರೆಗೆ ತಮ್ಮ ದೈನಂದಿನ ಜೀವನವನ್ನು ನಡೆಸುತ್ತಾರೆ.  

ಸ್ಲೀಪರ್ ಸೆಲ್ ಸದಸ್ಯರು ಸಾರ್ವಜನಿಕರ ಗಮನ ಸೆಳೆಯದೇ ಇರುತ್ತಾರೆ ಮತ್ತು ಭದ್ರತಾ ಸಂಸ್ಥೆಗಳಿಗೆ ಅವರನ್ನು ಗುರುತಿಸುವುದು ಕಷ್ಟ. ಈ ವ್ಯಕ್ತಿಗಳು ಅಥವಾ ಗುಂಪುಗಳು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು, ನಿರ್ಣಾಯಕ ಮೂಲಸೌಕರ್ಯ ಅಥವಾ ನಿರ್ದಿಷ್ಟ ವ್ಯಕ್ತಿಗಳ ಮೇಲೆ ದಾಳಿ ಮಾಡಬಹುದು ಅಥವಾ ಕಣ್ಣಿಡಬಹುದು.

ಇದನ್ನೂ ಓದಿ: ಮದುವೆಯಾಗದೆ 40 ವರ್ಷ ವಯಸ್ಸಿನಲ್ಲಿ 100 ಮಕ್ಕಳ ತಂದೆ! ಮೂವರೊಂದಿಗೆ ಡೇಟಿಂಗ್ ಮಾಡುತ್ತಿರುವ ಈತ ಯಾರು?

ಸ್ಲೀಪರ್ ಸೆಲ್‌ಗಳು ಸುದ್ದಿಯಲ್ಲಿ ಏಕೆ?

ಪಾಶ್ಚಿಮಾತ್ಯ ದೇಶಗಳ ರಾಜತಾಂತ್ರಿಕ ಕಾರ್ಯಾಚರಣೆಗಳು, ರಾಯಭಾರ ಕಚೇರಿಗಳು, ಮಿಲಿಟರಿ ನೆಲೆಗಳು, ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಸಂಸ್ಥೆಗಳು, ಪ್ರಮುಖ ಮೂಲಸೌಕರ್ಯಗಳು ಅಥವಾ ನಗರ ಪ್ರದೇಶಗಳನ್ನು ಬಾಂಬ್‌ಗಳಿಂದ ಗುರಿಯಾಗಿಸಲು ಇರಾನ್ ಸ್ಲೀಪರ್ ಏಜೆಂಟ್‌ಗಳನ್ನು ಸಕ್ರಿಯಗೊಳಿಸಬಹುದು ಎಂದು ಅಮೆರಿಕ, ಯುಕೆ ಮತ್ತು ಯುರೋಪ್‌ನ ಭದ್ರತಾ ತಜ್ಞರು ಕಳವಳ ವ್ಯಕ್ತಪಡಿಸಿದ ನಂತರ ಈ ಸ್ಲೀಪರ್ ಸೆಲ್‌ಗಳು ಇತ್ತೀಚೆಗೆ ಸುದ್ದಿಯಲ್ಲಿವೆ. 

ಇರಾನ್‌ನ ಪರಮಾಣು ಸೌಲಭ್ಯಗಳ ಮೇಲಿನ ದಾಳಿಗಳು, ಕ್ಷಿಪಣಿ ದಾಸ್ತಾನುಗಳ ನಾಶ ಮತ್ತು ಅದರ ಉನ್ನತ ಮಿಲಿಟರಿ ಕಮಾಂಡ್‌ನ ಪತನದ ನಂತರ, ರಹಸ್ಯ ಕಾರ್ಯಕರ್ತರನ್ನು ಬಳಸಿಕೊಂಡು ಅಸಮಪಾರ್ಶ್ವದ ಯುದ್ಧವು ಇರಾನ್‌ನ ಕೊನೆಯ ಆಯ್ಕೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ವರದಿಗಳ ಪ್ರಕಾರ, ಇರಾನ್-ಸಂಬಂಧಿತ ಸಂಚುಗಳನ್ನು ಈಗಾಗಲೇ ಹಲವಾರು ದೇಶಗಳಲ್ಲಿ ವಿಫಲಗೊಳಿಸಲಾಗಿದೆ.

ಇದನ್ನೂ ಓದಿ: ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮ ನಿರ್ದೇಶನ..!

ಇತ್ತೀಚಿನ ಬೆಳವಣಿಗೆಗಳು

ಶನಿವಾರ (ಅಮೆರಿಕದ ಸ್ಥಳೀಯ ಸಮಯ), ಅಮೆರಿಕವು ಇರಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿತು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼಅಮೆರಿಕವು ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆʼ ಎಂದು ದೃಢಪಡಿಸಿದ್ದಾರೆ. 

"ಇರಾನ್‌ನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಈಗ ಎಲ್ಲಾ ವಿಮಾನಗಳು ಇರಾನ್ ವಾಯುಪ್ರದೇಶದ ಹೊರಗೆ ಇವೆ. ಪ್ರಾಥಮಿಕ ತಾಣವಾದ ಫೋರ್ಡೋ ಮೇಲೆ ಬಾಂಬ್‌ಗಳ ಪೂರ್ಣ ಪೇಲೋಡ್ ಅನ್ನು ಬೀಳಿಸಲಾಯಿತು. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಮರಳುತ್ತಿವೆ" ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ.

ಈ ದಾಳಿಯ ನಂತರ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ, ʼದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆʼ ಎಂದು ಹೇಳಿದ್ದಾರೆ. "ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕ, ಇರಾನ್‌ನ ಶಾಂತಿಯುತ ಪರಮಾಣು ಸ್ಥಾಪನೆಗಳ ಮೇಲೆ ದಾಳಿ ಮಾಡುವ ಮೂಲಕ ವಿಶ್ವಸಂಸ್ಥೆಯ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು NPTಯ ಗಂಭೀರ ಉಲ್ಲಂಘನೆ ಮಾಡಿದೆ. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅದರ ನಿಬಂಧನೆಗಳಿಗೆ ಅನುಗುಣವಾಗಿ ಸ್ವರಕ್ಷಣೆಗಾಗಿ ಕಾನೂನುಬದ್ಧ ಪ್ರತಿಕ್ರಿಯೆ ಅನುಮತಿಸುವ ಮೂಲಕ, ಇರಾನ್ ತನ್ನ ಸಾರ್ವಭೌಮತ್ವ, ಹಿತಾಸಕ್ತಿಗಳು ಮತ್ತು ಜನರನ್ನು ರಕ್ಷಿಸಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ" ಎಂದು ಅರಾಘ್ಚಿ ಟ್ವಿಟರ್‌ ಮೂಲಕ ತಿಳಿಸಿದ್ದಾರೆ. 

ಇರಾನ್-ಇಸ್ರೇಲ್ ಸಂಘರ್ಷ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಭಾನುವಾರ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಜೂನ್ 13ರಂದು ಇರಾನ್‌ನ ಪರಮಾಣು ಮತ್ತು ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ಪ್ರಾರಂಭಿಸಿದಾಗ ಶತ್ರುತ್ವ ಪ್ರಾರಂಭವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆ, ಆಪರೇಷನ್ ಟ್ರೂ ಪ್ರಾಮಿಸ್ 3 ಅನ್ನು ಪ್ರಾರಂಭಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News