ಇರಾನ್ ನಲ್ಲಿ ಭೀಕರ ಬರಗಾಲ, ಪಾಕ್ ಪಕ್ಕದಲ್ಲೇ ರಾಜಧಾನಿ ಆರಂಭಿಸಲು ಸಿದ್ದತೆ...!

ನೀರಿನ ಬಿಕ್ಕಟ್ಟಿನ ಮಧ್ಯೆ, ಇರಾನ್ ಅಧ್ಯಕ್ಷರು ನಿವಾಸಿಗಳು ಟೆಹ್ರಾನ್ ತೊರೆಯಲು ಸಿದ್ಧರಾಗುವಂತೆ ಒತ್ತಾಯಿಸಿದ್ದಾರೆ.ಒಂದು ವೇಳೆ ನವೆಂಬರ್ ಅಂತ್ಯದ ವೇಳೆಗೆ ಮಳೆ ಬಾರದಿದ್ದರೆ, ಟೆಹ್ರಾನ್ ರಾಜಧಾನಿಯನ್ನು ಪಾಕಿಸ್ತಾನದ ಗಡಿಯಲ್ಲಿರುವ ಮಕ್ರಾನ್‌ಗೆ ಸ್ಥಳಾಂತರಿಸಬಹುದು ಎನ್ನಲಾಗಿದೆ.

Written by - Manjunath Naragund | Last Updated : Nov 13, 2025, 05:49 PM IST
  • ನೀರಿನ ಕೊರತೆಯಿಂದಾಗಿ ಟೆಹ್ರಾನ್‌ನಲ್ಲಿ ನಲ್ಲಿಗಳು ಬತ್ತಿ ಹೋಗುತ್ತಿವೆ.
  • ಮಸ್ನ್‌ಹಾದ್ ಮತ್ತು ಟೆಹ್ರಾನ್ ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ
  • ಟೆಹ್ರಾನ್‌ನ ಕೊನೆಯ ಜಲಾಶಯವೂ ಸಹ ಒಣಗುವ ಹಂತದಲ್ಲಿದೆ
ಇರಾನ್ ನಲ್ಲಿ ಭೀಕರ ಬರಗಾಲ, ಪಾಕ್ ಪಕ್ಕದಲ್ಲೇ ರಾಜಧಾನಿ ಆರಂಭಿಸಲು ಸಿದ್ದತೆ...!

Add Zee News as a Preferred Source

ತೆಹರಾನ್: ನೀರಿನ ಕೊರತೆ ಮತ್ತು ಭದ್ರತಾ ಆತಂಕದಿಂದಾಗಿ ಇರಾನ್ ದೇಶವು ಈಗ ತನ್ನ ರಾಜಧಾನಿಯನ್ನು ಸ್ಥಳಾಂತರಿಸಲು ಸಿದ್ದತೆ ನಡೆಸಿದೆ. ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ಅಧ್ಯಕ್ಷ ಮಸೌದ್ ಪಜೇಶ್ಕಿಯಾನ್ ಸುಳಿವು ನೀಡಿದ್ದಾರೆ.ಟೆಹ್ರಾನ್ ಪ್ರಸ್ತುತ ಇರಾನ್‌ನ ರಾಜಧಾನಿಯಾಗಿದೆ.ಅಘಾ ಮೊಹಮ್ಮದ್ ಖಾನ್ ಕಜರ್ 1796 ರಲ್ಲಿ ಟೆಹ್ರಾನ್ ಅನ್ನು ರಾಜಧಾನಿಯಾಗಿ ಸ್ಥಾಪಿಸಿದರು.

ಇರಾನ್ ಇಂಟರ್ನ್ಯಾಷನಲ್ ವರದಿ ಪ್ರಕಾರ ಪ್ರಕಾರ, ಟೆಹ್ರಾನ್‌ನಲ್ಲಿ ಈಗ ಕೇವಲ ಏಳು ದಿನಗಳಿಗೆ ಬೇಕಾದ ನೀರು ಉಳಿದಿದೆ. ಈ ಏಳು ದಿನಗಳಲ್ಲಿ ಮಳೆ ಬರದಿದ್ದರೆ, ಟೆಹ್ರಾನ್ ನೀರನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆ, ಇರಾನ್ ಅಧ್ಯಕ್ಷರು ಜನರನ್ನು ಸ್ಥಳಾಂತರಿಸಲು ಸಿದ್ಧರಾಗುವಂತೆ ಒತ್ತಾಯಿಸಿದ್ದಾರೆ.ಅವರು ಯಾವುದೇ ಸಮಯದಲ್ಲಿ ಟೆಹ್ರಾನ್‌ನಿಂದ ಹೊರಹೋಗುವಂತೆ ಒತ್ತಾಯಿಸಬಹುದು.

ಇದನ್ನೂ ಓದಿ: ಮೊಹಮದ್ ಯೂನಸ್ ಪಾಕ್ ನ ತಾಳಕ್ಕೆ ಕುಣಿಯುತ್ತಿದ್ದಾರೆ- ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಸುಮಾರು 1 ಕೋಟಿ ಜನರು ವಾಸಿಸುತ್ತಿದ್ದಾರೆ.ಇದನ್ನು ಇರಾನ್‌ನ ಅತ್ಯಂತ ಹಳೆಯ ಮತ್ತು ಅತ್ಯಂತ ಅಭಿವೃದ್ಧಿ ಹೊಂದಿದ ನಗರವೆಂದು ಪರಿಗಣಿಸಲಾಗಿದೆ.ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇಲ್ಲಿ ವಾಸಿಸುತ್ತಿದ್ದಾರೆ.ಆದಾಗ್ಯೂ ನೀರಿನ ಬಿಕ್ಕಟ್ಟು ಅಲ್ಲಿನ ಜನರ ಜೀವನವನ್ನು ಕಷ್ಟಕರವಾಗಿಸಿದೆ.

ಪಾಕಿಸ್ತಾನದ ನೆರೆಹೊರೆಯಲ್ಲಿ ಇರಾನ್ ರಾಜಧಾನಿ?

ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್‌ನ ಮಕ್ರಾನ್ ಪ್ರಾಂತ್ಯದಲ್ಲಿ ರಾಜಧಾನಿಯನ್ನು ಸ್ಥಾಪಿಸುವ ಬಗ್ಗೆ ಚರ್ಚೆ ಹೆಚ್ಚುತ್ತಿದೆ.ಮಕ್ರಾನ್ ಪಾಕಿಸ್ತಾನದೊಂದಿಗೆ ಗಡಿಯನ್ನು ಸಹ ಹಂಚಿಕೊಂಡಿದೆ. ಇರಾನ್‌ನ ಚಬಹಾರ್ ಬಂದರು ಇಲ್ಲೇ ಇದೆ. ಈ ಇರಾನಿನ ಪ್ರಾಂತ್ಯವು ಹೇರಳವಾದ ನೀರನ್ನು ಹೊಂದಿದೆ.ಮಕ್ರಾನ್ ಪ್ರಾಂತ್ಯವು ಟೆಹ್ರಾನ್ ಗಿಂತ ಸುರಕ್ಷಿತವಾಗಿದೆ.ಇಸ್ರೇಲ್ ಮಕ್ರಾನ್ ಮೇಲೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಿಲ್ಲ. ಇದು ಟೆಹ್ರಾನ್ ನಿಂದ 1000 ಕಿಲೋಮೀಟರ್ ದೂರದಲ್ಲಿದೆ.ಇಸ್ರೇಲಿ ಯುದ್ಧ ವಿಮಾನಗಳು ಅದನ್ನು ತಲುಪುವ ಮೊದಲೇ ನಾಶವಾಗುತ್ತವೆ.

ಇದನ್ನೂ ಓದಿ: ಆಸ್ತಿಗೆ ಸಹಿ ಹಾಕಿಸಿಕೊಳ್ಳಲು ಕರೆಸಿದ ಜೈದೇವ್‌ಗೆ ಡಿವೊರ್ಸ್‌ ಶಾಕ್‌ ಕೊಟ್ಟ ಮಲ್ಲಿ..! ಗೌತಮ್‌- ಭೂಮಿಕಾ ನಡುವೆ ಅರಳಿದ ಅನುರಾಗ..! ಕೊನೆಯಾಗುತ್ತಾ ಸೀರಿಯಲ್‌?

ಇರಾನ್‌ನಲ್ಲಿ ನೀರಿನ ಬಿಕ್ಕಟ್ಟು ಎಷ್ಟು ದೊಡ್ಡದಾಗಿದೆ?

ಅಲ್-ಮಾನಿಟರ್ ಪ್ರಕಾರ, ನೀರಿನ ಕೊರತೆಯಿಂದಾಗಿ ಟೆಹ್ರಾನ್‌ನಲ್ಲಿ ನಲ್ಲಿಗಳು ಬತ್ತಿ ಹೋಗುತ್ತಿವೆ. ಇರಾನ್‌ನ ಎರಡು ದೊಡ್ಡ ನಗರಗಳಾದ ಮಸ್ನ್‌ಹಾದ್ ಮತ್ತು ಟೆಹ್ರಾನ್ ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ.ಟೆಹ್ರಾನ್‌ನ ಕೊನೆಯ ಜಲಾಶಯವೂ ಸಹ ಒಣಗುವ ಹಂತದಲ್ಲಿದೆ.ನವೆಂಬರ್ 3 ರಂದು ಬಿಡುಗಡೆಯಾದ ಉಪಗ್ರಹ ಚಿತ್ರವು ಜಲಾಶಯವು ಈಗ ಕೇವಲ 10 ದಿನಗಳ ನೀರನ್ನು ಮಾತ್ರ ಹೊಂದಿದೆ ಎಂದು ಸೂಚಿಸುತ್ತದೆ.

ಈ ಹಿಂದಿನ ಸರ್ಕಾರಗಳ ನೀತಿಗಳು, ಹವಾಮಾನ ಬದಲಾವಣೆ ಮತ್ತು ಅತಿಯಾದ ಬಳಕೆಯಿಂದಾಗಿ ಇರಾನ್ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಹಾಗಾಗಿ ಎಲ್ಲರೂ ತಾಳ್ಮೆಯಿಂದಿರಬೇಕು ಎಂದು ಅಧ್ಯಕ್ಷ ಮಸೌದ್ ಪಜೇಶ್ಕಿಯಾನ್ ಹೇಳಿದ್ದಾರೆ.

About the Author

Trending News