ಜುಲೈ 5ರ ಬೆಳಗ್ಗೆ 4.18ಕ್ಕೆ ಸಂಭವಿಸಲಿದೆಯಂತೆ ಮಹಾ ದುರಂತ!! ಜಪಾನಿನ ಬಾಬಾ ವಂಗಾ ಭವಿಷ್ಯವಾಣಿ

Ryo Tatsuki predictions: ಕೋಬ್ ಭೂಕಂಪ ಮತ್ತು 2011ರ ಭೀಕರ ಸುನಾಮಿಯಂತಹ ಭಯಾನಕ ನಿಖರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಮಂಗಾ ಕಲಾವಿದ ರಿಯೋ ಟಾಟ್ಸುಕಿಯವರು, ಜುಲೈ ತಿಂಗಳಿನಲ್ಲಿ ಭೀಕರ ಸಾಗರ ವಿಪತ್ತು ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. 

Written by - Puttaraj K Alur | Last Updated : Jun 20, 2025, 01:57 PM IST
  • ಜುಲೈ 5ರ ಬೆಳಗ್ಗೆ 4.18ಕ್ಕೆ ಜಪಾನ್ & ಫಿಲಿಪೈನ್ಸ್ ಸಾಗರ ತಳದಲ್ಲಿ ಭೀಕರ ವಿಪತ್ತು
  • ಜಪಾನಿನ ಬಾಬಾ ವಂಗಾ ಎಂದೇ ಖ್ಯಾತಿಯಾಗಿರುವ ಮಂಗಾ ಕಲಾವಿದೆ ರ್ಯೋ ಟಾಟ್ಸುಕಿ
  • ತಮ್ಮ ಪುಸ್ತಕದಲ್ಲಿ ಸಮುದ್ರ ಕುದಿಯುತ್ತಿರುವ ಒಂದು ಚಿತ್ರವನ್ನ ಚಿತ್ರಿಸಿರುವ ಟಾಟ್ಸುಕಿ
ಜುಲೈ 5ರ ಬೆಳಗ್ಗೆ 4.18ಕ್ಕೆ ಸಂಭವಿಸಲಿದೆಯಂತೆ ಮಹಾ ದುರಂತ!! ಜಪಾನಿನ ಬಾಬಾ ವಂಗಾ ಭವಿಷ್ಯವಾಣಿ

Japan’s ‘Baba Vanga’ Ryo Tatsuki: ಜಪಾನಿನ ಬಾಬಾ ವಂಗಾ ಎಂದೇ ಖ್ಯಾತಿಯಾಗಿರುವ ಮಂಗಾ ಕಲಾವಿದೆ ರ್ಯೋ ಟಾಟ್ಸುಕಿ (Ryo Tatsuki), ಜುಲೈ ತಿಂಗಳಿನಲ್ಲಿ ಭೀಕರ ಸಾಗರ ವಿಪತ್ತು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇಡೀ ಜಗತ್ತನ್ನೇ ಸಂಕಷ್ಟಕ್ಕೆ ಸಿಲುಕಿಸುವ ಅವರ ಭವಿಷ್ಯದ ಬಗ್ಗೆ ಇದೀಗ ಎಲ್ಲೆಡೆ ಆತಂಕ ಮೂಡಿದೆ. ಅವರ ಭವಿಷ್ಯವಾಣಿಯ ಪ್ರಕಾರ, ಮುಂದಿನ ಜುಲೈ ತಿಂಗಳಲ್ಲಿ ಜಪಾನ್‌ನಲ್ಲಿ ದೊಡ್ಡ ವಿಪತ್ತು ಸಂಭವಿಸಲಿದೆಯಂತೆ. ಅವರು ನುಡಿದ ಈ ಭವಿಷ್ಯದ ಬೆನ್ನಲ್ಲಿಯೇ ಜಪಾನ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಈ ತಿಂಗಳ ಅಂತ್ಯದಿಂದ ಜುಲೈ ಆರಂಭದ ನಡುವಿನ ವಿಮಾನ ಬುಕಿಂಗ್‌ಗಳು ಸಹ ಗಮನಾರ್ಹ ಕುಸಿತ ಕಂಡಿದೆ.

ರ್ಯೋ ಟಾಟ್ಸುಕಿ  ಅವರು ಮಹಾ ವಿಪತ್ತು ಸಂಭವಿಸುವ ದಿನಾಂಕ ಮತ್ತು ಸಮಯವನ್ನೂ ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ, ಜುಲೈ 5ರಂದು ಜಪಾನ್ ಮತ್ತು ಕೆಲವು ನೆರೆಯ ದೇಶಗಳಲ್ಲಿ ದೊಡ್ಡ ವಿಪತ್ತು ಸಂಭವಿಸಬಹುದು. ಈ ವಿಪತ್ತು ವ್ಯಾಪಕ ವಿನಾಶಕ್ಕೂ ಕಾರಣವಾಗಬಹುದು ಅಂತಾ ಅವರು ತಮ್ಮ ಮಂಗಾ ಪುಸ್ತಕ 'ದಿ ಪ್ಯೂಚರ್ ಐ ಸೀ'ನಲ್ಲಿ ಹೇಳಿಕೊಂಡಿದ್ದಾರೆ. ಈ ಭವಿಷ್ಯವಾಣಿಯು ಪೂರ್ವ ಏಷ್ಯಾದಲ್ಲಿ ತೀವು ಕಳವಳವನ್ನುಂಟು ಮಾಡಿದೆ. ಇದರಿಂದ ಹಾಂಗ್ ಕಾಂಗ್, ತೈವಾನ್ ಮತ್ತು ಚೀನಾದಿಂದ ಜಪಾನ್‌ಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ  50-83% ಕುಸಿತ ಕಂಡಿದೆ. ಕೆಲವು ವಿಮಾನಯಾನ ಸಂಸ್ಥೆಗಳು ಜುಲೈನಲ್ಲಿ ನಿಗದಿಯಾಗಿದ್ದ ವಿಮಾನಗಳನ್ನ ರದ್ದುಗೊಳಿಸಿವೆ.

ಇದನ್ನೂ ಓದಿ: ಭೂಮಿಯ ಮೇಲೆ ಕಾಲಿಡಲೂ ಸಹ ಈ ಜನಕ್ಕೆ ಭಯ..! ನೀರಿನಲ್ಲಿ ಹುಟ್ಟಿ, ನೀರಿನಲ್ಲಿಯೇ ಸಾಯುವ ವಿಚಿತ್ರ ಜನರಿವರು..

ಟಾಟ್ಸುಕಿಯವರ ಪುಸ್ತಕದಲ್ಲಿ ಸಮುದ್ರ ಕುದಿಯುತ್ತಿರುವ ಒಂದು ಚಿತ್ರವನ್ನ ಚಿತ್ರಿಸಲಾಗಿದೆ. ಇದು ನೀರೊಳಗಿನ ಜ್ವಾಲಾಮುಖಿ ಸ್ಪೋಟ ಅಥವಾ ಭೂಕಂಪವೆಂದು ತಜ್ಞರು ವ್ಯಾಖ್ಯಾನಿಸಿದ್ದಾರೆ. ಅವರ ಭವಿಷ್ಯವಾಣಿಯ ಪ್ರಕಾರ, ಜುಲೈ 5ರಂದು ಬೆಳಗ್ಗೆ 4.18ಕ್ಕೆ ಜಪಾನ್ ಮತ್ತು ಫಿಲಿಪೈನ್ಸ್ ನಡುವಿನ ಸಾಗರ ತಳದಲ್ಲಿ ಭೀಕರ ವಿಪತ್ತು ಸಂಭವಿಸಲಿದೆಯಂತೆ. ಇದು 2011ರಲ್ಲಿ ಸಂಭವಿಸಿದ ಸುನಾಮಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರಲಿದೆ ಎಂದು ಹೇಳಲಾಗಿದೆ. 

ಈ ಭವಿಷ್ಯವಾಣಿ ಇಡೀ ಜಗತ್ತಿನಲ್ಲಿ ದೊಡ್ಡ ಭೀತಿಯನ್ನುಂಟು ಮಾಡಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಶಾಂತವಾಗಿರುವಂತೆ ಜಪಾನ್ ಸರ್ಕಾರವು ಸಾರ್ವಜನಿಕರಿಗೆ ಮನವಿ ಮಾಡಿದೆ.  ಈ ಬಗ್ಗೆ ಮಾತನಾಡಿರುವ ಮಿಯಾಗಿ ಪ್ರಾಂತ್ಯದ ಗವರ್ನರ್ ಯೋಶಿಹಿರೊ ಮುರೈ, ʼಆಧಾರರಹಿತ ವದಂತಿಗಳಿಂದ ಆತಂಕಗೊಳ್ಳದಂತೆ ನಾಗರಿಕರಲ್ಲಿ ಕೋರಿಕೊಂಡಿದ್ದಾರೆ. ಸರ್ಕಾರ ಮತ್ತು ವೈಜ್ಞಾನಿಕ ತಜ್ಞರು ಟಾಟ್ಸುಕಿಯವರ ಭವಿಷ್ಯವಾಣಿ ನಿಜವಾಗುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲವೆಂದು ಹೇಳಿದ್ದಾರೆ.   

ಇದನ್ನೂ ಓದಿ: ಮೌಂಟ್ ಎವರೆಸ್ಟ್ ಹತ್ತಿರ ಕಾಣಿಸಿಕೊಂಡ 9 ಕಾಳಿಂಗ ಸರ್ಪಗಳು..! ಅಪಾಯದಲ್ಲಿ ಹಿಮಾಲಯ...!

ಬಾಬಾ ವಂಗಾ ಯಾರು?

ಬಲ್ಗೇರಿಯಾದ ಬಾಬಾ ವಂಗಾ ಅವರು ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿದಿದ್ದಾರೆ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೇವಾ ಸುರ್ಚೆವಾ (Vangeliya Pandeva Surcheva) ಎಂದು. ತಮ್ಮ 12ನೇ ವಯಸ್ಸಿನಲ್ಲಿ ಚಂಡಮಾರುತದಿಂದ ಅವರು ದೃಷ್ಟಿ ಕಳೆದುಕೊಂಡಿದ್ದರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಪ್ರಪಂಚದಲ್ಲಿ ಏನೇನಾಗಲಿದೆ ಅನ್ನೋದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಅವರು ಪುಸ್ತಕ ಬರೆದು ಕೊನೆಯುಸಿರೆಳೆದಿದ್ದಾರೆ. ಇದೀಗ ರ್ಯೋ ಟಾಟ್ಸುಕಿ ಅವರನ್ನ ಜಪಾನ್‌ನ ಬಾಬಾ ವಂಗಾ ಎಂದು ಕರೆಯಲಾಗುತ್ತಿದೆ.

ಟಾಟ್ಸುಕಿ ಹೇಳಿರುವ ಅನೇಕ ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವಾಗಿವೆ. ಟಾಟ್ಸುಕಿಯವರು ಕನಸಿನಲ್ಲಿ ಏನೇ ಕಂಡರೂ ಅದು ನಿಜವಾಗುತ್ತೆ ಅಂತಾ ಹೇಳಲಾಗುತ್ತದೆ. ರಾಜಕುಮಾರಿ ಡಯಾನಾ, ಗಾಯಕ ಫೊಡ್ಡಿ ಮರ್ಕ್ಯುರಿ ಅವರ ಮರಣದ ಬಗ್ಗೆ ಟಾಟ್ಸುಕಿ ಭವಿಷ್ಯ ನುಡಿದಿದ್ದರು. ಈ ಘಟನೆಗಳು ನಿಜವಾಯಿತು. 1999ರಲ್ಲಿ ತಮ್ಮ ಪುಸ್ತಕದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದರು. ಇದು 2020ರಲ್ಲಿ ನಿಜವಾಗಿದೆ. ಈ ಕೊರೊನಾ ಮಾರಕ ರೋಗವು 2030ರಲ್ಲಿ ಮತ್ತೊಮ್ಮೆ ಬರಲಿದೆ. ಈ ವೇಳೆ ಜಗತ್ತಿನಲ್ಲಿ ಭೀಕರ ವಿನಾಶ ಉಂಟಾಗಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News