close

News WrapGet Handpicked Stories from our editors directly to your mailbox

ಕಾಶ್ಮೀರ ಗಡಿಯಲ್ಲಿ ಗುಂಡಿನ ಕಾಳಗ: ಪಾಕಿಸ್ತಾನದ 3, ಭಾರತದ 5 ಯೋಧರ ಸಾವು

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ಗುಂಡಿನ ದಾಳಿಯನ್ನು ಹೆಚ್ಚಿಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ.

Reuters | Updated: Aug 15, 2019 , 07:02 PM IST
ಕಾಶ್ಮೀರ ಗಡಿಯಲ್ಲಿ ಗುಂಡಿನ ಕಾಳಗ: ಪಾಕಿಸ್ತಾನದ 3, ಭಾರತದ 5 ಯೋಧರ ಸಾವು

ಇಸ್ಲಾಮಾಬಾದ್: ಕಾಶ್ಮೀರ ಪ್ರದೇಶದಲ್ಲಿ ಗಡಿ ಭಾಗದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪಾಕಿಸ್ತಾನಿ ಸೈನಿಕರು ಮತ್ತು ಐವರು ಭಾರಿಯ ಯೋಧರು ಸಾವನಪ್ಪಿದ್ದಾರೆ ಎಂದು ಪಾಕಿಸ್ತಾನ  ಗುರುವಾರ ತಿಳಿಸಿದೆ.  

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ಗುಂಡಿನ ದಾಳಿಯನ್ನು ಹೆಚ್ಚಿಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಪಾಕಿಸ್ತಾನ ಸಶಸ್ತ್ರ ಪಡೆಗಳ ಮುಖ್ಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಬಾಹುಳ್ಯ ಪ್ರದೇಶವಾದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.