ಈತ 'ಜೀವಂತ ಭೂತ'..! 2.21 ಲಕ್ಷ ರೂ. ಖರ್ಚು ಮಾಡಿ ಈ ಅವತಾಕ್ಕೆ ಬಂದ.. ಕೊನೆಗೂ ಆಗಿದ್ದೇ ಬೇರೆ.. 

Live Devil : "ರುಚಿ ನಾಲಿಗೆಗೆ, ಬುದ್ಧಿಶಕ್ತಿ ತಲೆಬುರುಡೆಗೆ" ಅಂತ ಹಿರಿಯರು ಈ ಗಾದೆಯನ್ನು ಸುಮ್ಮನೆ ಹೇಳಿರಲಿಕ್ಕಿಲ್ಲ..! ಹುಚ್ಚುತನ ತಲೆಗೆ ಏರಿದಾಗ ವ್ಯಕ್ತಿ ಏನಾದರೂ ಮಾಡ್ತಾನೆ ಎನ್ನುವುದಕ್ಕೆ ಈತನೇ ನಿದರ್ಶನ. ಸುಂದರವಾಗಿದ್ದ ಈತ ಇದೀಗ ಚಿತ್ರ ವಿಚಿತ್ರವಾಗಿದ್ದಾನೆ. ಅದಕ್ಕಾಗಿಯೇ ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದಾನೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Mar 27, 2025, 08:12 PM IST
    • ಹುಚ್ಚುತನ ತಲೆಗೆ ಏರಿದಾಗ ವ್ಯಕ್ತಿ ಏನಾದರೂ ಮಾಡ್ತಾನೆ ಎನ್ನುವುದಕ್ಕೆ ಈತನೇ ನಿದರ್ಶನ.
    • ಸುಂದರವಾಗಿದ್ದ ಈತ ಇದೀಗ ಚಿತ್ರ ವಿಚಿತ್ರವಾಗಿದ್ದಾನೆ. ಅದಕ್ಕಾಗಿಯೇ ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದಾನೆ..
    • ಹಚ್ಚೆ ಮತ್ತು ದೇಹದ ಮಾರ್ಪಾಡುಗಳ ಮೇಲಿನ ಉತ್ಸಾಹದಿಂದಾಗಿ ಸಂಪೂರ್ಣ ನೋಟವನ್ನು ಪರಿವರ್ತಿಸಿಕೊಂಡಿದ್ದಾನೆ.
ಈತ 'ಜೀವಂತ ಭೂತ'..! 2.21 ಲಕ್ಷ ರೂ. ಖರ್ಚು ಮಾಡಿ ಈ ಅವತಾಕ್ಕೆ ಬಂದ.. ಕೊನೆಗೂ ಆಗಿದ್ದೇ ಬೇರೆ.. 

Viral News : ಬ್ರೆಜಿಲ್ ನಿವಾಸಿ ಪೆಡ್ರೊ ಹೆನ್ರಿಕ್ ಸಿಲ್ವಾ ಡಾಸ್ ಸ್ಯಾಂಟೋಸ್ ಹಚ್ಚೆ ಮತ್ತು ದೇಹದ ಮಾರ್ಪಾಡುಗಳ ಮೇಲಿನ ಉತ್ಸಾಹದಿಂದಾಗಿ ತನ್ನ ಸಂಪೂರ್ಣ ನೋಟವನ್ನು ಪರಿವರ್ತಿಸಿಕೊಂಡಿದ್ದಾನೆ. ಇವನನ್ನು 'ಜೀವಂತ ದೆವ್ವ' ಎಂದು ಜನ ಕರೆಯುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೆಡ್ರೊ ಸಂತೋಷದ ಜೀವನ ನಡೆಸುತ್ತಿದ್ದಾನೆ.

Add Zee News as a Preferred Source

31 ವರ್ಷದ ಎರಡು ಮಕ್ಕಳ ತಂದೆ ಪೆಡ್ರೊ, ಇತ್ತೀಚೆಗೆ ಸಿಲಿಕೋನ್ ಕಸಿ ಮೂಲಕ ತಲೆಯ ಮೇಲೆ ಕೊಂಬುಗಳನ್ನು ಬೆಳೆಸಿಕೊಂಡಿದ್ದಾನೆ. ಇದು ತುಂಬಾ ನೋವಿನ ಪ್ರಕ್ರಿಯೆಯಾಗಿದ್ದರೂ ಸಹ ತಮಗೆ ಖುಷಿ ತಂದಿತು ಅಂತ ಪೆಡ್ರೊ ಹೇಳಿಕೊಂಡಿದ್ದಾನೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೆಡ್ರೊನ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ:ನಾನು ಅವನನ್ನೇ ಮದುವೆ ಆಗಬೇಕು ಅನ್ಕೊಂಡಿದ್ದೆ, ಪ್ರೀತಿಯಲ್ಲಿ ಮೋಸ ಹೋದೆ: ನಟಿ ನಮ್ರತಾ ಗೌಡ

ಪೆಡ್ರೊ ಎಂಟು ವರ್ಷಗಳ ಹಿಂದೆ ತನ್ನ ದೇಹದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದ. ಈಗ ತನ್ನ ನೋಟವನ್ನು ತಲೆಯಿಂದ ಪಾದದವರೆಗೆ ಹಚ್ಚೆ ಹಾಕಿಸಿಕೊಳ್ಳುವ ಹಂತಕ್ಕೆ ಬದಲಾಯಿಸಿಕೊಂಡಿದ್ದಾನೆ. ಅತ್ಯಂತ ನೋವಿನ ಸಂಗತಿ ಅಂದರೆ, ತುಟಿಗಳು ಮತ್ತು ನಾಲಿಗೆಯನ್ನು ಎರಡು ಭಾಗಗಳಾಗಿ ಕತ್ತರಿಸಿಕೊಂಡಿರುವುದು..

ಪತ್ನಿ ವನೆಸ್ಸಾ ಮೆಂಡೆಸ್ ಡಾಸ್ ಸ್ಯಾಂಟೋಸ್ ಮತ್ತು ಅವರ ಮಕ್ಕಳಾದ ಮೈಕೆಲಿ ಮತ್ತು ಪಿಯೆಟ್ರೊ ಪೆಡ್ರೊ ಅವರ ಈ ಮಾರ್ಪಾಡಿಗೆ ತುಂಬಾ ಬೆಂಬಲ ನೀಡುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ ಜನ ಏನೇ ಅಂದರೂ ತಲೆಕೆಡಿಸಿಕೊಳ್ಳಲ್ಲ. ದೇಹ ರೂಪಾಂತರ ಪ್ರಕ್ರಿಯೆಯನ್ನು ಮುಂದುವರೆಸಿರುವ ಪೆಡ್ರೋ ಇಲ್ಲಿಯವರೆಗೆ ಸುಮಾರು 2,000 ಪೌಂಡ್‌ಗಳು (ಅಂದರೆ ಸುಮಾರು 2.21 ಲಕ್ಷ ರೂ.) ಖರ್ಚು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News