Man Affair 5 Woman London: ಯಾವುದೇ ಒಂದು ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ. ನಂಬಿಕೆ ಕಳೆದು ಹೋದರೆ ಅಂತರ ಹೆಚ್ಚಾಗತೊಡಗುತ್ತದೆ. ಇನ್ನೂ ಅನೇಕ ಜನರು ದಾಂಪತ್ಯ ದ್ರೋಹವನ್ನು ಎಸಗುತ್ತಾರೆ ಮತ್ತು ಒಂದು ಸಂಬಂಧದಲ್ಲಿದ್ದುಕೊಂಡೆ ಬೇರೆ ಸಂಬಂಧಗಳನ್ನೂ ಕೂಡ ಬೆಳೆಸುತ್ತಾರೆ. ಇಂಥದ್ದೊಂದು ಪ್ರಕರಣ ಇಂಗ್ಲೆಂಡ್‌ (England) ನಿಂದ (AffairIn Realtionship) ಬೆಳಕಿಗೆ ಬಂದಿದೆ. ಅಲ್ಲಿನ ವ್ಯಕ್ತಿಯೊಬ್ಬ ಏಕಕಾಲಕ್ಕೆ 5 ಮಹಿಳೆಯರೊಂದಿಗೆ ಪ್ರೀತಿಯ ಚೆಲ್ಲಾಟವಾಡಿದ್ದಾನೆ. ಅವರಲ್ಲಿ ಒಬ್ಬಳು ಆ ವ್ಯಕ್ತಿಯ ಗರ್ಲ್ ಫ್ರೆಂಡ್ ಆಗಿದ್ದಾಳೆ.

COMMERCIAL BREAK
SCROLL TO CONTINUE READING

ಗರ್ಲ್ ಫ್ರೆಂಡ್ ಬೆನ್ನ ಹಿಂದೆ 4 ಮಹಿಳೆಯರ ಜೊತೆಗೆ ಚಕ್ಕರ್
'ಡೈಲಿ ಮೇಲ್' ಸುದ್ದಿ ಪ್ರಕಾರ, ತನ್ನ ಬಾಯ್ ಫ್ರೆಂಡ್ ಇತರ 4 ಮಹಿಳೆಯರೊಂದಿಗೆ ಅಕ್ರಮ ಸಂಬಂಧ (How To Deal With Affair In Relationship) ಹೊಂದಿದ್ದಾನೆ ಎಂದು ತಿಳಿದ ಹುಡುಗಿಗೆ ಆಘಾತವಾಗಿದೆ. 27ರ ಹರೆಯದ ಯುವತಿ ತನ್ನ ಮಾಜಿ ಗೆಳೆಯನ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾಳೆ. ಕಳೆದ 6 ತಿಂಗಳಿಂದ ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹುಡುಗಿ ಹೇಳಿದ್ದಾಳೆ. ಇದೀಗ ಆಕೆಯ ಬಾಯ್ ಫ್ರೆಂಡ್ ಕೂಡ ಆಕೆಯ ಬೆನ್ನ ಹಿಂದೆಯೇ ಇತರ ನಾಲ್ವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುದು ಆಕೆಗೆ ತಿಳಿದುಬಂದಿದೆ.


ಇದನ್ನೂ ಓದಿ-Lion Buffalo Fight Video - ಸಿಂಹಕ್ಕೆ ದುಸ್ವಪ್ನವಾಗಿ ಪರಿಣಮಿಸಿದ ಕಾಡುಕೋಣದ ಜೊತೆಗಿನ ಕಾದಾಟ

ಆದರೆ, ಆಕೆಯ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದ ಎಲ್ಲಾ ಮಹಿಳೆಯರು, ಯಾವುದೋ ಒಂದು ರೀತಿಯಲ್ಲಿ ಹುಡುಗಿಗೆ ಪರಿಚಯಸ್ತರಾಗಿದ್ದಾರೆ. ಆ ನಾಲ್ವರು ಮಹಿಳೆಯರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ಯುವತಿಗೆ ಸತ್ಯ ಸಂಗತಿ ತಿಳಿದಿದೆ.


ಇದನ್ನೂ ಓದಿ-'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ

ತನ್ನ ಗೆಳೆಯ ತನಗೆ ಹಾಗೂ ನಾಲ್ವರಿಗೆ ಮಾಡುತ್ತಿರುವ ಮೋಸದ ಕುರಿತು ಯುವತಿ ಇತರ ನಾಲ್ವರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಎಲ್ಲರು ಸೇರಿ ಆ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಐವರು ಒಟ್ಟಿಗೆ ಹೋಗಿ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ, ಆತ ಕ್ಷಮೆಕೊರಲು ಆರಂಭಿಸಿದ್ದಾನೆ. ಆದರೆ, ಐವರು ಯುವತಿಯರು ಒಟ್ಟಿಗೆ ಯುವಕನ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು, ಇದೀಗ ಐವರು ಯುವತಿಯರು ಸ್ನೇಹಿತರಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.