)
Philippines Earthquake Tsunami: ಶುಕ್ರವಾರ(ಅಕ್ಟೋಬರ್ 10) ದಕ್ಷಿಣ ಫಿಲಿಪೈನ್ಸ್ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಆದಾಗ್ಯೂ, ಭೂಕಂಪದಿಂದಾದ ಸಾವುನೋವುಗಳು ಅಥವಾ ಹಾನಿಯ ಬಗ್ಗೆ ಯಾವುದೇ ತಕ್ಷಣದ ವರದಿಗಳು ಲಭ್ಯವಾಗ್ಬಿದೆ. ಇನ್ನೂ ಫಿಲಿಪೈನ್ಸ್ ಭೂಕಂಪದ ಬಗ್ಗೆ ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ದೃಢಪಡಿಸಿದ್ದು, ಪ್ರಬಲ ಭೂಕಂಪದಿಂದಾಗಿ ಕೆಲವು ಭಾಗಗಳಲ್ಲಿ ಸುನಾಮಿ ಸಾಧ್ಯತೆ ಬಗ್ಗೆ ಭವಿಷ್ಯ ನುಡಿದಿದೆ.
ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯು (Phivolcs) ಮಿಂಡನಾವೊದ ದಾವೊ ಓರಿಯೆಂಟಲ್ನಲ್ಲಿರುವ ಮನಯ್ ಪಟ್ಟಣದಲ್ಲಿ 10ಕಿಮೀ ಆಳದಲ್ಲಿ ಈ ಪ್ರಬಲ ಭೂಕಂಪದ ಕೇಂದ್ರ ಬಿಂದು ಇರುವುದನ್ನು ವರದಿ ಮಾಡಿದೆ.
#EarthquakePH #EarthquakeDavaoOriental
Earthquake Information No.1
Date and Time: 10 October 2025 - 12:02 PM
Magnitude = 3.5
Depth = 003 km
Location = 07.15°N, 126.98°E - 049 km S 83° E of Manay (Davao Oriental)https://t.co/i2dhaL6VE0 pic.twitter.com/MsP8HXv4R9— PHIVOLCS-DOST (@phivolcs_dost) October 10, 2025
ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಭೂಕಂಪದ ತೀವ್ರತೆ 7.4 ರಷ್ಟಿದ್ದು, ಅದರ ಆಳ 58 ಕಿ.ಮೀ (36 ಮೈಲುಗಳು) ಎಂದು ತಿಳಿಸಿದೆ.
ಭೂಕಂಪದ ಸಂಭವನೀಯ ಹಾನಿಗಳ ಬಗ್ಗೆಯೂ ಫಿಲಿಪೈನ್ಸ್ ಭೂಕಂಪಶಾಸ್ತ್ರ ಸಂಸ್ಥೆ ಎಚ್ಚರಿಕೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್ನ ಕರಾವಳಿ ಪ್ರದೇಶ ಭಾಗಗಲ್ಲಿನ ನಿವಾಸಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದೆ.
ಸುನಾಮಿ ಎಚ್ಚರಿಕೆ:
ಭೂಕಂಪದ ಕೇಂದ್ರಬಿಂದುದಿಂದ 300 ಕಿಮೀ (186 ಮೈಲುಗಳು) ವ್ಯಾಪ್ತಿಯೊಳಗಿನ ಕರಾವಳಿಗಳಿಗೆ ಅಪಾಯಕಾರಿ ಅಲೆಗಳು ಏಳಬಹುದು ಎಂದಿರುವ ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಅಲರ್ಟ್ ಘೋಷಿಸಿದೆ.
ಇಂಡೋನೇಷ್ಯಾ ಮತ್ತು ಪಲಾವ್ನಲ್ಲೂ ಸುನಾಮಿ ಅಲರ್ಟ್:
ಫಿಲಿಪೈನ್ಸ್ ಕರಾವಳಿಯ ಕೆಲವು ಭಾಗಗಳಲ್ಲಿ 3 ಮೀಟರ್ ಎತ್ತರದವರೆಗೂ ಅಲೆಗಳು ಏರುವ ನಿರೀಕ್ಷೆಯಿದ್ದರೆ, ಇಂಡೋನೇಷ್ಯಾ ಮತ್ತು ಪಲಾವ್ನಲ್ಲಿ ಸಣ್ಣ ಅಲೆಗಳು ಏಳಬಹುದು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂಡೋನೇಷ್ಯಾ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರವಾದ ಪಲಾವ್ನ ಕೆಲವು ಕರಾವಳಿಗಳಲ್ಲಿ ಸುನಾಮಿ ಅಲರ್ಟ್ ನೀಡಲಾಗಿದೆ ಎಂದು ಪಿಟಿಡಬ್ಲ್ಯೂಸಿ ತಿಳಿಸಿದೆ.
ಫಿಲಿಪೈನ್ಸ್ ಪ್ರಬಲ ಭೂಕಂಪದ ಎಫೆಕ್ಟ್:
ಭೂಕಂಪ ಸಂಭವಿಸಿದಾಗ ಜನರು ಭಯಭೀತರಾಗಿದ್ದರು ಎಂದು ದಕ್ಷಿಣ ಫಿಲಿಪೈನ್ಸ್ ಪ್ರಾಂತ್ಯದ ದಾವೊ ಓರಿಯಂಟಲ್ನ ಗವರ್ನರ್ ಹೇಳಿದ್ದಾರೆ.
"ಪ್ರಬಲ ಭೂಕಂಪದಿಂದಾಗಿ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ" ಎಂದು ಎಡ್ವಿನ್ ಜುಬಾಹಿಬ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏತನ್ಮಧ್ಯೇ, ಭೂಕಂಪದಿಂದಾಗಿ ಆತಂಕಕ್ಕೆ ಒಳಗಾದ ಜನರ ಪರಿಸ್ಥಿತಿ ಹೇಗಿದ್ದು ಎಂಬುದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Patients and staff seen evacuating the Tagum City Davao Regional Medical Center in the Philippines amid intense shaking caused by magnitude 7.6 earthquake. pic.twitter.com/melwzIQdCy
— Noteworthy News (@newsnoteworthy) October 10, 2025