Model murder: ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ಮಾಡೆಲ್ ಕ್ರಿಸ್ಟಿನ್ ಜೋಕ್ಸಿಮೊವಿಕ್ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ..
ಕಳೆದ ವರ್ಷ ಪತಿಯಿಂದ ಕೊಲೆಯಾದ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ ಪ್ರಕರಣದ ಬಗ್ಗೆ ಕೆಲವು ಮಾಹಿತಿ ಹೊರಬಿದ್ದಿದೆ.. ಪಾಪಿ ಪತಿ ಥಾಮಸ್ ಪತ್ನಿಯೆಂದು ನೋಡದೆ ಮಾಡೆಲ್ ಕತ್ತುಹಿಸುಕಿ ಕೊಲೆಗೈದಿದ್ದಾನೆ. ಇದಾದ ಬಳಿಕ ತೋಟಗಾರಿಕೆಯಲ್ಲಿ ಬಳಕೆ ಮಾಡುವ ಜಿಗ್ಸಾ ಚಾಕು ಹಾಗೂ ಗರಗಸ ರೀತಿ ಮಾರಾಕಾಸ್ತ್ರವನ್ನ ಬಳಸಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆಂದು ಈಗ ವರದಿಯಾಗಿದೆ..
ಯೆಸ್..ಥಾಮಸ್ ಹಾಗೂ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ 2017ರಂದು ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಈ ಪಾಪಿ ಪತಿ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರ ದೇಹವನ್ನ ಪೀಸ್ ಪೀಸ್ ಮಾಡುವ ಮುನ್ನ ಯೂಟ್ಯೂಬ್‌ನಲ್ಲಿ ವಿಡಿಯೋವನ್ನ ನೋಡಿದ್ದ.. ಅದೇ ರೀತಿ ಮಾಸ್ಟರ್ ಪ್ಲಾನ್ ಮಾಡಿ ಪತ್ನಿಯ ಸೊಂಟದ ಕೀಲು ಮುರಿದ್ದಾನೆ.. ಇದಾದ ನಂತ್ರ ದೇಹೊಳಗಿನ ಒಂದೊಂದೆ ಅಂಗಾಂಗವನ್ನ ಹೊರತೆಗೆದಿದ್ದಾನೆ. ಅಷ್ಟೇಯಾಕೇ ಆಕೆಯ ದೇಹದಿಂದ ಗರ್ಭಕೋಶವನ್ನ ಸಹ ಹೊರತೆಗೆದಿದ್ದ ಬಳಿಕ ಆಕೆ ಬೆನ್ನು ಮೂಳೆಯನ್ನ ಕತ್ತರಿಸಿ ವಿಕೃತಿ ಮೆರೆದಿದ್ದ. ಅಂತಿಮಾವಾಗಿ ತಲೆಯನ್ನ ತುಂಡರಿಸಿದ್ದಾನೆ. ದೇಹದ ಎಲ್ಲಾ ಅಂಗಗಳನ್ನ ಬೇರ್ಪಡಿಸಿ ಕೆಮಿಕಲ್ ದ್ರಾವಣದೊಳಗೆ ಸೇರಿಸಿ ಕರಗಿಸಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ..
ಮೊದಲಿಗೆ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರ ತಂದೆ ಚೀಲವೊಂದರಲ್ಲಿ ಹೊಂಬಣ್ಣದ ಕೂದಲನ್ನ ಪತ್ತೆ ಹಚ್ಚಿದ್ದರು.. ಇದಾದ ಬಳಿಕ ಪಾಪಿ ಪತಿ ಆಕೆ ತನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಆತ್ಮರಕ್ಷಣೆಗಾಗಿ ಆಕೆಯನ್ನ ಕೊಲೆಗೈದಿರೊದಾಗಿ ಸುಳ್ಳು ಹೇಳಿದ್ದ. ಇದೀಗ ಆತನನ್ನು ಬಂಧನಗೊಳಪಡಿಸಲಾಗಿದ್ದು, ಪತ್ನಿಯನ್ನ ಬರ್ಬರವಾಗಿ ಪೀಸ್ ಪೀಸ್ ಮಾಡಿ ಕೊಲೆ ಮಾಡಿರೋದು ಮಾಹಿತಿ ಪತ್ತೆಯಾಗಿದೆ.
ಇದನ್ನೂ ಓದಿ: ಐಶ್ವರ್ಯಾ ರೈಗಾಗಿ ಕಾಯಲು ರೆಡಿ ಇದ್ದೆ ಆದ್ರೂ ಒಪ್ಪಲಿಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್









