ಈಗ ಪಾಕಿಸ್ತಾನದಲ್ಲೂ ಓಡಲಿದೆ ಮೆಟ್ರೋ!

ಪಾಕಿಸ್ತಾನದಲ್ಲಿ ಮೆಟ್ರೋ ಟ್ರಯಲ್ ರನ್ ಆರಂಭವಾಗಿದೆ. ಮೆಟ್ರೋ ಮಾರ್ಗದ ಎಲ್ಲಾ 26 ನಿಲ್ದಾಣಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಮಾರ್ಗದಲ್ಲಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಟ್ರಯಲ್ ರನ್ ಮೂರು ತಿಂಗಳವರೆಗೆ ನಡೆಯಲಿದ್ದು, ಮೂರು ತಿಂಗಳ ನಂತರ ಇದರ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Updated: Dec 11, 2019 , 10:06 AM IST
ಈಗ ಪಾಕಿಸ್ತಾನದಲ್ಲೂ ಓಡಲಿದೆ ಮೆಟ್ರೋ!
Pic courtesy: Twitter

ಲಾಹೋರ್: ಪಾಕಿಸ್ತಾನದ ಮೊದಲ ಮೆಟ್ರೋ ರೈಲಿನ ಟ್ರಯಲ್ ರನ್ ಲಾಹೋರ್ ನಗರದಲ್ಲಿ ಮಂಗಳವಾರ ಪ್ರಾರಂಭವಾಯಿತು. ಪಾಕಿಸ್ತಾನದ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆರೆಂಜ್ ಲೈನ್ ಮೆಟ್ರೊದ ಬಹುನಿರೀಕ್ಷಿತ ಟ್ರಯಲ್ ರನ್ ಅನ್ನು ಲಾಹೋರ್‌ನ ಡೇರಾ ಗುಜ್ರಾನ್ ಮತ್ತು ಅಲಿ ಟೌನ್ ನಡುವೆ ಮಂಗಳವಾರ ನಡೆಸಲಾಯಿತು. ಈ ಸಂದರ್ಭದಲ್ಲಿ ವಿದ್ಯುತ್ ರೈಲಿನಲ್ಲಿ ಪಂಜಾಬ್‌ನ ಸಾರಿಗೆ ಸಚಿವರು ಮತ್ತು ಇತರ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೆಟ್ರೋ ಮಾರ್ಗದ ಎಲ್ಲಾ 26 ನಿಲ್ದಾಣಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಮಾರ್ಗದಲ್ಲಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಟ್ರಯಲ್ ರನ್ ಮೂರು ತಿಂಗಳವರೆಗೆ ನಡೆಯಲಿದ್ದು, ಮೂರು ತಿಂಗಳ ನಂತರ ಇದರ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಲಾಹೋರ್‌ನ ಆರೆಂಜ್ ಲೈನ್ ಮೆಟ್ರೋ ಯೋಜನೆಯು ಅಂದಿನ ಮುಸ್ಲಿಂ ಲೀಗ್-ನವಾಜ್ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಯಿತು. ಇದು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿದ ಯೋಜನೆಗಳಲ್ಲಿ ಒಂದಾಗಿದೆ. ಚೀನಾದ ತಜ್ಞರು ಇದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕಾಗಿ 264 ಬಿಲಿಯನ್ ಪಾಕಿಸ್ತಾನಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗಿದೆ.

ಮೆಟ್ರೊದ ಟ್ರಯಲ್ ರನ್ ಪ್ರಾರಂಭದಲ್ಲಿ ರಾಜಕೀಯವೂ ಮೇಲುಗೈ ಸಾಧಿಸಿತು. ಒಂದು ದಿನದ ಹಿಂದೆ, ಪಾಕಿಸ್ತಾನ(Pakistan) ಮುಸ್ಲಿಂ ಲೀಗ್-ನವಾಜ್ ಸದಸ್ಯರು ಸೋಮವಾರ ಟ್ರಯಲ್ ಓಟವನ್ನು ಉದ್ಘಾಟಿಸುವ ಸಮಾರಂಭವನ್ನು ನಡೆಸಿದರು. ಇದರಲ್ಲಿ ಡ್ರಮ್ಸ್ ನುಡಿಸಲಾಯಿತು ಮತ್ತು ಸಾಂಪ್ರದಾಯಿಕ ಪಂಜಾಬಿ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಈ ಮೆಟ್ರೋ ತನ್ನ ನಾಯಕ ನವಾಜ್ ಷರೀಫ್ ಅವರಿಗೆ ಸಾರ್ವಜನಿಕರಿಗೆ ನೀಡಿದ ಉಡುಗೊರೆ ಎಂದು ಪಕ್ಷ ಹೇಳಿದೆ. ಅವರು ಅಧಿಕಾರದಲ್ಲಿಲ್ಲದಿದ್ದರೂ ಸಾರ್ವಜನಿಕರಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಅವರ ಪಕ್ಷ ಬಣ್ಣಿಸಿದೆ.

ಟ್ರಯಲ್ ರನ್ ಉದ್ಘಾಟನೆಯಲ್ಲಿ, ರಾಜಕೀಯವು ಎಷ್ಟರ ಮಟ್ಟಿಗೆ ಇತ್ತೆಂದರೆ, ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಇಮ್ರಾನ್ ಅವರ ಪೂರ್ವ ನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.