ಓಲ್ಗಾ ಟೋಕಾರ್‌ಜುಕ್, ಪೀಟರ್ ಹ್ಯಾಂಡ್ಕೆ ಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ

ಪೋಲಿಷ್ ಲೇಖಕ ಓಲ್ಗಾ ಟೋಕಾರ್‌ಜುಕ್ ಮತ್ತು ಆಸ್ಟ್ರಿಯಾದ ಲೇಖಕ ಪೀಟರ್ ಹ್ಯಾಂಡ್ಕೆ ಅವರಿಗೆ 2018 ಮತ್ತು 2019 ರ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರು ಎಂದು ಸ್ವೀಡಿಷ್ ಅಕಾಡೆಮಿ ಗುರುವಾರ ಪ್ರಕಟಿಸಿದೆ.

Last Updated : Oct 10, 2019, 05:23 PM IST
ಓಲ್ಗಾ ಟೋಕಾರ್‌ಜುಕ್, ಪೀಟರ್ ಹ್ಯಾಂಡ್ಕೆ ಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ  title=
Photo courtesy: Twitter

ನವದೆಹಲಿ: ಪೋಲಿಷ್ ಲೇಖಕ ಓಲ್ಗಾ ಟೋಕಾರ್‌ಜುಕ್ ಮತ್ತು ಆಸ್ಟ್ರಿಯಾದ ಲೇಖಕ ಪೀಟರ್ ಹ್ಯಾಂಡ್ಕೆ ಅವರಿಗೆ 2018 ಮತ್ತು 2019 ರ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರು ಎಂದು ಸ್ವೀಡಿಷ್ ಅಕಾಡೆಮಿ ಗುರುವಾರ ಪ್ರಕಟಿಸಿದೆ.

ಕಳೆದ ವರ್ಷ ಮೀಟೂ ಚಳುವಳಿಯ ಹಿನ್ನಲೆಯಲ್ಲಿ 70 ವರ್ಷದಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಸಾಹಿತ್ಯ ಪ್ರಶಸ್ತಿಯನ್ನು ಮುಂದೂಡಲಾಗಿತ್ತು,  ನೊಬೆಲ್ ಪ್ರಶಸ್ತಿ ಸಾಹಿತ್ಯ ವಿಭಾಗದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗಿದೆ. ಈ ಪ್ರಶಸ್ತಿಯನ್ನು 1901 ರಿಂದ 114 ಜನರಿಗೆ ನೀಡಲಾಗಿದೆ, ಅದರಲ್ಲಿ ಕೇವಲ 14 ಮಹಿಳೆಯರು ಸೇರಿದ್ದಾರೆ.

2017 ರ ನವೆಂಬರ್‌ನಲ್ಲಿ ಈ ಹಗರಣವು 18 ಅಕಾಡೆಮಿ ಸದಸ್ಯರಲ್ಲಿ ಒಬ್ಬರಾದ ಸ್ವೀಡಿಷ್ ಕವಿಯತ್ರಿ ಕಟಾರಿನಾ ಫ್ರಾಸ್ಟೆನ್ಸನ್ ತನ್ನ ಪತಿ ಜೀನ್-ಕ್ಲೌಡ್ ಅರ್ನಾಲ್ಟ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪ ಬಂದ ನಂತರ ಅವರು ರಾಜಿನಾಮೆ ನೀಡಿದ್ದರು. ನಂತರ ಆತನನ್ನು ಅಪರಾಧಿ ಎಂದು ಆರೋಪಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಕಟಾರಿನಾ ಫ್ರಾಸ್ಟೆನ್ಸನ್ ಅವರ ರಾಜೀನಾಮೆಯ ನಂತರ ಆಗಿನ ಖಾಯಂ ಕಾರ್ಯದರ್ಶಿ ಸಾರಾ ಡೇನಿಯಸ್ ಸೇರಿದಂತೆ ಇತರ ಆರು ಸದಸ್ಯರು ರಾಜೀನಾಮೆ ನೀಡಿದ್ದರು.  

Trending News