ರಾಜಕೀಯದಲ್ಲಿ ಕ್ಷೀಣಿಸುತ್ತಿದೆ ಮಹಿಳೆಯರ ಸಂಖ್ಯೆ, ವಿಶ್ವದಲ್ಲಿ ಕೇವಲ 7% ನಾಯಕಿಯರು!

ಕಳೆದ ವಾರ ಬಿಡುಗಡೆಯಾದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಅಂಕಿ ಅಂಶಗಳ ಪ್ರಕಾರ, ಮಹಿಳಾ ಚುನಾಯಿತ ಮುಖ್ಯಸ್ಥರ ಶೇಕಡಾವಾರು ಪ್ರಮಾಣವು 7.2% ರಿಂದ 6.6% ಕ್ಕೆ ಇಳಿದಿದೆ.

Last Updated : Mar 13, 2019, 02:09 PM IST
ರಾಜಕೀಯದಲ್ಲಿ ಕ್ಷೀಣಿಸುತ್ತಿದೆ ಮಹಿಳೆಯರ ಸಂಖ್ಯೆ, ವಿಶ್ವದಲ್ಲಿ ಕೇವಲ 7% ನಾಯಕಿಯರು! title=

ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಮಾತ್ರ ಪರಿಸ್ಥಿತಿ ಬೇರೆಯೇ ಇದೇ. ವಿಶ್ವಾದ್ಯಂತ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರ ಸಂಖ್ಯೆ ಇಳಿಮುಖವಾಗಿದೆ ಎಂಬ ವಿಷಯ ಇತ್ತೀಚೆಗೆ ಬಿಡುಗಡೆಯಾದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.

ಯು.ಎನ್. ಜನರಲ್ ಅಸೆಂಬ್ಲಿ ಅಧ್ಯಕ್ಷ ಮರಿಯಾ ಫೆರ್ನಂದಾ ಎಸ್ಪಿನೊಸಾ ಅವರು ಮಂಗಳವಾರ ಮಹಿಳಾ ಸ್ಥಾನಮಾನದ ಬಗ್ಗೆ ಆಯೋಗಕ್ಕೆ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ವಲಯದಲ್ಲಿ ಮಹಿಳೆಯರ ಸಂಖ್ಯೆ ವಿಶ್ವದಲ್ಲೇ ಇಳಿಮುಖವಾಗಿದೆ ಎಂದಿದ್ದಾರೆ.

ಕಳೆದ ವಾರ ಬಿಡುಗಡೆಯಾದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಅಂಕಿ ಅಂಶಗಳ ಪ್ರಕಾರ, ಮಹಿಳಾ ಚುನಾಯಿತ ಮುಖ್ಯಸ್ಥರ ಶೇಕಡಾವಾರು ಪ್ರಮಾಣವು 7.2% ರಿಂದ 6.6% ಕ್ಕೆ ಇಳಿದಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

"ಕೆಲವು ಸಕಾರಾತ್ಮಕ ಆಂದೋಲನಗಳ ಹೊರತಾಗಿಯೂ, ಅಭೂತಪೂರ್ವವಾಗಿ ಸರ್ಕಾರದ ಹೆಚ್ಚಿನ ನಾಯಕರು ಪುರುಷರೇ ಇದ್ದಾರೆ" ಎಂದು ಇಂಟರ್-ಪಾರ್ಲಿಮೆಂಟರಿ ಯೂನಿಯನ್ ಮುಖ್ಯಸ್ಥ ಗಾಬ್ರಿಯೆಲಾ ಕ್ಯುವಾಸ್ ಬ್ಯಾರನ್ ಹೇಳಿದರು.

ಸಂಸತ್ತಿನಲ್ಲಿ, ಮಹಿಳೆಯರ ಜಾಗತಿಕ ಪಾಲು 2017 ರಿಂದ 2018 ರವರೆಗೆ ಸುಮಾರು ಒಂದು ಶೇಕಡಾ ಪಾಯಿಂಟ್ನಿಂದ 24.3% ನಷ್ಟು ಹೆಚ್ಚಾಗಿದೆ. ಆದರೆ ಕ್ಯುವಾಸ್ ಪತ್ರಿಕಾಗೋಷ್ಠಿಯಲ್ಲಿ 1995 ರಲ್ಲಿ ಅದು 11% ರಿಂದ ಆ ಮಟ್ಟಕ್ಕೆ ತಲುಪಲು 25 ವರ್ಷ ತೆಗೆದುಕೊಂಡಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಮಹಿಳಾ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಫುಜಿಲ್ಲೆ ಮಲಾಂಬೊ ನಾಗಕುಕ ಅವರು ಈಗಿನ ಪರಿಸರವು "ಮಹಿಳೆಯರ ಉನ್ನತಿಗಾಗಿ ಪ್ರೋತ್ಸಾಹಿಸುವುದಿಲ್ಲ" ಎಂದು ಬಣ್ಣಿಸಿದ್ದಾರೆ.

ಮಹಿಳಾ ಅಭ್ಯರ್ಥಿಗಳ ವಿರುದ್ಧ ರಾಜಕೀಯ ಹಿಂಸಾಚಾರ, ಮೌಖಿಕ ದಾಳಿ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗದ ಬಗ್ಗೆ ಅನೇಕ ದೇಶಗಳಲ್ಲಿನ ನಾಯಕರನ್ನು ಅವರು ಉದಾಹರಿಸಿದರು.
 

Trending News