ಅಮೇರಿಕ ಧ್ವಜದ ಚಿತ್ರಕ್ಕೆ ತಪ್ಪಾಗಿ ಬಣ್ಣ ಹಚ್ಚಿದ ಡೊನಾಲ್ಡ್ ಟ್ರಂಪ್! ಟೀಕಿಸಿದ ಟ್ವಿಟ್ಟಿಗರು

ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಪೊಟಸ್ ಅವರು ಓಹಿಯೊದ ಕೊಲಂಬಸ್ನ ನೇಷನ್ವೈಡ್ ಚಿಲ್ಡ್ರನ್ಸ್ ಹಾಸ್ಪಿಟಲ್ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

Updated: Aug 27, 2018 , 02:35 PM IST
ಅಮೇರಿಕ ಧ್ವಜದ ಚಿತ್ರಕ್ಕೆ ತಪ್ಪಾಗಿ ಬಣ್ಣ ಹಚ್ಚಿದ ಡೊನಾಲ್ಡ್ ಟ್ರಂಪ್! ಟೀಕಿಸಿದ ಟ್ವಿಟ್ಟಿಗರು

ಅಮೇರಿಕಾ ಬಾವುಟಕ್ಕೆ ತಪ್ಪಾಗಿ ಬಣ್ಣ ಹಚ್ಚುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರ್ಯಾಪ್ ಅವರ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದ ಬಾವುಟದಲ್ಲಿ 13 ಪರ್ಯಾಯ ಕೆಂಪು ಮತ್ತು ಬಿಳಿ ಪಟ್ಟೆಗಳನ್ನು ಭರ್ತಿಮಾಡುವ ಬದಲು ಅಮೆರಿಕದ ಸ್ಟಾರ್-ಸ್ಪಾಂಗಲ್ಡ್ ಬ್ಯಾನರ್ನ ಬಾಹ್ಯರೇಖೆಗೆ ನೀಲಿ ಬಣ್ಣದ ಪಟ್ಟೆಯನ್ನು ಸೇರಿಸುವ ಮೂಲಕ ಅಮೇರಿಕಾ ಧ್ವಜಕ್ಕೆ ಬಣ್ಣ ಹಚ್ಚಿದ್ದರು. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಪೊಟಸ್ ಅವರು ಓಹಿಯೊದ ಕೊಲಂಬಸ್ನ ನೇಷನ್ವೈಡ್ ಚಿಲ್ಡ್ರನ್ಸ್ ಹಾಸ್ಪಿಟಲ್ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

ಅಮೇರಿಕಾದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಕಾರ್ಯದರ್ಶಿ ಅಲೆಕ್ಸ್ ಅಜರ್ ಅವರು ಆಸ್ಪತ್ರೆಯಲ್ಲಿ ಯುಎಸ್ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್ ಜೊತೆಗೆ ಅಮೆರಿಕಾದ ಧ್ವಜಕ್ಕೆ ಬಣ್ಣ ಹಚ್ಚುತ್ತಿರುವ ಡೊನಾಲ್ಡ್ ಟ್ರಂಪ್ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. 

"ಸ್ಥಳೀಯ ಸಮುದಾಯಗಳಿಗೆ ಒಪಿಯಾಡ್ ಸಮಸ್ಯೆ ನಿವಾರಣೆಗೆ ಪೂರ್ಣ ಪ್ರಮಾಣದ ಸಹಾಯ ಮಾಡುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಒಪಿಯಾಯಿಡ್ ವ್ಯಸನಕ್ಕೆ ರಾಜ್ಯಗಳು ಮತ್ತು ಸಮುದಾಯಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂದು ತಿಳಿದುಕೊಳ್ಳಲು ನಾನು ಓಹಿಯೋದಲ್ಲಿ @POTUS & @FLOTUSಗೆ ಸೇರಿದ್ದೇನೆ" ಎಂದು ಅಲೆಕ್ಸ್ ಟ್ವೀಟ್ ಮಾಡಿದ್ದಾರೆ.

ಆದರೆ, ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ತಪ್ಪಾಗಿ ಬಣ್ಣ ಹಚ್ಚಿರುವ ಬಾವುತವನ್ನು ಗುರುತಿಸಿದ ಟ್ವಿಟ್ಟಿಗರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಾಗಿ ದ್ವಜಕ್ಕೆ ಬಣ್ಣ ಹಚ್ಚಿದ್ದಾರೆ" ಎಂದು ಟೀಕಿಸಿದ್ದಾರೆ.

ಆದರೆ ಇದನ್ನು ಮತ್ತೊಂದು ರೀತಿಯಲ್ಲಿ ಹೇಳಲೆತ್ನಿಸಿದ ಟ್ವೀಟಿಗರು, ಡೊನಾಲ್ಡ್ ಟ್ರಂಪ್ ಅವರು ಬಿಳಿ, ನೀಲಿ ಮತ್ತು ಕೆಂಪು ಬಣ್ಣದ ಗೆರೆಗಳಿರುವ ರಷ್ಯಾದ ಬಾವುಟವನ್ನು ಚಿತ್ರಿಸಲು ಪ್ರಯತ್ನಿಸಿದ್ದರು ಎಂದಿದ್ದಾರೆ.