Operation Sindoor: ಪಾಕಿಸ್ತಾನ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ಏರ್‌ಸ್ಟ್ರೈಕ್‌ ಬಗ್ಗೆ ಚೀನಾ ಶಾಕಿಂಗ್ ಹೇಳಿಕೆ...

Operation Sindoor: ಪಹಲ್ಗಾಮ್‌ನಲ್ಲಿ ನಡೆದ ಭೀಕರ ನರಮೇಧಕ್ಕೆ ಭಾರತೀಯ ಸೇನೆ ತೀಕ್ಷ್ಣ ಉತ್ತರ ನೀಡಿದೆ. ಏತನ್ಮಧ್ಯೆ, ಪಾಕಿಸ್ತಾನದ ಭಯೋತ್ಪಾದಕ ತಾಣಗಳ ಮೇಲೆ ಭಾರತದ ವಾಯುದಾಳಿ ಕುರಿತಂತೆ ಇದೀಗ ಚೀನಾ ಆಘಾತಕಾರಿ ಹೇಳಿಕೆಯನ್ನು ನೀಡಿದೆ. 

Written by - Yashaswini V | Last Updated : May 7, 2025, 11:26 AM IST
  • ಪಾಕಿಸ್ತಾನದ ನೆಲೆಯಲ್ಲಿ ಭಾರತದ ಏರ್‌ಸ್ಟ್ರೈಕ್‌
  • ಭಾರತದ ಸೇನಾ ಕಾರ್ಯಾಚರಣೆ ವಿಷಾದನೀಯ ಎಂದ ಚೀನಾ
  • ಭಾರತ-ಪಾಕಿಸ್ತಾನದ ನಡುವೆ ಚೀನಾದ ಬೆಂಬಲ ಯಾರಿಗೆ ಗೊತ್ತಾ....
Operation Sindoor: ಪಾಕಿಸ್ತಾನ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ಏರ್‌ಸ್ಟ್ರೈಕ್‌ ಬಗ್ಗೆ ಚೀನಾ ಶಾಕಿಂಗ್ ಹೇಳಿಕೆ...

Operation Sindoor: ಭಾರತದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025ರಂದು 26 ಅಮಾಯಕ ನಾಗರೀಕರ ಮೃತ್ಯುವಿಗೆ ಕಾರಣವಾದ ಮಾರಕ ಭಯೋತ್ಪಾದಕ ದಾಳಿಗೆ ತಿರುಗೇಟು ನೀಡಿರುವ ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯಾಡಿದ್ದ 9 ಭಯೋತ್ಪಾದಕ ತಾಣಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದೆ. ಇದರ ಬೆನ್ನಲ್ಲೆ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಏತನ್ಮಧ್ಯೆ, ಚೀನಾದಿಂದ ಆಘಾತಕಾರಿ ಹೇಳಿಕೆಯೊಂದು ಹೊರಬಿದ್ದಿದೆ. 

Add Zee News as a Preferred Source

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳ ಮೇಲೆ ಭಾರತದ ಏರ್‌ಸ್ಟ್ರೈಕ್‌ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚೀನಾ ಉಭಯ ದೇಶಗಳನ್ನು ಶಾಂತವಾಗಿರುವಂತೆ ಒತ್ತಾಯಿಸಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಈ ಕುರಿತಂತೆ ಮಾತನಾಡಿದ್ದು, 'ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ'. ಬೀಜಿಂಗ್ ಮಿಲಿಟರಿ ಕ್ರಮವನ್ನು ವಿಷಾದಕರವೆಂದು ಪರಿಗಣಿಸುತ್ತದೆ. ಈ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ. 

ಇದನ್ನೂ ಓದಿ- Operation Sindoor Live Updates: ಭಾರತೀಯ ಸೇನೆ ಟಾರ್ಗೆಟ್ ಮಾಡಿದ ಉಗ್ರರ ನೆಲೆಗಳು ಯಾವವು? ಭಾರತೀಯ ನಾಗರಿಕರ ಮೇಲೆ ಪಾಕ್‌ ಸೇನೆಯ ದಾಳಿ 

ಭಾರತ ಪಾಕಿಸ್ತಾನಕ್ಕೆ ಚೀನಾ ಕೂಡ ನೆರೆಹೊರೆಯ ಪ್ರದೇಶವಾಗಿದೆ. ಭಯೋತ್ಪಾದನೆಯನ್ನು ವಿರೋಧಿಸುಯ ಚೀನಾ ಶಾಂತಿ ಮತ್ತು ಸ್ಥಿರತೆಯಲ್ಲಿ ಹಿತಾಸಕ್ತಿಯನ್ನು ಹೊಂದಿದೆ. ಉಭಯ ದೇಶಗಳು ಶಾಂತವಾಗಿರುವಂತೆ, ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸದಂತೆ ಒತ್ತಾಯಿಸುತ್ತೇವೆ ಎಂದು ಚೀನಾ ವಿದೇಶಾಂಗ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ. 

ಸಂಘರ್ಷವೂ ಭಾರತ ಮತ್ತು ಪಾಕಿಸ್ತಾನದ ಮೂಲಭೂತ ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವುದಿಲ್ಲ. ಚೀನಾವು ಬೆಳವಣಿಗೆಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಚೀನಾ ತಿಳಿಸಿದೆ. 

ಇದನ್ನೂ ಓದಿ- Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್‌ಡ್ರಿಲ್; ಏನೇನು ನಡೆಯುತ್ತೆ

ಪಾಕಿಸ್ತಾನಕ್ಕೆ ಬೆಂಬಲ: 
ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ಕಾನೂನುಬದ್ಧ ಭದ್ರತಾ ಕಾಳಜಿಗಳನ್ನು ಚೀನಾ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಎಂದಿರುವ ಚೀನಾ, ತನ್ನ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ತಮ್ಮ ಆಪ್ತ ಮಿತ್ರ ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News