Viral Video: ಸನ್‌ಗ್ಲಾಸ್‌ ತೊಟ್ಟು ನಾನು ಹೇಗೆ ಕಾಣುತ್ತೇನೆ ಎಂದ ಒರಾಂಗುಟಾನ್..!

ಸ್ಟೈಲ್ ಆಗಿ ಸನ್​ಗ್ಲಾಸ್​  ಧರಿಸುವ ಒರಾಂಗೂಟಾನ್ ನೋಡುಗರ ಗಮನಸೆಳೆಯುತ್ತಿದೆ.

Written by - Puttaraj K Alur | Last Updated : Aug 4, 2021, 05:00 PM IST
  • ಸನ್​ಗ್ಲಾಸ್ ತೊಟ್ಟು ನಾನು ಹೇಗೆ ಕಾಣುತ್ತಿದ್ದೇನೆಂದು ಒರಾಂಗೂಟಾನ್ ಪೋಸ್
  • ಒರಾಂಗೂಟಾನ್ ತೋರಿದ ಬುದ್ದಿವಂತಿಕೆಗೆ ಬೆರಗುಗೊಂಡ ನೆಟಿಜನ್ ಗಳು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ವಿಡಿಯೋ
Viral Video: ಸನ್‌ಗ್ಲಾಸ್‌ ತೊಟ್ಟು ನಾನು ಹೇಗೆ ಕಾಣುತ್ತೇನೆ ಎಂದ  ಒರಾಂಗುಟಾನ್..! title=
ಒರಾಂಗೂಟಾನ್ ಬುದ್ದಿವಂತಿಕೆಗೆ ಬೆರಗುಗೊಂಡ ನೆಟಿಜನ್ ಗಳು

ನವದೆಹಲಿ: ಅತಿಬುದ್ಧಿವಂತ ಪ್ರಾಣಿಗಳಲ್ಲಿ ಒರಾಂಗೂಟಾನ್ ಕೂಡ ಒಂದು. ಥೇಟ್ ಮನುಷ್ಯರಂತೆ ವರ್ತಿಸುವ ಒರಾಂಗೂಟಾನ್(Orangutan)ಗಳ ವಿಡಿಯೋಗಳನ್ನು ನೀವು ನೋಡೇ ಇರ್ತಿರಿ. ಅವುಗಳು ಚೇಷ್ಟೆ ಸ್ವಭಾವಕ್ಕೆ ಪ್ರತಿಯೊಬ್ಬರೂ ಬಿದ್ದು ಬಿದ್ದು ನಗುತ್ತಾರೆ. ಅಂತಹದ್ದೇ ಮತ್ತೊಂದು ಒರಾಂಗೂಟಾನ್ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸನ್​ಗ್ಲಾಸ್ ತೊಟ್ಟು ನಾನು ಹೇಗೆ ಕಾಣುತ್ತಿದ್ದೇನೆ ಅಂತಾ ಒರಾಂಗೂಟಾನ್ ಪೋಸ್ ನೀಡಿದೆ.

ಹೌದು, ಕೈಗೆ ಸಿಕ್ಕ ಸನ್​ಗ್ಲಾಸ್​ ಅನ್ನು ಸ್ಟೈಲ್ ಆಗಿ ಧರಿಸುವ ಈ ಒರಾಂಗೂಟಾನ್(Orangutan)ನೋಡುಗರ ಗಮನಸೆಳೆಯುತ್ತಿದೆ. ಕ್ಯಾಮೆರಾಗೆ ಪೋಸ್ ನೀಡುತ್ತಿರುವಾಗ ಅದರ ಮರಿ ಕೂಡ ಅದನ್ನು ಕಣ್ಣು ಪಿಳಿಪಿಳಿ ಬಿಟ್ಟುಕೊಂಡು ದಿಟ್ಟಿಸಿ ನೊಡಿದೆ. ಇದು ಇಂಡೋನೇಷ್ಯಾದ ಮೃಗಾಲಯದಲ್ಲಿ ನಡೆದಿರುವ ಘಟನೆಯಾಗಿದೆ. ಪ್ರವಾಸಿಗರೊಬ್ಬರು ತಮ್ಮ ಸನ್​ಗ್ಲಾಸ್​ ಬೀಳಿಸಿದ್ದರು. ಅದನ್ನು ನೋಡಿದ ಒರಾಂಗೂಟಾನ್ ಕೂಡಲೇ ತನ್ನ ಕೈಗೆ ತೆಗೆದುಕೊಂಡು​ ಸ್ಟೈಲ್ ಆಗಿ ಧರಿಸಿಕೊಂಡಿರುವುದನ್ನು ವಿಡಿಯೋ(Viral Video)ದಲ್ಲಿ ಕಾಣಬಹುದಾಗಿದೆ.

 
 
 
 

 
 
 
 
 
 
 
 
 
 
 

A post shared by Memes | Funny | Culture (@pubity)

ಇದನ್ನೂ ಓದಿ: ಸೇಬು ತಿಂದರೆ ಆರೋಗ್ಯಕ್ಕೆ ಲಾಭ ಅಷ್ಟೇ ಅಲ್ಲ ನಷ್ಟವೂ ಇದೆ.

ಈ ವಿಡಿಯೋವನ್ನು pubity ಎಂಬ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೈಗೆ ಸಿಕ್ಕ ಸನ್​ಗ್ಲಾಸ್ ಅನ್ನು ಸ್ಟೈಲ್ ಆಗಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿರುವ ಒರಾಂಗೂಟಾನ್ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಒರಾಂಗೂಟಾನ್ ತೋರಿದ ಬುದ್ದಿವಂತಿಕೆಗೆ ಬೆರಗುಗೊಂಡಿದ್ದಾರೆ. ಅನೇಕರು ಅಚ್ಚರಿಪಟ್ಟಿದ್ದು, ಇದು ನಿಜವಾಗಿಯೂ ಬುದ್ದಿವಂತ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Kohli-Dhoni ಇಬ್ಬರಲ್ಲಿ ಜೀನಿಯಸ್ ಕ್ಯಾಪ್ಟನ್ ಯಾರು? Michael Vaughan ಹೇಳಿದ್ದೇನು?

ಕೈಗೆ ಸಿಕ್ಕ ಸನ್​ಗ್ಲಾಸ್(Sunglasses)ಅನ್ನು ಎಲ್ಲಿಯೂ ಎಸೆಯದೆ, ಅದನ್ನು ಒಡೆದು ಹಾಕದೆ ಸ್ಟೈಲ್ ಆಗಿ ಧರಿಸಿರುವ ಒರಾಂಗೂಟಾನ್ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ಅನೇಕರು ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದೇವೆ ಅಂತಾ ಪ್ರತಿಕ್ರಿಯಿಸಿದ್ದಾರೆ. ನೀವು ಒಂದು ಸಾರಿ ಒರಾಂಗೂಟಾನ್ ವಿಡಿಯೋ ನೋಡಿ ನಕ್ಕುಬಿಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News