ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರ ನೇತೃತ್ವದ ಸಂಪುಟವು ಮಂಗಳವಾರದಂದು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಪದವಿ ನೀಡಿದೆ. ಈ ಮೂಲಕ ಆಸಿಮ್ ಮುನೀರ್, ಪಾಕಿಸ್ತಾನದ ಇತಿಹಾಸದಲ್ಲಿ ಫೀಲ್ಡ್ ಮಾರ್ಷಲ್ ರ್‍ಯಾಂಕ್ ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ. ಇದಕ್ಕೂ ಮೊದಲು, 1959ರಲ್ಲಿ ಜನರಲ್ ಅಯೂಬ್ ಖಾನ್ ಈ ಗೌರವಕ್ಕೆ ಪಾತ್ರರಾಗಿದ್ದರು.
ಆಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿ ನೀಡಿರುವುದೇಕೆ?
ಪಾಕಿಸ್ತಾನ ಸರ್ಕಾರದ ಪ್ರಕಾರ, ಆಸಿಮ್ ಮುನೀರ್ ಅವರಿಗೆ ಈ ಗೌರವವನ್ನು 'ಆಪರೇಷನ್ ಬುನಿಯಾಲ್-ಅಲ್-ಮರ್ಸೂಸ್' ಎಂಬ ಕಾರ್ಯಾಚರಣೆಯಲ್ಲಿ ಭಾರತದ ವಿರುದ್ಧ ರೂಪಿಸಿದ ಉತ್ತಮ ಕಾರ್ಯತಂತ್ರಕ್ಕಾಗಿ ನೀಡಲಾಗಿದೆ. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಟ್ಟು ಯಶಸ್ವಿ ದಾಳಿಗಳನ್ನು ನಡೆಸಿತ್ತು. ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ದಾಳಿಗಳನ್ನು ಪ್ರಯತ್ನಿಸಿತ್ತಾದರೂ, ಭಾರತವು ಎಲ್ಲವನ್ನೂ ವಿಫಲಗೊಳಿಸಿತು. ಇದರ ಜೊತೆಗೆ, ಭಾರತವು ಪಾಕಿಸ್ತಾನದ ಹಲವಾರು ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಇಂತಹ ವಿನಾಶಕಾರಿ ಪರಿಣಾಮಗಳ ನಡುವೆಯೂ ಆಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
On behalf of the entire nation, I extend my heartfelt felicitations to General Syed Asim Munir, NI (M) on his well-deserved promotion to the rank of Field Marshal. His exemplary leadership during Operation Bunyan-um-Marsoos crushed enemy’s nefarious designs and brought great…
— Shehbaz Sharif (@CMShehbaz) May 20, 2025
ವಾಯುಸೇನೆ ಮುಖ್ಯಸ್ಥರ ಕಾಲಾವಧಿ ವಿಸ್ತರಣೆ
ಇದೇ ಸಭೆಯಲ್ಲಿ, ಪಾಕಿಸ್ತಾನ ಸರ್ಕಾರವು ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿದ್ಧು ಅವರ ಕಾಲಾವಧಿಯನ್ನು ವಿಸ್ತರಿಸಿದೆ. ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಅವರ ಸೇವೆ ಮತ್ತು ನಾಯಕತ್ವಕ್ಕೆ ಮನ್ನಣೆ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫೀಲ್ಡ್ ಮಾರ್ಷಲ್ ಪದವಿ ಎಂದರೇನು?
ಫೀಲ್ಡ್ ಮಾರ್ಷಲ್ ಎಂಬುದು ಸೇನೆಯ ಅತ್ಯುನ್ನತ ರ್‍ಯಾಂಕ್ ಆಗಿದ್ದು, ಇದಕ್ಕೆ ಐದು ನಕ್ಷತ್ರಗಳ ಗೌರವ ಸಿಗುತ್ತದೆ. ಇದು ಅತ್ಯಂತ ವಿಶೇಷ ಮತ್ತು ಗೌರವಾನ್ವಿತ ಪದವಿಯಾಗಿದ್ದು, ಅಸಾಧಾರಣ ಸೇವೆಗಾಗಿ ಮಾತ್ರ ನೀಡಲಾಗುತ್ತದೆ. ಈ ರ್‍ಯಾಂಕ್ ಗೌರವಕ್ಕಾಗಿ ನೀಡಲ್ಪಡುತ್ತದೆಯೇ ಹೊರತು ನಿಯಮಿತ ಸೈನಿಕ ಸೇವೆಗಾಗಿ ಅಲ್ಲ.ಇದು ಶಾಶ್ವತವಾಗಿರುತ್ತದೆ ಮತ್ತು ನಿವೃತ್ತಿಯ ನಂತರವೂ ಉಳಿಯುತ್ತದೆ.
ಅಯೂಬ್ ಖಾನ್: ಪಾಕಿಸ್ತಾನದ ಮೊದಲ ಫೀಲ್ಡ್ ಮಾರ್ಷಲ್
ಇದಕ್ಕೂ ಮೊದಲು,1959ರಲ್ಲಿ ಜನರಲ್ ಅಯೂಬ್ ಖಾನ್ ಅವರಿಗೆ ಫೀಲ್ಡ್ ಮಾರ್ಷಲ್ ಪದವಿ ನೀಡಲಾಗಿತ್ತು. ಅಯೂಬ್ ಖಾನ್ 1958ರಿಂದ 1969ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1958ರಲ್ಲಿ ಮಾರ್ಷಲ್ ಲಾ ಜಾರಿಗೊಳಿಸಿದ್ದಕ್ಕಾಗಿ ಮತ್ತು ದೇಶವನ್ನು ಮುನ್ನಡೆಸಿದ್ದಕ್ಕಾಗಿ ಅವರಿಗೆ ಈ ರ್‍ಯಾಂಕ್ ನೀಡಲಾಗಿತ್ತು. ಅಯೂಬ್ ಖಾನ್ ನಂತರ ಯಾರಿಗೂ ಈ ಗೌರವ ನೀಡಿರಲಿಲ್ಲ.
ಈ ನಿರ್ಧಾರವು ಪಾಕಿಸ್ತಾನದ ರಾಜಕೀಯ ಮತ್ತು ಸೈನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭಾರತದೊಂದಿಗಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಈ ರೀತಿಯ ಗೌರವ ನೀಡಿರುವುದು ವಿವಾದವನ್ನು ಹುಟ್ಟುಹಾಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









