Pak Economic Crisis: ಸಂಪೂರ್ಣ ದಿವಾಳಿಯತ್ತ ಪಾಕಿಸ್ತಾನ, ಜಿನ್ನಾ ಕೊನೆಯ ಗುರುತಿನ ಹರಾಜಿಗೆ ಮುಂದಾದ ಇಮ್ರಾನ್ ಸರ್ಕಾರ
Pak Economic Crisis: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pak Economic Crisis) ಯಾವ ರೀತಿ ಹದಗೆಟ್ಟಿದೆ ಎಂದರೆ, ಇದೀಗ ಅಲ್ಲಿನ ಸರ್ಕಾರ ಪಾಕ್ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಕೊನೆಯ ನೆನಪಾಗಿರುವ ಅಥವಾ ಅವರ ಕೊನೆಯ ಗುರುತಾಗಿರುವ ಸಂಗತಿಯೊಂದನ್ನು ಅಡವಿಡಲು ಮುಂದಾಗಿದೆ
Pak Economic Crisis: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pak Economic Crisis) ಯಾವ ರೀತಿ ಹದಗೆಟ್ಟಿದೆ ಎಂದರೆ, ಇದೀಗ ಅಲ್ಲಿನ ಸರ್ಕಾರ ಪಾಕ್ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಕೊನೆಯ ನೆನಪಾಗಿರುವ ಅಥವಾ ಅವರ ಕೊನೆಯ ಗುರುತಾಗಿರುವ ಸಂಗತಿಯೊಂದನ್ನು ಅಡವಿಡಲು ಮುಂದಾಗಿದೆ. ಹೌದು, ಪಾಕಿಸ್ತಾನದ ಇಮ್ರಾನ್ ಸರ್ಕಾರ ಮೊಹಮದ್ ಅಲಿ ಜಿನ್ನಾ ಅವರ ಸಹೋದರಿಯ ಹೆಸರಿನಲ್ಲಿ ನಿರ್ಮಾಣಗೊಂಡ 'ಮದಾರ್-ಎ-ಮಿಲ್ಲತ್' 500 ಬಿಲಿಯನ್ ಸಾಲ ಪಡೆಯುವ ಉದ್ದೇಶದಿಂದ ಹರಾಜು ನಡೆಸಲು ಚಿಂತನೆ ನಡೆಸುತ್ತಿದೆ.
'ಹೊಸ ಪಾಕಿಸ್ತಾನ' ಎಂಬ ಲಾಲಿಪಾಪ್ ಅನ್ನು ಜನತೆಗೆ ತೋರಿಸಿ ಅಧಿಕಾರಕ್ಕೆ ಬಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಪಾಕ್ ಆರ್ಥಿಕ ಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಎಂದರೆ, ಅಲ್ಲಿ ಇದೀಗ ದೇಶದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ (Mohammad Ali Jinnaah) ಅವರ ಕೊನೆಯ ನೆನಪು ಎಂದೇ ಹೇಳಲಾಗುವ ಹಾಗೂ ಜಿನ್ನಾ ಸಹೋದರಿಯ ಹೆಸರಿನಲ್ಲಿ ನಿರ್ಮಾಣಗೊಂಡ ಉದ್ಯಾನವನ 'ಮದಾರ್ ಎ ಮಿಲ್ಲತ್' ಅನ್ನು ಹರಾಜು ಹಾಕಲು ಮುಂದಾಗಿದೆ.
ಪಾಕ್ ಸುದ್ದಿ ಸಂಸ್ಥೆ 'ಡಾನ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಇಮ್ರಾನ್ ಸರ್ಕಾರ (Pakistan Government) ಇಸ್ಲಾಮಾಬಾದ್ ನ F-9 ಸೆಕ್ಟರ್ ನಲ್ಲಿರುವ ಅತಿ ದೊಡ್ಡ ಉದ್ಯಾನವನವನ್ನು 500 ಬಿಲಿಯನ್ ಸಾಲ ಪಡೆಯುವ ಉದ್ದೇಶದಿಂದ ಹರಾಜು ನಡೆಸಲು ಯೋಚಿಸುತ್ತಿದೆ. ಮಂಗಳವಾರ ಅಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾದ ಪ್ರಸ್ತಾವನೆಯನ್ನು ಇಡಲಾಗುವುದು ಎಂದು ಡಾನ್ ವರದಿ ಮಾಡಿದೆ.
ಇದನ್ನು ಓದಿ-Pakistan ಪ್ರಧಾನಿ ಖುರ್ಚಿಗೆ ಕಂಟಕ, Imran Khan ಆತಂಕ ಹೆಚ್ಚಿಸಿದ ಜ್ಯೋತಿಷಿ
ಪಾಕಿಸ್ತಾನದ ಇಮ್ರಾನ್ ಸರ್ಕಾರ ಯಾವ ಪಾರ್ಕ್ ಅನ್ನು ಹರಾಜು ನಡೆಸಲು ಯೋಚಿಸುತ್ತಿದೆಯೋ ಆ ಪಾರ್ಕ್ ಹೆಸರು 'ಮದಾರ್-ಎ-ಮಿಲ್ಲತ್ ಫಾತಿಮಾ ಪಾರ್ಕ್ ' (Madar-e- Millat Fatima Jinnah Park) ಆಗಿದೆ. ಫಾತಿಮಾ ಜಿನ್ನಾ, ಪಾಕ್ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಸಯೋದರಿಯಾಗಿದ್ದರು. ಇಸ್ಲಾಮಾಬಾದ್ ನಲ್ಲಿರುವ ಈ ಪಾರ್ಕ್ ಸುಮಾರು 759 ಎಕರೆ ಪ್ರದೇಶದಲ್ಲಿ ಹರಡಿದೆ ಹಾಗೂ ಇದನ್ನು ಜನರು ಒಂದು ಮನರಂಜನೆಯ ಪಾರ್ಕ್ ರೂಪದಲ್ಲಿ ನೋಡುತ್ತಾರೆ. ಈ ಪಾರ್ಕ್ ನ ವಿಶೇಷತೆ ಎಂದರೆ ಈ ಪಾರ್ಕ್ಪಾಕಿಸ್ತಾನದ ಹಚ್ಚಹಸಿರು ಪ್ರದೇಶಗಳಲ್ಲಿ ಒಂದಾಗಿದೆ.
ಇದನ್ನು ಓದಿ-ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟ್ಟರ್ ನಲ್ಲಿ Unfollow ಮಾಡಿದ ಇಮ್ರಾನ್ ಖಾನ್
ಡಾನ್ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ ನಡೆಯಲಿರುವ ಈ ಕ್ಯಾಬಿನೆಟ್ ಸಭೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ಈ ಸಭೆಯನ್ನು ಇಮ್ರಾನ್ ಖಾನ್ ಅವರ ನಿವಾಸ ಹಾಗೂ ಕ್ಯಾಬಿನೆಟ್ ಡಿವಿಜನ್ ಸಮಿತಿ ವತಿಯಿಂದ ಆಯೋಜಿಸಲಾಗುತ್ತಿದೆ. ಮಂಗಳವಾರ ನಡೆಯಲಿರುವ ಈ ಸಭೆಯಲ್ಲಿ ಈ ಪಾರ್ಕ್ ಕುರಿತು ಚರ್ಚೆನಡೆಸಲಾಗುವುದು ಎನ್ನಲಾಗಿದೆ.
ಇದನ್ನು ಓದಿ-'ನೀನು ದೇವರಂತೆ ವರ್ತಿಸುತ್ತಿರುವೆ ' ಇಮ್ರಾನ್ ಖಾನ್ ವಿರುದ್ಧ ಜಾವೇದ್ ಮಿಯಾಂದಾದ್ ಕಿಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.