)
Peshawar Bomb Blast: ಪಾಕಿಸ್ತಾನದ ಪೇಶಾವರದಲ್ಲಿ ಗುರುವಾರ (ಅ.02) ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ ಒಂಬತ್ತು ಜನರು ಮೃತಪಟ್ಟಿದ್ದು, ನಾಲ್ಕು ಮಂದಿ ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ವಾಹನ ಸಾಗುತ್ತಿದ್ದ ಮಾರ್ಗದಲ್ಲಿ ಈ ಸ್ಫೋಟಕಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, ನಾಲ್ವರು ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಿಸಿಪಿಒ ತಿಳಿಸಿದೆ.
DAWN ವರದಿಯ ಪ್ರಕಾರ, "ಸ್ಫೋಟಕ್ಕೆ ಕಾರಣವಾದ ಸಾಧನವನ್ನು ಪೊಲೀಸ್ ಮೊಬೈಲ್ನ ಮಾರ್ಗದಲ್ಲಿ ಇರಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ಪಾಕಿಸ್ತಾನದ ಪೇಶಾವರ ರಾಜಧಾನಿ ನಗರ ಪೊಲೀಸ್ ಅಧಿಕಾರಿ ಮಿಯಾನ್ ಸಯೀದ್ ಖಚಿತಪಡಿಸಿದ್ದಾರೆ. ಬಾಂಬ್ ಸ್ಫೋಟದ ಬಳಿಕ ಘಟನಾ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ತನಿಖೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಪೇಶಾವರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕಾನೂನು ಜಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಾಕ್ಷ್ಯಾದಾರಗಳನ್ನು ಸಂಗಹಿಸುತ್ತಿದ್ದಾರೆ ಎಂದು ಸುದ್ಧಿ ಸಂಸ್ಥೆ DAWN ಗೆ ಪೊಲೀಸ್ ಅಧೀಕ್ಷಕ ಮಾಹಿತಿ ನೀಡಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಲೂಚಿಸ್ತಾನ್ ಸಿಎಂ ಮೀರ್ ಸರ್ಫ್ರಾಜ್ ಬುಗ್ತಿ, ಇದೊಂದು ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ. ಭದ್ರತಾ ಪಡೆಗಳು ಕೂಡಲೇ ಪ್ರತಿಕ್ರಿಯಿಸಿ ನಾಲ್ವರು ದಾಲಿಕೊರದನ್ನು ಕೊಂದಿವೆ. "ಭಯೋತ್ಪಾದಕರು ಹೇಡಿತನದ ಕೃತ್ಯಗಳ ಮೂಲಕ ರಾಷ್ಟ್ರದ ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ" ಎಂದವರು ತಮ್ಮ X ಖಾತೆಯಲ್ಲಿ ಬರೆದಿದ್ದಾರೆ.
ಉಗ್ರರ ಈ ರೀತಿಯ ಹೇಯ ಕೃತ್ಯಗಳ ಮೂಲಕ ದೇಶದ ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಾಗುವುದಿಲ್ಲ. ಜನರು ಮತ್ತು ಭದ್ರತಾಪಡೆಗಳ ತ್ಯಾಗ ವ್ಯರ್ಥವಾಗುವುದಿಲ್ಲ. ಬಲೂಚಿಸ್ತಾನದ ಶಾಂತಿ ಮತ್ತು ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದವರು ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸಿದ್ದಾರೆ.