close

News WrapGet Handpicked Stories from our editors directly to your mailbox

ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಎಫ್‌ಎಟಿಎಫ್

ಪಾಕಿಸ್ತಾನವು ಜಾಗತಿಕ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಏಷ್ಯಾ ಪೆಸಿಫಿಕ್ ಗ್ರೂಪ್ ಆಫ್ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಶುಕ್ರವಾರದಂದು ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ.

Updated: Aug 23, 2019 , 02:40 PM IST
ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಎಫ್‌ಎಟಿಎಫ್

ನವದೆಹಲಿ: ಪಾಕಿಸ್ತಾನವು ಜಾಗತಿಕ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಏಷ್ಯಾ ಪೆಸಿಫಿಕ್ ಗ್ರೂಪ್ ಆಫ್ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಶುಕ್ರವಾರದಂದು ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ.

ಪಿಟಿಐ ಪ್ರಕಾರ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ಕುರಿತು ಇರುವ 40 ನಿಯತಾಂಕಗಳಲ್ಲಿ 32 ರಲ್ಲಿ ಪಾಕಿಸ್ತಾನ ಅನುಸರಿಸುವುದಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ತನ್ನ ಪ್ರಯತ್ನಗಳ ಹೊರತಾಗಿಯೂ, 41 ಸಮಗ್ರ ಸದಸ್ಯರ ಸಭೆಗೆ ನಿಯತಾಂಕದಲ್ಲಿ ಅಪ್‌ಗ್ರೇಡ್ ಮಾಡುವ ವಿಚಾರವಾಗಿ ಮನವರಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ನಡೆದ ಈ ಎರಡು ದಿನಗಳ ಸಭೆಯಲ್ಲಿ ಏಳು ಗಂಟೆಗಳ ಕಾಲ ಚರ್ಚೆಗಳು ನಡೆದವು ಎನ್ನಲಾಗಿದೆ. ಕಳೆದ ವಾರ ಇಸ್ಲಾಮಾಬಾದ್ 450 ಪುಟಗಳ ಅನುಸರಣಾ ದಾಖಲೆಯನ್ನು ಸಲ್ಲಿಸಿತ್ತು, ಅದು ಸರ್ಕಾರವು ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಮಾಡಿದ ಎಲ್ಲಾ ಬದಲಾವಣೆಗಳನ್ನು ಮತ್ತು ಕಳೆದ ಒಂದೂವರೆ ವರ್ಷಗಳಲ್ಲಿ ಭಯೋತ್ಪಾದಕ ಗುಂಪುಗಳ ವಿರುದ್ಧದ ಕ್ರಮಗಳನ್ನು ವಿವರಿಸಿದೆ.

ಜಮಾಅತ್ ಉದಾ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್‌ಗೆ ಭಯೋತ್ಪಾದಕ ಹಣಕಾಸು ಆರೋಪ ಹೊರಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಈ ವರ್ಷ ಇದನ್ನು ನಿಷೇಧಿಸಲಾಗಿತ್ತು.