ಚೀನಾದಿಂದ ಮಿಲಿಟರಿ ಡ್ರೋನ್ ಖರೀದಿಸಲು ಮುಂದಾದ ಪಾಕ್-ವರದಿ

ಒಂದು ಕಡೆ ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಅಂತರಾಷ್ಟ್ರ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದರೆ. ಆದರೆ ಇತ್ತ ಕಡೆ ಚೀನಾ ಮಾತ್ರ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಮಿಲಟರಿ ಸಹಾಯಕ್ಕೆ ಮುಂದಾಗಿದೆ. 

Last Updated : Mar 19, 2019, 07:36 PM IST
ಚೀನಾದಿಂದ ಮಿಲಿಟರಿ ಡ್ರೋನ್ ಖರೀದಿಸಲು ಮುಂದಾದ ಪಾಕ್-ವರದಿ title=
file photo

ನವದೆಹಲಿ: ಒಂದು ಕಡೆ ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಅಂತರಾಷ್ಟ್ರ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದರೆ. ಆದರೆ ಇತ್ತ ಕಡೆ ಚೀನಾ ಮಾತ್ರ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಮಿಲಟರಿ ಸಹಾಯಕ್ಕೆ ಮುಂದಾಗಿದೆ. 

ಗುಪ್ತಚರ ಇಲಾಖೆಯ ವರದಿಯ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಡ್ರೋನ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಪಾಕಿಸ್ತಾನ ನಿರ್ಧರಿಸಿದೆ. ಇದರಿಂದ ಅವರು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಮೇಲೆ ನಿಗಾ ಇಡಬಹುದು ಎನ್ನಲಾಗಿದೆ.ಇತ್ತೀಚಿಗೆ ಪಾಕಿಸ್ತಾನದ ಬಾಲಾಕೋಟ ಮೇಲೆ ಭಾರತವು ದಾಳಿ ಮಾಡಿದ ಹಿನ್ನಲೆಯಲ್ಲಿ ಈಗ ಪಾಕ್ ಚೀನಾದಿಂದ ರೇನ್ಬೋ CH-4 ಮತ್ತು CH5 ಡ್ರೋನ್ ಗಳನ್ನು ಖರೀದಿಸಲು ನಿರ್ಧರಿಸಿದೆ. 

ಈ ಡ್ರೋನ್ ಗಳು 400 ಕೆಜಿಯಷ್ಟು ಶಸ್ತ್ರಾಸ್ತ್ರವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದ್ದು ಸುಮಾರು17 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಈ ಡ್ರೋನ್ ಗಳು ಹಾರಾಟ ನಡೆಸಲಿವೆ ಎನ್ನಲಾಗಿದೆ.ಈ ಡ್ರೋನ್ ಗಳ ಮೂಲಕ ಭಾರತದ ವಾಯು ಪ್ರದೇಶವನ್ನು ಆಕ್ರಮಿಸಬಹುದು ಎಂದು ಪಾಕ್ ನ ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Trending News