ನವದೆಹಲಿ: ಚೀನಾ ವಿರುದ್ಧ ಭಾರತದ ಪರಾಕ್ರಮವನ್ನು ಕಂಡು ಪಾಕಿಸ್ತಾನ (Pakistan) ಗಾಬರಿಗೊಂಡಿದೆ. ಭಾರತದ ದಾಳಿಗೆ ಪಾಕಿಸ್ತಾನ ಹೆದರುತ್ತಿದೆ. ತಮ್ಮ ಇಡೀ ದೇಶದ ಮುಂದೆ ಒಂದಕ್ಕಿಂತ ಹೆಚ್ಚು ಬಾರಿ ಕ್ಯಾಮೆರಾದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imran Khan) ಭಯಭೀತರಾಗಿ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಈಗ ಅದೇ ಭಯವನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ (Shah Mehmood Qureshi)  ವ್ಯಕ್ತಪಡಿಸಿದ್ದಾರೆ. ಚೀನಾದೊಂದಿಗೆ ನಡೆಯುತ್ತಿರುವ ವಿವಾದದಿಂದ ವಿರೋಧ ಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಭಾರತ ಸಂಚು ರೂಪಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ನೌಗಮ್ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ


ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಶಕ್ತಿಯನ್ನು ಎರಡು ಬಾರಿ ನೋಡಿದೆ. 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರಲ್ಲಿ ಪಾಕಿಸ್ತಾನಕ್ಕೆ ಪ್ರವೇಶಿಸಿ ಬಾಲಕೋಟ್‌ನಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ಭಾರತದ ಶೌರ್ಯವನ್ನು ಪಾಕಿಸ್ತಾನ ಇನ್ನೂ ಮರೆತಿಲ್ಲ.


ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ


ಈ ವರ್ಷ ಸೇನೆಯು ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದೆ. ಭಾರತಕ್ಕೆ ನುಸುಳಿದ್ದ ಪಾಕಿಸ್ತಾನ ದ ಭಯೋತ್ಪಾದಕ ಕಮಾಂಡರ್ಗಳನ್ನು ಒಬ್ಬೊಬ್ಬರಾಗಿ ಕೊಲ್ಲಲಾಗುತ್ತಿದೆ. ಭಯೋತ್ಪಾದಕರನ್ನು ಒಳನುಸುಳುವಂತೆ ಮಾಡಲು ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಮುರಿಯುತ್ತಿದೆ. ಜನವರಿಯಿಂದ ಪಾಕಿಸ್ತಾನವು 2050ಕ್ಕೂ ಹೆಚ್ಚು ಬಾರಿ  ಕದನ ವಿರಾಮವನ್ನು ಉಲ್ಲಂಘಿಸುಟ್ಟಿದೆ. ಭಾರತವು ನಿಯಂತ್ರಣ ರೇಖೆಯಲ್ಲಿ ಈ ಎಲ್ಲದಕ್ಕೂ ಸೂಕ್ತ ಉತ್ತರವನ್ನು ನೀಡುತ್ತಿದೆ.