ಟೈಮ್ ಮ್ಯಾಗಜೀನ್‌ನ 2025ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿಗಿಲ್ಲ ಸ್ಥಾನ..!

ಈ ವರ್ಷದ ಪಟ್ಟಿಯನ್ನು 'ನಾಯಕರು', 'ಐಕಾನ್‌ಗಳು' ಮತ್ತು 'ಟೈಟಾನ್ಸ್' ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಪಟ್ಟಿಯು ಜಾಗತಿಕ ಮಟ್ಟದಲ್ಲಿ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿಗಳನ್ನು ಗುರುತಿಸುತ್ತದೆ

Written by - Manjunath Naragund | Last Updated : Apr 17, 2025, 01:49 PM IST
  • ಈ ವರ್ಷದ ಪಟ್ಟಿಯನ್ನು 'ನಾಯಕರು', 'ಐಕಾನ್‌ಗಳು' ಮತ್ತು 'ಟೈಟಾನ್ಸ್' ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ
  • ಈ ಪಟ್ಟಿಯು ಜಾಗತಿಕ ಮಟ್ಟದಲ್ಲಿ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿಗಳನ್ನು ಗುರುತಿಸುತ್ತದೆ
  • 2025ರ ಟೈಮ್ ಮ್ಯಾಗಜೀನ್ ಐದು ಅಂತಾರಾಷ್ಟ್ರೀಯ ಕವರ್‌ಗಳೊಂದಿಗೆ ಬಿಡುಗಡೆಯಾಗಿದೆ
ಟೈಮ್ ಮ್ಯಾಗಜೀನ್‌ನ 2025ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿಗಿಲ್ಲ ಸ್ಥಾನ..!

ಟೈಮ್ ಮ್ಯಾಗಜೀನ್‌ನ 2025ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಯಾವುದೇ ಭಾರತೀಯರಿಗೆ ಸ್ಥಾನ ಸಿಗದಿರುವುದು ಗಮನಾರ್ಹವಾಗಿದೆ. ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಕ್ ಉದ್ಯಮಿ ಎಲಾನ್ ಮಸ್ಕ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಸೇರಿದಂತೆ ಹಲವು ಜಾಗತಿಕ ನಾಯಕರು ಸ್ಥಾನ ಪಡೆದಿದ್ದಾರೆ. ಆದರೆ, ಭಾರತದಿಂದ ಯಾವುದೇ ವ್ಯಕ್ತಿಯ ಹೆಸರು ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ.

Add Zee News as a Preferred Source

ಕಳೆದ ವರ್ಷ (2024) ಈ ಪಟ್ಟಿಯಲ್ಲಿ ಭಾರತದ ನಟಿ ಆಲಿಯಾ ಭಟ್ ಮತ್ತು ಒಲಿಂಪಿಕ್ ಕುಸ್ತಿಪಟು ಸಾಕ್ಷಿ ಮಲಿಕ್ ಸ್ಥಾನ ಪಡೆದಿದ್ದರು. ಜೊತೆಗೆ, ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲಾ, ವಿಶ್ವಬ್ಯಾಂಕ್‌ನ ಅಧ್ಯಕ್ಷ ಅಜಯ್ ಬಂಗಾ ಮತ್ತು ನಟ ದೇವ್ ಪಟೇಲ್‌ರಂತಹ ಭಾರತೀಯ ಮೂಲದ ವ್ಯಕ್ತಿಗಳು ಸ್ಥಾನ ಗಳಿಸಿದ್ದರು. ಆದರೆ, ಈ ಬಾರಿ ಭಾರತೀಯರ ಸಂಪೂರ್ಣ ಅನುಪಸ್ಥಿತಿ ಗಮನ ಸೆಳೆದಿದೆ.

ಭಾರತೀಯರಿಲ್ಲದಿದ್ದರೂ, ಭಾರತೀಯ ಮೂಲದ ವ್ಯಕ್ತಿಯಾದ ರೇಷ್ಮಾ ಕೇವಲ್‌ರಮಣಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವರ್ಟೆಕ್ಸ್ ಫಾರ್ಮಾಸ್ಯೂಟಿಕಲ್ಸ್‌ನ ಸಿಇಒ ಆಗಿರುವ ರೇಷ್ಮಾ, 11ನೇ ವಯಸ್ಸಿನಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.ಅಮೆರಿಕದ ಪ್ರಮುಖ ಜೈವಿಕ ತಂತ್ರಜ್ಞಾನ ಕಂಪನಿಯ ಮೊದಲ ಮಹಿಳಾ ಸಿಇಒ ಆಗಿ ಅವರು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Top 10 Series: ಕರ್ನಾಟಕದ 10 ಅತಿ ಹಳೆಯ ಅಂಚೆ ಕಚೇರಿಗಳು..! ಇಲ್ಲಿದೆ ಸಂಪೂರ್ಣ ವಿವರ

ಪ್ರಮುಖ ಜಾಗತಿಕ ವ್ಯಕ್ತಿಗಳು: 2025ರ ಪಟ್ಟಿಯಲ್ಲಿ ರಾಜಕೀಯ, ವಿಜ್ಞಾನ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರು ಸ್ಥಾನ ಪಡೆದಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಕ್ಲಾಡಿಯಾ ಶೀನ್‌ಬಾಮ್, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಗೆಬ್ರೆಯೇಸಸ್, ಜರ್ಮನಿಯ ಸಂಪ್ರದಾಯವಾದಿ ನಾಯಕ ಫ್ರೀಡ್ರಿಚ್ ಮೆರ್ಜ್, ದಕ್ಷಿಣ ಕೊರಿಯಾದ ನಾಯಕ ಲೀ ಜೇ-ಮ್ಯುಂಗ್ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ. 84 ವರ್ಷದ ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್ ಈ ಪಟ್ಟಿಯ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.ಅಚ್ಚರಿ ಎಂದರೆ ಪ್ರಧಾನಿ ಮೋದಿ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಇದೇ ವೇಳೆ, ಅಮೆರಿಕ ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್ ಕೆನಡಿ ಜೂನಿಯರ್, ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಮತ್ತು ಸಿರಿಯಾದ ಸರ್ವಾಧಿಕಾರಿ ಬಶರ್ ಅಲ್-ಅಸಾದ್‌ರನ್ನು ಕೆಳಗಿಳಿಸಿದ ಬಂಡಾಯಗಾರ ಅಹ್ಮದ್ ಅಲ್-ಶರಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಐದು ಅಂತಾರಾಷ್ಟ್ರೀಯ ಕವರ್‌ಗಳು: 2025ರ ಟೈಮ್ ಮ್ಯಾಗಜೀನ್ ಐದು ಅಂತಾರಾಷ್ಟ್ರೀಯ ಕವರ್‌ಗಳೊಂದಿಗೆ ಬಿಡುಗಡೆಯಾಗಿದೆ. ಇದರಲ್ಲಿ ನಟಿ ಡೆಮಿ ಮೂರ್, ಅಮೆರಿಕನ್ ರ‍್ಯಾಪರ್ ಸ್ನೂಪ್ ಡಾಗ್, ಮಾಜಿ ಟೆನಿಸ್ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಇಂಗ್ಲಿಷ್ ಗಾಯಕ-ಗೀತರಚನೆಕಾರ ಎಡ್ ಶೀರನ್ ಮತ್ತು ಗೂಗಲ್ ಡೀಪ್‌ಮೈಂಡ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಡೆಮಿಸ್ ಹಾಸಾಬಿಸ್ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಅಲ್ಲಾಡುವಾಗ ಈ ವರದಿಯನ್ನ ತರ್ತಾರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಈ ವರ್ಷದ ಪಟ್ಟಿಯನ್ನು 'ನಾಯಕರು', 'ಐಕಾನ್‌ಗಳು' ಮತ್ತು 'ಟೈಟಾನ್ಸ್' ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಪಟ್ಟಿಯು ಜಾಗತಿಕ ಮಟ್ಟದಲ್ಲಿ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿಗಳನ್ನು ಗುರುತಿಸುತ್ತದೆ.ಭಾರತೀಯರ ಅನುಪಸ್ಥಿತಿಯ ಹೊರತಾಗಿಯೂ, ಭಾರತೀಯ ಮೂಲದ ರೇಷ್ಮಾ ಕೇವಲ್‌ರಮಣಿ ಸ್ಥಾನವನ್ನು ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Trending News