ಪದಚ್ಯುತಿಗೊಂಡಿದ್ದ ರಣಿಲ್ ವಿಕ್ರಮಸಿಂಘೆ ಈಗ ಮತ್ತೆ ಶ್ರೀಲಂಕಾ ಪ್ರಧಾನಿ!

ಶ್ರೀಲಂಕಾದಲ್ಲಿ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದ ರಣಿಲ್ ವಿಕ್ರಮಸಿಂಘೆ ಈಗ ಮತ್ತೆ ಶ್ರೀಲಂಕಾದ  ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Last Updated : Dec 16, 2018, 12:54 PM IST
ಪದಚ್ಯುತಿಗೊಂಡಿದ್ದ ರಣಿಲ್ ವಿಕ್ರಮಸಿಂಘೆ ಈಗ ಮತ್ತೆ ಶ್ರೀಲಂಕಾ ಪ್ರಧಾನಿ!  title=
file photo

ನವದೆಹಲಿ: ಶ್ರೀಲಂಕಾದಲ್ಲಿ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದ ರಣಿಲ್ ವಿಕ್ರಮಸಿಂಘೆ ಈಗ ಮತ್ತೆ ಶ್ರೀಲಂಕಾದ  ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಭಾನುವಾರ ಬೆಳಗ್ಗೆ ಅಧ್ಯಕ್ಷ  ಮೈತ್ರಿಪಾಲಾ ಸಿರಿಸೇನಾ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಕಾರ್ಯಕ್ರಮದಲ್ಲಿ ಕೆಲವೇ ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ  ನೀಡಲಾಗಿತ್ತು,ಮಾಧ್ಯಮದವರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು ಎಂದು ಅಡಾ ದೆರಾನಾ ವರದಿ ಮಾಡಿದೆ.

ವಿಕ್ರಮೆಸಿಂಘೆ ಅವರ ಯುನೈಟೆಡ್ ನ್ಯಾಶನಲ್ ಪಾರ್ಟಿ ಅಧ್ಯಕ್ಷ ಸಿರಿಸೇನಾ ಅವರ ಜೊತೆ ಕಾರ್ಯ ನಿರ್ವಹಿಸಲು ಸಿದ್ದ  ಅವರು ಕೆಲವು ಗುಂಪುಗಳಿಂದ ತಪ್ಪುದಾರಿಗೆಳೆಯಲ್ಪಟ್ಟಿದ್ದರು ಎಂದು ತಿಳಿಸಿದೆ. ಮಾಜಿ ಪ್ರಧಾನಮಂತ್ರಿ ರಾಜಪಕ್ಸೆ ಅವರು ಶನಿವಾರ ರಾಜೀನಾಮೆ ನೀಡಿದ ಬಳಿಕ ವಿಕ್ರಮೆಸಿಂಘೆ ಅವರನ್ನು ಮರು ಪ್ರಧಾನಿಯಾಗಿ ನೇಮಕ ಮಾಡಿದರು. ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಕ್ಷದ ಉಪ ನಾಯಕ  ಸಜಿತ್ ಪ್ರೇಮದಾಸ್ " ಈಗ ಇದು ಅಧ್ಯಕ್ಷರ ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ತಿಳಿಸಿದರು.

ಭಾನುವಾರ ವಿಕ್ರೆಮಸಿಂಘೆ ಅವರನ್ನು ಮತ್ತೆ ಪ್ರಧಾನಿಯಾಗಿ ನೇಮಕ ಮಾಡಿದ್ದಕ್ಕೆ ಅಧ್ಯಕ್ಷೀಯ ಸಚಿವಾಲಯದ ಹೊರಗೆ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಬೆಂಬಲಿಗರು  ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.ಅಧ್ಯಕ್ಷ ಸಿರಿಸೆನಾ ಅವರು ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಅಕ್ಟೋಬರ್ 26 ರಂದು  ಮಹಿಂದಾ ರಾಜಪಕ್ಸೆರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು.ಇದರಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. 

Trending News