ಕೊರೊನಾವೈರಸ್ ಗೆ ಲಸಿಕೆ ಕಂಡು ಹಿಡಿದ ರಷ್ಯಾ...!

ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿದಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಂಗಳವಾರದಂದು ಘೋಷಿಸಿದ್ದಾರೆ. ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದ ನಂತರ ಲಸಿಕೆ ವಿಚಾರವನ್ನು ಖಚಿತಪಡಿಸಿದ್ದಾರೆ.ಈ ಲಸಿಕೆಯನ್ನು ಸಿದ್ಧಪಡಿಸುವಲ್ಲಿ ನೆರವಾದ ಎಲ್ಲರಿಗೂ ಪುಟಿನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Updated: Aug 11, 2020 , 03:55 PM IST
 ಕೊರೊನಾವೈರಸ್ ಗೆ ಲಸಿಕೆ ಕಂಡು ಹಿಡಿದ ರಷ್ಯಾ...!
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿದಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಂಗಳವಾರದಂದು ಘೋಷಿಸಿದ್ದಾರೆ. ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದ ನಂತರ ಲಸಿಕೆ ವಿಚಾರವನ್ನು ಖಚಿತಪಡಿಸಿದ್ದಾರೆ.ಈ ಲಸಿಕೆಯನ್ನು ಸಿದ್ಧಪಡಿಸುವಲ್ಲಿ ನೆರವಾದ ಎಲ್ಲರಿಗೂ ಪುಟಿನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ನೆರವಾಗುತ್ತದೆ ಎಂದು ಪುಟಿನ್ ತಿಳಿಸಿದ್ದಾರೆ. ಅಚ್ಚರಿ ಎಂದರೆ ಅವರ ಪುತ್ರಿ ಕೊರೊನಾ ವೈರಸ್ ಲಸಿಕೆ ಪ್ರಯೋಗದಲ್ಲಿ ಭಾಗಿಯಗಿದ್ದಾಳೆ ಎನ್ನಲಾಗಿದೆ. ಮೊದಲನೇ ಲಸಿಕೆ ನೀಡಿದಾಗ ಆಕೆ ದೇಹದ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಅದಾದ ನಂತರ ಎರಡನೇ ಇಂಜೆಕ್ಷನ್ ನಂತರ ಆಕೆಯ ದೇಹದ ತಾಪಮಾನ ಏರಿಕೆಯಲ್ಲಿ ವ್ಯತ್ಯಾಸವಾಗಿದ್ದರೂ ಸಹಿತ ನಂತರ ಗುಣಮುಖವಾಗಿದ್ದಾಳೆ ಎನ್ನಲಾಗಿದೆ.

ಶೀಘ್ರದಲ್ಲೇ ರಷ್ಯಾ ಬೃಹತ್ ಪ್ರಮಾಣದಲ್ಲಿ ರಷ್ಯಾ ಲಸಿಕೆಯನ್ನು ಉತ್ಪಾದಿಸಲಿದೆ ಎನ್ನಲಾಗಿದೆ.ಇದನ್ನು ರಷ್ಯದ ಗಮಾಲೆಯಾ ರಿಸರ್ಚ್ ಇನ್ಸ್ಟಿಟ್ಯೂಟ್ ಬೈನೋಫಾರ್ಮ್ ನಲ್ಲಿ ಉತ್ಪಾದನೆಯಾಗಲಿದೆ ಎನ್ನಲಾಗಿದೆ.ರಷ್ಯಾದಲ್ಲಿ ಇದುವರೆಗೆ 897,599 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.