24 ಗಂಟೆಗಳ ಒಳಗೆ ಇರಾಕ್‌ನಲ್ಲಿ ಎರಡನೇ ದಾಳಿ

ಇರಾಕ್‌ನ ಯುಎಸ್ ಮಿಲಿಟರಿ ನೆಲೆಯ ಮೇಲೆ ಇರಾನ್‌ನ ಖಂಡಾಂತರ ಕ್ಷಿಪಣಿ ದಾಳಿ ನಡೆದ 24 ಗಂಟೆಗಳ ಒಳಗೆ ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯಕ್ಕೆ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ.

Last Updated : Jan 9, 2020, 07:10 AM IST
24 ಗಂಟೆಗಳ ಒಳಗೆ ಇರಾಕ್‌ನಲ್ಲಿ ಎರಡನೇ ದಾಳಿ title=

ನವದೆಹಲಿ: ಇರಾಕ್‌ನ ಯುಎಸ್ ಮಿಲಿಟರಿ ನೆಲೆಯ ಮೇಲೆ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ದಾಳಿ ನಡೆಸಿದ 24 ಗಂಟೆಗಳ ಒಳಗೆ ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ. ಈ ಪ್ರದೇಶದಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಯುಎಸ್ ರಾಯಭಾರ ಕಚೇರಿ ಬಳಿ ರಾಕೆಟ್ ನಿಂದ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಪ್ರದೇಶವನ್ನು ಇರಾಕ್‌ನ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ ನಂತರ ಈ ರಾಕೆಟ್ ದಾಳಿ ನಡೆದಿದೆ.

ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದಾಳಿಯ ನಂತರ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ನಡೆಸಿದ್ದರೂ, ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಾನು ಅಮೆರಿಕದ ಅಧ್ಯಕ್ಷರಾಗಿ ಇರುವವರೆಗೂ ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

"ಕಳೆದ ರಾತ್ರಿಯ ದಾಳಿಯಲ್ಲಿ ಎಲ್ಲಾ ನಾಗರಿಕರು ಮತ್ತು ಸೈನಿಕರು ಸುರಕ್ಷಿತರಾಗಿದ್ದಾರೆ. ನಮ್ಮ ಮಿಲಿಟರಿ ಪಡೆ ಯಾವುದೇ ಸವಾಲಿಗೂ ಸಿದ್ಧವಾಗಿದೆ. ಇರಾನ್‌ನ ಹಿಮ್ಮೆಟ್ಟುವಿಕೆ ಇಡೀ ಜಗತ್ತಿಗೆ ಉತ್ತಮ ಸಂಕೇತವಾಗಿದೆ" ಎಂದು ಟ್ರಂಪ್ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಇರಾನ್‌ನ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ತಿಳಿಸಿದ ಟ್ರಂಪ್, ಇರಾನ್ ಭಯೋತ್ಪಾದನೆಯ ಕೇಂದ್ರವಾಗಿದ್ದು, ಪರಮಾಣು ದಾಳಿಯಿಂದ ಜಗತ್ತಿಗೆ ಬೆದರಿಕೆ ಹಾಕುತ್ತಲೇ ಇದೆ. ನಾವು ಅದನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದೇವೆ. ನನ್ನ ಸೂಚನೆಯ ಮೇರೆಗೆ ಯು.ಎಸ್. ಸಾರ್ಡ್ ಯಶಸ್ವಿಯಾಯಿತು" ಎಂದರು.

ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ಸೂಚಿಸಿದ ಟ್ರಂಪ್, "ಇರಾನ್ ಮೇಲೆ ನಿರ್ಬಂಧಗಳು ಮುಂದುವರಿಯಲಿವೆ. ಹೊಸ ಆರ್ಥಿಕ ನಿರ್ಬಂಧಗಳನ್ನು ಸಹ ವಿಧಿಸಲಾಗುವುದು. ಇರಾನ್ ಶಾಂತಿಯ ಹಾದಿಯಲ್ಲಿ ಸಾಗುವವರೆಗೆ ಇವು ಮುಂದುವರೆಯಲಿವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಬೇಕಾಗುತ್ತದೆ. ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತನ್ನು ಹೆಚ್ಚು ಸುರಕ್ಷಿತ ಮತ್ತು ಶಾಂತಿಯುತವಾಗಿಸಲು ನಾವು ಒಟ್ಟಾಗಿ ಇರಾನ್ ವಿರುದ್ಧ ಹೋರಾಡಬೇಕಾಗಿದೆ" ಎಂದು ಕರೆ ನೀಡಿದರು.

"ನನ್ನ ಅಧಿಕಾರಾವಧಿಯಲ್ಲಿ, ಯುಎಸ್ ಮಿಲಿಟರಿ ಬಲಶಾಲಿಯಾಗಿದೆ ಮತ್ತು ನಾವು ಅದಕ್ಕಾಗಿ ಎರಡೂವರೆ ಟ್ರಿಲಿಯನ್ ಡಾಲರ್ಗಳನ್ನು ಖರ್ಚು ಮಾಡಿದ್ದೇವೆ. ನಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ. ಆದರೆ ನಾವು ಅವುಗಳನ್ನು ಬಳಸಲು ಬಯಸುವುದಿಲ್ಲ" ಎಂದು ಟ್ರಂಪ್ ತಿಳಿಸಿದರು.

Trending News