ನೀರುಳ್ಳಿಯಿಂದ ಹರಡುತ್ತಿದೆ ಅಪಾಯಕಾರಿ ಬ್ಯಾಕ್ಟೀರಿಯಾ, 650 ಕ್ಕೂ ಅಧಿಕ ಜನರಲ್ಲಿ ಕಾಣಿಸಿಕೊಂಡಿದೆ ರೋಗ

ಚಿಹುವಾಹುವಾ, ಮೆಕ್ಸಿಕೋದಿಂದ ಆಮದು ಮಾಡಲಾಗಿರುವ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿ ಈ ರೋಗಕ್ಕೆ ಕಾರಣ ಎಂದು,  ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹೇಳಿದೆ.  

Written by - Ranjitha R K | Last Updated : Oct 22, 2021, 07:44 PM IST
  • ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಹರಡುತ್ತಿದೆ ರೋಗ
  • ಅಮೆರಿಕದ 37 ರಾಜ್ಯಗಳಲ್ಲಿ 650 ಪ್ರಕರಣಗಳು ವರದಿಯಾಗಿವೆ
  • ಆಮದು ಮಾಡಿದ ಈರುಳ್ಳಿಯೇ ರೋಗಕ್ಕೆ ಮುಖ್ಯ ಕಾರಣ
ನೀರುಳ್ಳಿಯಿಂದ  ಹರಡುತ್ತಿದೆ ಅಪಾಯಕಾರಿ ಬ್ಯಾಕ್ಟೀರಿಯಾ, 650 ಕ್ಕೂ ಅಧಿಕ ಜನರಲ್ಲಿ ಕಾಣಿಸಿಕೊಂಡಿದೆ ರೋಗ

ನ್ಯೂಯಾರ್ಕ್ : ಯುಎಸ್ ನಲ್ಲಿ, 37 ರಾಜ್ಯಗಳಲ್ಲಿ 650 ಕ್ಕೂ ಹೆಚ್ಚು ಜನರು ಈರುಳ್ಳಿಯಿಂದ ಉಂಟಾಗುವ ಸಾಲ್ಮೊನೆಲ್ಲಾ (Salmonella) ಬ್ಯಾಕ್ಟೀರಿಯಾದಿಂದ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಸುಮಾರು 129 ಜನರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಇಲ್ಲಿಯವರೆಗೆ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ರೋಗವು  ಹೆಚ್ಚಾಗುತ್ತಿರುವ ಸುಚೆನೆ ದೊರಕಿತ್ತು. ಟೆಕ್ಸಾಸ್ ಮತ್ತು ಒಕ್ಲಹೋಮ್ ನಲ್ಲಿ ಅತಿ ಹೆಚ್ಚು ಪ್ರಕರಣಗಲು ದಾಖಲಾಗಿವೆ. 

ಆಮದು ಮಾಡಿದ ಈರುಳ್ಳಿಯಿಂದ ಹರಡುತ್ತಿದೆ ರೋಗ : 
ಚಿಹುವಾಹುವಾ, ಮೆಕ್ಸಿಕೋದಿಂದ (Chihuahua, Mexican State) ಆಮದು ಮಾಡಲಾಗಿರುವ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿ ಈ ರೋಗಕ್ಕೆ ಕಾರಣ ಎಂದು,  ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC)  ಹೇಳಿದೆ.  ProSource ಹೆಸರಿನಕಂಪನಿ ಇದನ್ನು ಇಡೀ ಯುಎಸ್ ಗೆ (US) ವಿತರಿಸಿದೆ.  ಈರುಳ್ಳಿಯನ್ನು ಆಗಸ್ಟ್ ಅಂತ್ಯದಲ್ಲಿ ಕೊನೆಯ ಬಾರಿಗೆ ಆಮದು ಮಾಡಿಕೊಳ್ಳಲಾಗಿತ್ತು ಎಂದು ಕಂಪನಿಯು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದೆ. 

ಇದನ್ನೂ ಓದಿ :  Corona Returns In China: ಚೀನಾದಲ್ಲಿ ಮತ್ತೆ ಕರೋನಾ ಹಾವಳಿ; ಹಲವು ನಗರಗಳಲ್ಲಿ ಲಾಕ್‌ಡೌನ್‌

ಸ್ಟಿಕ್ಕರ್ ಇಲ್ಲದ ಈರುಳ್ಳಿ ತಿನ್ನದಂತೆ ಸಲಹೆ :
ಚಿಹುವಾಹುದಿಂದ ಪ್ರೊಸೋರ್ಸ್ ಮೂಲಕ ಆಮದು ಮಾಡಿವಿತರಿಸಿದ ಕೆಂಪು, ಬಿಳಿ ಅಥವಾ ಹಳದಿ ಈರುಳ್ಳಿಯನ್ನು (Onion) ಯಾರೂ  ಖರೀದಿಸದಂತೆ ಸಲಹೆ ನೀಡಲಾಗಿದೆ. ಸ್ಟಿಕ್ಕರ್‌ಗಳು ಅಥವಾ ಪ್ಯಾಕೇಜಿಂಗ್ ಹೊಂದಿರದ ಯಾವುದೇ ಈರುಳ್ಳಿಯನ್ನು ಖರೀದಿಸದಂತೆ ಮತ್ತು ಉಪಯೋಗಿಸದಂತೆ US ನಲ್ಲಿ ಗ್ರಾಹಕರಿಗೆ ಸೂಚಿಸಲಾಗಿದೆ.

ಅನಾರೋಗ್ಯದ ಲಕ್ಷಣಗಳು :
ಸಾಲ್ಮೊನೆಲ್ಲಾ ಸೋಂಕು ಬ್ಯಾಕ್ಟೀರಿಯಾ ಎಂಬುದು ಸಾಲ್ಮೊನೆಲ್ಲಾ ಗುಂಪಿನಿಂದ ಉಂಟಾಗುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಗ್ಯಾಸ್ಟ್ರೊನೊಮಿಕ್ಲ್ ರೋಗಗಳಿಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾದಿಂದ ಅನಾರೋಗ್ಯಕ್ಕೆ ಒಳಗಾದವರಲ್ಲಿ ಅತಿಸಾರ, ಜ್ವರ (Fever) ಮತ್ತು ಹೊಟ್ಟೆ ನೋವಿನಂತಹ (stomach ache) ಲಕ್ಷಣಗಳು ಕಂಡುಬರುತ್ತವೆ. ಇದರ ಲಕ್ಷಣಗಳು 6 ಗಂಟೆಗಳಿಂದ 6 ದಿನಗಳವರೆಗೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. 

ಇದನ್ನೂ ಓದಿ :  TRUTH Social: ಸ್ವಂತ ಸೋಶಿಯಲ್ ಮೀಡಿಯಾ ವೇದಿಕೆ ಚಾಲನೆಗೆ ಮುಂದಾದ ಡೊನಾಲ್ಡ್ ಟ್ರಂಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

More Stories

Trending News