ಜನ ಸಂಖ್ಯೆಯ ಆಧಾರದಲ್ಲಿ ಮೊದಲ ಸ್ಥಾನದಲ್ಲಿ ಕ್ರಿಶ್ಚಿಯನ್, ಎರಡನೇ ಸ್ಥಾನದಲ್ಲಿ ಮುಸ್ಲಿಮರು !ಸಂಖ್ಯಾ ಪಟ್ಟಿಯಲ್ಲಿ ಹಿಂದೂಗಳ ಸ್ಥಾನ ಎಲ್ಲಿದೆ ನೋಡಿ !

World Religion Population: ಹಾಗಿದ್ದರೆ ಜನ ಸಂಖ್ಯಾ ಪಟ್ಟಿಯಲ್ಲಿ ಹಿಂದೂಗಳ ಸ್ಥಾನ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ  ನಿಮಗೂ ಇರಬಹುದು.   

Written by - Ranjitha R K | Last Updated : Apr 23, 2025, 01:52 PM IST
  • ಜಗತ್ತಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಜನರು ಅತಿ ಹೆಚ್ಚು
  • ಮುಸ್ಲಿಂ ಸಮುದಾಯ ಜನ ಸಂಖ್ಯೆಯ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ.
  • ಜನ ಸಂಖ್ಯಾ ಪಟ್ಟಿಯಲ್ಲಿ ಹಿಂದೂಗಳ ಸ್ಥಾನ ಯಾವುದು
ಜನ ಸಂಖ್ಯೆಯ ಆಧಾರದಲ್ಲಿ ಮೊದಲ ಸ್ಥಾನದಲ್ಲಿ ಕ್ರಿಶ್ಚಿಯನ್, ಎರಡನೇ  ಸ್ಥಾನದಲ್ಲಿ ಮುಸ್ಲಿಮರು !ಸಂಖ್ಯಾ ಪಟ್ಟಿಯಲ್ಲಿ ಹಿಂದೂಗಳ ಸ್ಥಾನ ಎಲ್ಲಿದೆ ನೋಡಿ !

World Religion Population : ಜಗತ್ತಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಜನರು ಅತಿ ಹೆಚ್ಚು. ಶೇ. 31.6 ರಷ್ಟು ಜನ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇವರ ಬಳಿಕ ಇರುವುದೇ ಮುಸ್ಲಿಂ ಸಮುದಾಯದ ಜನ. 25.8 ಪ್ರತಿಶತ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯ ಜನ ಸಂಖ್ಯೆಯ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಿದ್ದರೆ ಜನ ಸಂಖ್ಯಾ ಪಟ್ಟಿಯಲ್ಲಿ ಹಿಂದೂಗಳ ಸ್ಥಾನ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇರಬಹುದು. 

Add Zee News as a Preferred Source

ಹೌದು, ಈ ಪಟ್ಟಿಯಲ್ಲಿ ಹಿಂದೂಗಳು ಮೂರನೇ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲಿ ಹಿಂದೂಗಳ ಸಂಖ್ಯೆ ಶೇ.15.1 ರಷ್ಟಿದೆ. ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಧರ್ಮ. ಆದರೆ ಜನ ಸಂಖ್ಯಾ ಆಧಾರದಲ್ಲಿ ಇರುವ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೀರುವ ಧರ್ಮದ ಬಗ್ಗೆ ತಿಳಿದರೆ ಆಶ್ಚರ್ಯವಾಗಬಹುದು.  unaffiliated ನಾಲ್ಕನೇ ಸ್ಥಾನದಲ್ಲಿ ಬರುತ್ತವೆ.  unaffiliated ಎಂದರೆ ಯಾವುದೇ ಧರ್ಮವನ್ನು ನಂಬದ ಅಥವಾ ಅನುಸರಿಸದ ಜನರ ಗುಂಪು. ಜಗತ್ತಿನಲ್ಲಿ ಅವರ ಸಂಖ್ಯೆ ಶೇಕಡ 14.4 ರಷ್ಟಿದೆ. 

ಇದನ್ನೂ ಓದಿ : ಒಂದು ವಾರದ ಹಿಂದೆ ನೀಡಿದ್ದ ಪಾಕ್ ಸೇನಾ ಮುಖ್ಯಸ್ಥನ ಭಾಷಣದ ಬೆನ್ನಲ್ಲೇ ಪಹಲ್ಗಾಮ್ ಮೇಲೆ ಉಗ್ರರ ದಾಳಿ

ಬೌದ್ಧರು ಶೇಕಡಾ 6.6 ರೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ  ಯಹೂದಿಗಳು ಶೇಕಡಾ 0.2 ರೊಂದಿಗೆ ಕೊನೆಯ ಸ್ಥಾನದಲ್ಲಿ ಇದ್ದಾರೆ. ಈ ಪಟ್ಟಿಯನ್ನು ವಿಶ್ವ ಜನಸಂಖ್ಯೆ (2022) ಧರ್ಮದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಧರ್ಮವನ್ನು ತೊರೆಯುತ್ತಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರವು ನಡೆಸಿದ ಸಮೀಕ್ಷೆಯಲ್ಲಿ ಹೇಳಿರುವುದರಿಂದ ಈ ಮಾಹಿತಿಯು ಚರ್ಚೆಯಲ್ಲಿದೆ. ಇದರಲ್ಲಿಯೂ ಕ್ರಿಶ್ಚಿಯನ್ ಧರ್ಮವನ್ನು ತೊರೆಯುವವರ ಸಂಖ್ಯೆ ಅತಿ ಹೆಚ್ಚು. 

ಕ್ರಿಶ್ಚಿಯನ್ ಧರ್ಮವನ್ನು ತೊರೆಯುತ್ತಿರುವ ಈ ದೇಶಗಳ ಜನರು :
ಸ್ಪೇನ್, ಸ್ವೀಡನ್, ನೆದರ್ಲ್ಯಾಂಡ್ಸ್, ಜರ್ಮನಿ, ಕೆನಡಾ, ಯುಕೆ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಹೆಚ್ಚಿನ ಸಂಖ್ಯೆಯ ಜನರು ಕ್ರಿಶ್ಚಿಯನ್ ಧರ್ಮವನ್ನು ತೊರೆಯುತ್ತಿದ್ದಾರೆ. ಸ್ಪೇನ್‌ನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಶೇಕಡ 54 ಕ್ಕೆ ಇಳಿದಿದೆ. ಆಘಾತಕಾರಿ ವಿಷಯವೆಂದರೆ ಇಟಲಿಯಲ್ಲಿಯೂ ಸಹ ಶೇಕಡಾ 20 ರಷ್ಟು ಜನರು ಕ್ರಿಶ್ಚಿಯನ್ ಧರ್ಮವನ್ನು ತೊರೆದಿದ್ದಾರೆ. ಅದೇ ರೀತಿ, ಬೌದ್ಧ ಧರ್ಮದ ಅನುಯಾಯಿಗಳು ಕೂಡಾ ತಮ್ಮ ಧರ್ಮವನ್ನು ತ್ಯಜಿಸುತ್ತಿದ್ದಾರೆ.

ಇದನ್ನೂ ಓದಿ : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಅಂತಾರಾಷ್ಟ್ರೀಯ ಖಂಡನೆ; ಭಾರತಕ್ಕೆ ಅಮೆರಿಕ, ರಷ್ಯಾ ಬೆಂಬಲ

ಪ್ರಪಂಚದಲ್ಲಿರುವ ಧಾರ್ಮಿಕ ಗುಂಪುಗಳ ಸಂಖ್ಯೆ : 

ಧಾರ್ಮಿಕ ಗುಂಪುಗಳು   ಶೇಕಡಾವಾರು (%)
ಕ್ರಿಶ್ಚಿಯನ್   31.6 
ಮುಸ್ಲಿಂ   25.8
ಹಿಂದೂ 15.1
 unaffiliated 14.4
ಬೌದ್ಧ 6.6 
Flok ಧರ್ಮ 5.4
ಇತರೆ    0.8
ಯಹೂದಿ  0.2

ಧರ್ಮವನ್ನು ತೊರೆಯುವವರಲ್ಲಿ ಹೆಚ್ಚಿನವರು ಯುವಕರು, ವಿದ್ಯಾವಂತರು ಮತ್ತು ಪುರುಷರು ಎನ್ನುವುದು ಇಲಿ ಗಮನಾರ್ಹ .

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News