Rishi Sunak: ಇಂಗ್ಲೆಂಡ್ ಪ್ರಧಾನಿಯಾದ ರಿಷಿ ಸುನಕ್, ಆಶಿಶ್ ನೆಹ್ರಾಗೆ ಅಭಿನಂದನೆಗಳ ಮಹಾಪೂರ, ಏನಿದು?
Rishi Sunak-Ashish Nehra Memes: ರಿಷಿ ಸುನಕ್ ಅವರು ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ, ರಿಷಿ ಸುನಕ್ ಅವರ ಈ ಐತಿಹಾಸಿಕ ಸಾಧನೆಗೆ ಭಾರತೀಯರು ತುಂಬಾ ಹೆಮ್ಮೆಪಡುತ್ತಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆಶಿಶ್ ನೆಹ್ರಾ ಬಗ್ಗೆ ಮೀಮ್ಗಳನ್ನು ಪ್ರಕಟಗೊಳ್ಳಲು ಆರಂಭಿಸಿವೆ.
Memes On Rishi Sunak-Ashish Nehra - ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್ (ಯುಕೆ) ನ ನೂತನ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ ಮತ್ತು ಇದೊಂದು ಐತಿಹಾಸಿಕ ಘಟನೆಯಾಗಿದೆ, ಆದರೆ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾದ ನಂತರ, ಟ್ವಿಟರ್‌ನಲ್ಲಿ ಜನರು ಮಾಜಿ ಭಾರತೀಯ ವೇಗದ ಬೌಲರ್ ಆಶಿಶ್ ನೆಹ್ರಾ ಅವರನ್ನು ಅಭಿನಂದಿಸುತಿದ್ದಾರೆ. ಏಕೆ ತಿಳಿದುಕೊಳ್ಳೋಣ ಬನ್ನಿ...
ನಿರ್ಗಮಿತ ಪಿಎಂ ಲಿಜ್ ಟ್ರಸ್ ರಾಜೀನಾಮೆಯ ನಂತರ ಸೋಮವಾರ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾದ ಸುನಕ್, ಬ್ರಿಟನ್‌ನ ಪ್ರಧಾನಿಯಾದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಿಷಿ ಸುನಕ್ ಅವರ ಮೇಲೆ ಅನೇಕ ಮೈಮ್‌ಗಳನ್ನು ರಚಿಸಲಾಗುತ್ತಿದೆ ಮತ್ತು ಭಾರತೀಯ ಕ್ರಿಕೆಟಿಗ ಆಶಿಶ್ ನೆಹ್ರಾ ಅವರನ್ನು ಸಹ ಅಭಿನಂದಿಸಲಾಗುತ್ತಿದೆ, ವಾಸ್ತವದಲ್ಲಿ ಜನರು ಒಂದೇ ರೀತಿಯ ಲುಕ್ ಹಾಗೂ ಒಂದೇ ರೀತಿಯ ಶರೀರ ಸೌಷ್ಟ್ಯ ಹೊಂದಿರುವ ಕಾರಣ ಮೀಮ್ ಗಳನ್ನು ರಚಿಸಿ ಆನಂದಿಸುತ್ತಿದ್ದಾರೆ ಮತ್ತು ಮೀಮ್ ಗಳ ಮಹಾಪೂರವೇ ಹರಿದುಬಂದಿದೆ.
ವಾಸ್ತವವಾಗಿ, ರಿಷಿ ಸುನಕ್ ಮತ್ತು ಆಶಿಶ್ ನೆಹ್ರಾ ಇಬ್ಬರೂ ಬಹುತೇಕ ಒಂದೇ ರೀತಿ ಕಾಣುತ್ತಾರೆ, ಇಬ್ಬರ ಎತ್ತರವೂ ಒಂದೇ ಆಗಿರುತ್ತದೆ, ಇಬ್ಬರೂ ಸಹೋದರರಾಗಿದ್ದು, ಕುಂಭ ಮೇಳದಲ್ಲಿ ಪರಸ್ಪರ ಬೇರ್ಪಟ್ಟಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.
ರಿಷಿ ಸುನಕ್ ಮತ್ತು ಆಶಿಶ್ ನೆಹ್ರಾ ಅವರ ಕೆಲ ಮೀಮ್ ಗಳು ಇಲ್ಲಿವೆ
ಬ್ರಿಟಿಷ್ ಎಂಪೈರ್‌ಗೆ ಭಾರತೀಯ ದೊರೆ : ರಿಷಿ ಸುನಕ್ ಒಟ್ಟು ಆಸ್ತಿ ಎಷ್ಟು ಗೊತ್ತಾ..!
ಸುನಕ್ ಔಪಚಾರಿಕವಾಗಿ ಬ್ರಿಟಿಷ್ ಪ್ರಧಾನಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ
ಬ್ರಿಟನ್‌ನ ನೂತನವಾಗಿ ನೇಮಕಗೊಂಡ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಹಿಂದಿನವರು ಮಾಡಿದ ಕೆಲವು "ತಪ್ಪುಗಳನ್ನು" ಸರಿಪಡಿಸಲು ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ. ಇದೇ ವೇಳೆ, "ಆರ್ಥಿಕ ಸ್ಥಿರತೆ ಮತ್ತು ವಿಶ್ವಾಸವನ್ನು ಮರುಸ್ಥಾಪಿಸುವುದು" ತನ್ನ ಸರ್ಕಾರದ ಕಾರ್ಯಸೂಚಿಯಲ್ಲಿ ಕೇಂದ್ರವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ. ಮಹಾರಾಜ ಚಾರ್ಲ್ಸ್ III ಅವರನ್ನು ಭೇಟಿಯಾದ ನಂತರ ಸುನಕ್ ಅವರು ಮಂಗಳವಾರ ಔಪಚಾರಿಕವಾಗಿ ಭಾರತೀಯ ಮೂಲದ ಮೊದಲ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದೀಪಾವಳಿಯ ದಿನದಂದು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕರಾಗಿ ಅವಿರೋಧವಾಗಿ ಅವರು ಆಯ್ಕೆಯಾಗಿದ್ದರು.
ಇದನ್ನೂ ಓದಿ-UK Prime Minister: ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ
ಕಳೆದ 210 ವರ್ಷಗಳಲ್ಲಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿ ಸುನಕ್
ಯುಕೆ ಮಾಜಿ ಹಣಕಾಸು ಸಚಿವ ಸುನಕ್ ಹಿಂದೂ ಮತ್ತು ಕಳೆದ 210 ವರ್ಷಗಳಲ್ಲಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನ ಹೊರಗೆ, ದೇಶವು ಎದುರಿಸುತ್ತಿರುವ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಸಹಾನುಭೂತಿಯಿಂದ ವ್ಯವಹರಿಸುವುದಾಗಿ ಮತ್ತು "ಪ್ರಾಮಾಣಿಕ, ವೃತ್ತಿಪರ ಮತ್ತು ಜವಾಬ್ದಾರಿಯುತ" ಸರ್ಕಾರವನ್ನು ಮುನ್ನಡೆಸುವುದಾಗಿ ಸುನಕ್ ಹೇಳಿದ್ದರು. ನಾಯಕ ಈ ಹಿಂದಿನ ಪ್ರಧಾನಿ ಲೀಸ್ ಟ್ರಸ್ ಮಾಡಿರುವ ತಪ್ಪುಗಳನ್ನು ಸುಧಾರಿಸಲು ತಾವು ಪ್ರಧಾನಿಯಾಗಿ ಆಯ್ಕೆಯಾಗಿರುವುದಾಗಿ ಕನ್ಸರ್ವೇಟಿವ್ ಪಕ್ಷದ ನಾಯಕ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ