)
ಉದ್ಯೋಗ ಜಗತ್ತಿನಲ್ಲಿ ನಿಯಮಗಳು ಕಟ್ಟು ಪಾಡುಗಳಿಗೆ ಕೊರತೆ ಇರುವುದಿಲ್ಲ. ವೃತ್ತಿ ಬದುಕಿನಲ್ಲಿ ಕಂಪನಿ ವಿಧಿಸುವ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಆದರೆ ಪ್ರಪಂಚದ ಅನೇಕ ದೇಶಗಳಲ್ಲಿ ಉದ್ಯೋಗ ಪಡೆಯುವಲ್ಲಿ ಅಥವಾ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶಿಷ್ಟ ಮತ್ತು ವಿಚಿತ್ರ ನಿಯಮಗಳಿವೆ.
ಟೋಪಿ ಧರಿಸಿದರೆ ವೇತನ ಕಟ್ :
ನ್ಯೂಜಿಲೆಂಡ್ನಲ್ಲಿ ಕಚೇರಿಯಲ್ಲಿ ಫನ್ನಿ ಹ್ಯಾಟ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾವುದೇ ಉದ್ಯೋಗಿ ಟೋಪಿ ಧರಿಸಿದರೆ ಅದನ್ನು ಸಮವಸ್ತ್ರ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ, ಉದ್ಯೋಗಿಯ ವೇತನದ 10% ವರೆಗೆ ಕಡಿತಗೊಳಿಸಬಹುದು. ಈ ನಿಯಮವನ್ನು ಇಲ್ಲಿ ಬಹಳ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಓವರ್ ಟೈಮ್ ಮಾಡುವಂತಿಲ್ಲ :
ಮಾಧ್ಯಮ ವರದಿಗಳ ಪ್ರಕಾರ, ಜರ್ಮನಿಯಲ್ಲಿ ಅವಧಿ ಮೀರಿ ಅಂದರೆ ಓವರ್ ಟೈಮ್ ಕೆಲಸ ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ನಿಗದಿತ ಸಮಯದ ಮಿತಿಯ ನಂತರ ಕೆಲಸ ಮಾಡಿದ್ದಕ್ಕಾಗಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ತುರ್ತು ಪರಿಸ್ಥಿತಿ ಇಲ್ಲದಿದ್ದರೆ, ಕೆಲಸದ ಸಮಯ ಮುಗಿದ ನಂತರ ಉದ್ಯೋಗಿಯನ್ನು ಸಂಪರ್ಕಿಸುವುದನ್ನು ಸಹ ನಿಷೇಧಿಸಲಾಗಿದೆ.
ಸೊಂಟದ ಗಾತ್ರ ಇಷ್ಟೇ ಇರಬೇಕು :
ಜಪಾನ್ನಲ್ಲಿ ಮೆಟಾಬೊ ಕಾನೂನು ಇದೆ. ಅದರ ಪ್ರಕಾರ ಜನರಿಗೆ ಅವರ ಸೊಂಟದ ಗಾತ್ರದ ಆಧಾರದ ಮೇಲೆ ಉದ್ಯೋಗಗಳನ್ನು ನೀಡಲಾಗುತ್ತದೆ. ಪುರುಷರ ಸೊಂಟದ ಗಾತ್ರವು 33.5 ಇಂಚುಗಳಿಗಿಂತ ಹೆಚ್ಚಿರಬಾರದು ಮತ್ತು ಮಹಿಳೆಯರ ಸೊಂಟದ ಗಾತ್ರವು 35.4 ಇಂಚುಗಳಿಗಿಂತ ಹೆಚ್ಚಿರಬಾರದು. ಸೊಂಟದ ಗಾತ್ರವು ನಿಗದಿ ಪಡಿಸಿದ ಮಿತಿಯನ್ನು ಮೀರಿದರೆ, ಉದ್ಯೋಗಿ ಮೂರು ತಿಂಗಳೊಳಗೆ ಡಯೆಟಿಂಗ್ ಕ್ಲಾಸ್ ಗೆ ಸೇರಬೇಕು ಅಥವಾ ತೂಕ ಇಳಿಸಿಕೊಳ್ಳಬೇಕು.
ಕೆಲಸದಿಂದ ವಜಾ ಮಾಡಲು ಸಾಧ್ಯವಿಲ್ಲ :
ಬ್ರಿಟನ್ನಲ್ಲಿ, ಒಂದು ಕಂಪನಿಯು 100 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಆ ಕಂಪನಿಯು ಸರ್ಕಾರಕ್ಕೆ ತಿಳಿಸದೆ ಯಾರನ್ನೂ ಕೆಲಸದಿಂದ ವಜಾ ಮಾಡಲು ಸಾಧ್ಯವಿಲ್ಲ. ಇಲ್ಲಿ, ಉದ್ಯೋಗಿಗಳಿಗೆ ಹೊಸ ಉದ್ಯೋಗವನ್ನು ಹುಡುಕಲು ಅಥವಾ ತಯಾರಿ ನಡೆಸಲು 1 ರಿಂದ 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.