ಹೊಸ ವರ್ಷಕ್ಕೆ ಪಾಕಿಸ್ತಾನದಲ್ಲಿ ಹಣದುಬ್ಬರ ಬಿಸಿ; ಎಲ್ಲವೂ 'ದುಬಾರಿ'

ದೇಶೀಯ ಎಲ್‌ಪಿಜಿ ಸಿಲಿಂಡರ್ ಮೇಲೆ ಅತ್ಯಂತ ತೀವ್ರವಾದ ಹೊಡೆತ ಬಿದ್ದಿದೆ. 11.8 ಕೆಜಿಯಷ್ಟು ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಒಂದೇ ಬಾರಿಗೆ 277 ರೂಪಾಯಿ 79 ಪೈಸೆ ಹೆಚ್ಚಿಸಲಾಗಿದೆ.

Last Updated : Jan 2, 2020, 09:16 AM IST
ಹೊಸ ವರ್ಷಕ್ಕೆ ಪಾಕಿಸ್ತಾನದಲ್ಲಿ ಹಣದುಬ್ಬರ ಬಿಸಿ; ಎಲ್ಲವೂ 'ದುಬಾರಿ' title=

ಇಸ್ಲಾಮಾಬಾದ್: ಈಗಾಗಲೇ, ಹೆಚ್ಚಿನ ಹಣದುಬ್ಬರದಿಂದ ಬಳಲುತ್ತಿರುವ ಪಾಕಿಸ್ತಾನದ ಜನರಿಗೆ ಹೊಸ ವರ್ಷದ ಮೊದಲ ದಿನದಂದು ತೀವ್ರ ಹೊಡೆತ ಬಿದ್ದಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ 61 ಪೈಸೆ ಹೆಚ್ಚಿಸಲಾಗಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 116 ರೂಪಾಯಿ 60 ಪೈಸೆ ಹೆಚ್ಚಾಗಿದೆ.

ಡೀಸೆಲ್ ಬೆಲೆಯನ್ನು 3 ರೂಪಾಯಿ 10 ಪೈಸೆ ಹೆಚ್ಚಿಸಲಾಗಿದೆ. ಇದರೊಂದಿಗೆ ಡೀಸೆಲ್ ಪೆಟ್ರೋಲ್ ಬೆಲೆ 127 ರೂಪಾಯಿ 26 ಪೈಸೆ ಆಗಿದೆ.

ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ ಅತ್ಯಂತ ಗಮನಾರ್ಹವಾದ ಏರಿಕೆ ಕಂಡು ಬಂದಿದೆ. 11.8 ಕೆಜಿ ತೂಕದ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಒಂದೇ ಬಾರಿಗೆ 277 ರೂಪಾಯಿ 79 ಪೈಸೆ ಹೆಚ್ಚಿಸಲಾಗಿದೆ. ಈಗ ಸಿಲಿಂಡರ್‌ನ ಬೆಲೆ 1513.69 ರೂ.ಗಳಿಂದ 1791.48 ರೂ.ಗೆ ಏರಿದೆ. ಸೀಮೆಎಣ್ಣೆಯ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ 10 ಪೈಸೆ ಹೆಚ್ಚಿಸಲಾಗಿದೆ.

ವಿಶ್ವದ ಎಲ್ಲೆಡೆ ಪೆಟ್ರೋಲಿಯಂ ಉತ್ಪನ್ನಗಳು ದುಬಾರಿಯಾಗಿದೆ. ಆದರೆ ಪಾಕಿಸ್ತಾನ ಸರ್ಕಾರವು ಹಿಟ್ಟಿನ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಬಲೂಚಿಸ್ತಾನದಲ್ಲಿ 20 ಕೆಜಿ ಗೋಧಿ ಹಿಟ್ಟಿನ ಬೆಲೆಯನ್ನು 80 ರೂ. ಏರಿಸಿದ್ದು, ಈಗ 20 ಕೆಜಿ ಹಿಟ್ಟಿನ ಬೆಲೆ 1100 ರೂ. ತಲುಪಿದೆ.

ಕರಾಚಿಯಲ್ಲಿ ಹಿಟ್ಟು ಇನ್ನೂ ಹೆಚ್ಚು ದುಬಾರಿಯಾಗಿದೆ. ಇಲ್ಲಿ ಹತ್ತು ಕೆಜಿ ಹಿಟ್ಟಿನ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಈಗ ಈ ಹತ್ತು ಕೆಜಿ ಹಿಟ್ಟಿನ ಬೆಲೆಯನ್ನು 700 ರೂ. ದಾಟಿದೆ. ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪಾಕಿಸ್ತಾನದ ಜನತೆ ತತ್ತರಿಸಿದ್ದು 2020ರಲ್ಲಿ 'ದುಬಾರಿ' ಬೆಲೆಗಳಿಂದಾಗಿ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಪರದಾಡುವಂತಾಗಿದೆ.
 

Trending News