)
ಭಾರತದ ನರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನಿತ್ಯ ಏನಾದರೂ ಒಂದು ಅವಘಡ ನಡೆಯುತ್ತಲೇ ಇರುತ್ತದೆ. ಅದು ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತಿದೆ. ಸದ್ಯ ಇದೀಗ ಪಾಕಿಸ್ತಾನ ಥೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಸ್ಥಾಪಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇನ್ನು ಲಭ್ಯವಾಗಿಲ್ಲ.
ಪಾಕಿಸ್ತಾಮದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅದ್ಯಾಲ ಸೆಂಟ್ರಲ್ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇನ್ನೊಂದು ವರದಿ ಪ್ರಕಾರ ಇಮ್ರಾನ್ ಖಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಭೇಟಿಗೆ ಯಾರನ್ನು ಜೈಲು ಅಧಿಕಾರಿಗಳು ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಬಂಧ ಇಮ್ರಾನ್ ಖಾನ್ ಅವರ ಸಹೋದರಿ ಸೆಂಟ್ರಲ್ ಜೈಲಿನ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು, ಇಮ್ರಾನ್ ಖಾನ್ ಅವರ ಜೀವ ತೆಗೆಯಲು ಸಂಚು ರೂಪಿಸಲಾಗಿದೆ ಎಂದು ಬಲೂಚಿಸ್ತಾನ್ನ ವಿದೇಶಾಂಗ ಸಚಿವಾಲಯ ಆರೋಪಿಸಿದ ಬಳಿಕ ಊಹಾಪೋಹಾಗಳು ಹೆಚ್ಚಾಗಿವೆ. ಮಾಹಿತಿ ಒಂದರ ಪ್ರಕಾರ, ಇಮ್ರಾನ್ ಖಾನ್ ಅವರನ್ನು ಸೆಂಟ್ರಲ್ ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು ಕೋರ್ಟ್ ಆದೇಶ ಇದ್ದರೂ ಕಳೆದ ಮೂರು ವಾರಗಳಿಂದ ಕುಟುಂಬ ಸದಸ್ಯರಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ರಾವಲ್ಪಿಂಡಿಯ ಅದ್ಯಾಲ ಸೆಂಟ್ರಲ್ ಜೈಲಿನ ಮುಂದೆ ಸದ್ಯ ಸಾವಿರಾರು ಪಿಟಿಐ ಪಕ್ಷದ ಕಾರ್ಯಕರ್ತರು ಸೇರಿದ್ದು ಇಮ್ರಾನ್ ಖಾನ್ ಭೇಟಿಗೆ ಆಗ್ರಹಿಸುತ್ತಿದ್ದಾರೆ. ಇಮ್ರಾನ್ ಖಾನ್ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಜೊತೆಗೆ ಸಹೋದರಿ ಕೂಡ ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಪ್ರತಿಭಟಿಸುತ್ತಿದ್ದಾರೆ. ಆದರೆ ಇದು ಯಾವುದಕ್ಕೂ ಅಲ್ಲಿ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎನ್ನಲಾಗುತ್ತಿದೆ.
ಇಮ್ರಾನ ಖಾನ್ರನ್ನ ಜೈಲಿಗೆ ಹಾಕಿದ್ದು ಯಾಕೆ?
ಇಮ್ರಾನ್ ಖಾನ್ ಅವರನ್ನು ಹಲವಾರು ಪ್ರಕರಣಗಳಲ್ಲಿ ದೋಷಿ ಎಂದು ರಾವಲ್ಪಿಂಡಿಯ ಜೈಲಿಗೆ ಹಾಕಲಾಗಿದೆ. ಇದರಲ್ಲಿ ಪತ್ನಿ ಜೊತೆ ಸೇರಿ ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅಶಾಂತಿ ಕದಡಿರುವ ಆರೋಪಗಳು ಇವೆ. ಜೊತೆಗೆ ತೋಶಖಾನ ಭ್ರಷ್ಟಾಚಾರ ಪ್ರಕರಣದ ಆರೋಪ ಇದೆ. ಕೊನೆಯದಾಗಿ 2023ರ ಆಗಸ್ಟ್ನಲ್ಲಿ ಅರೆಸ್ಟ್ ಮಾಡಿ ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಅವರಿಗೆ 14 ವರ್ಷಗಳ ಕಾಲ ಕೋರ್ಟ್ ಶಿಕ್ಷೆ ವಿಧಿಸಿತ್ತು. ಅಂದಿನಿಂದ ರಾವಲ್ಪಿಂಡಿಯ ಸೆಂಟ್ರಲ್ ಜೈಲಿನಲ್ಲಿ ಇಮ್ರಾನ್ ಖಾನ್ರನ್ನು ಇರಿಸಲಾಗಿತ್ತು.