ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಅಬ್ದುಲ್ ರೌಫ್ ಅಜರ್ ಹತ್ಯೆ !ಕಂದಹಾರ್ ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಈತ

ಪ್ರತಿದಿನ ಭಾರತದ ವಿರುದ್ಧ ವಿಷ ಕಾರುತ್ತಿದ್ದ ಈ ಅಬ್ದುಲ್ ರೌಫ್ ಅಜರ್ ನ ಹತ್ಯೆಯಾಗಿದೆ. ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಈ ಉಗ್ರನನ್ನು ಹತ್ಯೆ ಮಾಡಲಾಗಿದೆ. 

Written by - Ranjitha R K | Last Updated : May 8, 2025, 02:48 PM IST
  • ಭಾರತೀಯ ಸೇನೆ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಸಮರ
  • ಮತ್ತೊಬ್ಬ ದೊಡ್ಡ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.
  • ಭಯೋತ್ಪಾದಕ ಅಬ್ದುಲ್ ರವೂಫ್ ಅಜರ್ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹತ
ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಅಬ್ದುಲ್ ರೌಫ್ ಅಜರ್ ಹತ್ಯೆ !ಕಂದಹಾರ್ ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಈತ

ಭಾರತೀಯ ಸೇನೆ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಸಮರ ಸಾರಿದೆ. ಆಪರೇಷನ್ ಸಿಂಧೂರ್ ಇನ್ನೂ ನಡೆಯುತ್ತಿದೆ. ಈ ಅನುಕ್ರಮದಲ್ಲಿ, ಮತ್ತೊಬ್ಬ ದೊಡ್ಡ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಕಂದಹಾರ್ ವಿಮಾನ ಅಪಹರಣದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಅಬ್ದುಲ್ ರವೂಫ್ ಅಜರ್ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಈತ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಅಲ್ಲಿಯೇ ಅವಿತುಕೊಂಡಿದ್ದ.  ಪ್ರತಿದಿನ ಭಾರತದ ವಿರುದ್ಧ ವಿಷ ಕಾರುತ್ತಿದ್ದ ಈ ಅಬ್ದುಲ್ ರೌಫ್ ಅಜರ್. ಆದರೆ ಭಾರತೀಯ ಸೇನೆ ಇದೀಗ ತನ್ನ ಕೆಲಸ ಮುಗಿಸಿದೆ. 

Add Zee News as a Preferred Source

ಮಾಹಿತಿಯ ಪ್ರಕಾರ, ಅಬ್ದುಲ್ ರೌಫ್ ಅಜರ್  ಮಸೂದ್ ಅಜರ್‌ನ ಸಹೋದರ ಎಂದೂ ಹೇಳಲಾಗಿದೆ.  ದಾಳಿಯ ವೇಳೆ ಮಸೂದ್ ಕುಟುಂಬದೊಂದಿಗೆ ಈತನೂ ಮೃತಪಟ್ಟಿರಬಹುದು  ಎಂದು ಕೂಡಾ ಹೇಳಲಾಗುತ್ತಿದೆ. ಆದರೆ ಈ  ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕು ಅಷ್ಟೇ. ಅದೇನೇ ಇರಲಿ ಅಬ್ದುಲ್ ರವೂಫ್ ಅಝರ್ ಈ ಲೋಕವನು ತ್ಯಜಿಸಿರುವುದು ಮಾತ್ರ ಸತ್ಯ.  

ಇದನ್ನೂ ಓದಿ : ನಡುಗಿದ ಪಾಕಿಸ್ತಾನ : ಲಾಹೋರ್ ಬಳಿಕ ಕರಾಚಿಯಲ್ಲಿಯೂ ಭಾರೀ ವಿಸ್ಪೋಟ ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್

ವರದಿಯ ಪ್ರಕಾರ, ಅಜರ್ ಬಹಳ ಹಿಂದಿನಿಂದಲೂ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಎರಡನೇ ಅತಿದೊಡ್ಡ ನಾಯಕನಾಗಿದ್ದ. ಅದೇ ವರದಿಯಲ್ಲಿ ಅವನು ಮಸೂದ್ ಅಜರ್‌ನ ಕಿರಿಯ ಸಹೋದರ ಎಂದು ಹೇಳಲಾಗಿತ್ತು. ರೌಫ್ ದೀರ್ಘಕಾಲದವರೆಗೆ ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐನಿಂದ ರಕ್ಷಣೆ ಪಡೆಯುತ್ತಿದ್ದ. ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದಲ್ಲಿ ಬಹಿರಂಗವಾಗಿ ಸಕ್ರಿಯನಾಗಿದ್ದ. 2010 ರಲ್ಲಿ ಅಮೆರಿಕ ಅವನ ಮೇಲೆ ನಿರ್ಬಂಧಗಳನ್ನು ವಿಧಿಸಿತು. ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಅವನನ್ನು ಸೇರಿಸಲು ಭಾರತ ಪದೇ ಪದೇ ಮಾಡಿದ ಪ್ರಯತ್ನಗಳನ್ನು ಚೀನಾ ವೀಟೋ ಮಾಡಿತು. 

1999ರ ಕಂದಹಾರ್ ಅಪಹರಣದ IC -814 ನ ಮಾಸ್ಟರ್ ಮೈಂಡ್ : 
ಇಷ್ಟೇ ಅಲ್ಲ,  ಈ ರೌಫ್ ಅಜರ್ 1999 ರಲ್ಲಿ ನಡೆದಿದ್ದ IC -814 ಕಂದಹಾರ್ ಅಪಹರಣದ ಮಾಸ್ಟರ್ ಮೈಂಡ್ ಕೂಡ  ಆಗಿದ್ದ. ಕಠ್ಮಂಡುವಿನಿಂದ ದೆಹಲಿಗೆ ಹೋಗುತ್ತಿದ್ದಾಗ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಅಪಹರಿಸಲಾಯಿತು. ಈ ಅಪಹರಣದ ಉದ್ದೇಶ ಅವನ ಸಹೋದರ ಮಸೂದ್ ಅಜರ್‌ನನ್ನು ಭಾರತೀಯ ಜೈಲಿನಿಂದ ಬಿಡುಗಡೆ ಮಾಡುವುದಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಹಯೋಗದೊಂದಿಗೆ ರೌಫ್ ಈ ಪಿತೂರಿ ನಡೆಸಿದ್ದ. ಭಾರತೀಯ ವಿಮಾನವನ್ನು ಅಮೃತಸರ, ಲಾಹೋರ್ ಮತ್ತು ದುಬೈ ಮೂಲಕ ಕಂದಹಾರ್‌ಗೆ ಕೊಂಡೊಯ್ದಿದ್ದ.   ಅಪಹರಣಕಾರರು 176 ಪ್ರಯಾಣಿಕರು ಮತ್ತು 15 ಸಿಬ್ಬಂದಿಗೆ ಬದಲಾಗಿ ಮಸೂದ್ ಅಜರ್, ಮುಷ್ತಾಕ್ ಜರ್ಗರ್ ಮತ್ತು ಒಮರ್ ಶೇಖ್ ಅವರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ಭಾರತ ಸರ್ಕಾರ ಸ್ವೀಕರಿಸಿತ್ತು. 

ಇದನ್ನೂ ಓದಿ : ಭಾರತದ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಪರವಾಗಿ ಕಣ್ಣೀರು ಹಾಕಿದ ಏಕೈಕ ರಾಷ್ಟ್ರ ಇದು !ಭಯೋತ್ಪಾದಕರ ಬಗ್ಗೆಅದ್ಯಾಕೆ ಅಷ್ಟು ಕರುಣೆ ಇವರಿಗೆ ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News