ವಿಶ್ವಾದ್ಯಂತ ಲಕ್ಷದ ಹತ್ತಿರ ಸಾಗುತ್ತಿರುವ ಕೊರೋನಾ ಮೃತರ ಸಂಖ್ಯೆ, 16 ಲಕ್ಷಕ್ಕೂ ಹೆಚ್ಚು ಪೀಡಿತರು

ಕೊರೋನಾ ಹೊಡೆತಕ್ಕೆ ಸಿಲುಕಿ ಇಟಲಿ, ಅಮೆರಿಕ, ಸ್ಪೇನ್ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಇಟಲಿ ಸೋಂಕು ಪೀಡಿತರ ಮತ್ತು ಸತ್ತವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇಟಲಿಯಲ್ಲಿ ಸೋಂಕಿನಿಂದ 18,279 ಮಂದಿ ಮೃತಪಟ್ಟಿದ್ದರೆ, ಪ್ರಕರಣಗಳ ಸಂಖ್ಯೆ 1,43,626ಕ್ಕೆ ಏರಿಕೆಯಾಗಿದೆ.

Updated: Apr 10, 2020 , 03:27 PM IST
ವಿಶ್ವಾದ್ಯಂತ ಲಕ್ಷದ ಹತ್ತಿರ ಸಾಗುತ್ತಿರುವ ಕೊರೋನಾ ಮೃತರ ಸಂಖ್ಯೆ, 16 ಲಕ್ಷಕ್ಕೂ ಹೆಚ್ಚು ಪೀಡಿತರು

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಸೋಂಕು ಪೀಡಿತರ ಸಂಖ್ಯೆ ತೀವ್ರವಾಗಿ ಏರಿಕೆ ಆಗುತ್ತಿದ್ದು ವಿಶ್ವಾದ್ಯಂತ 16,00,427 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಒಟ್ಟು 95,699 ಜನರು ಈಗಾಗಲೇ  ಕೊರೊನಾವೈರಸ್  (Coronavirus)ಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷವನ್ನೂ ದಾಟಲಿದೆ.

Coronavirus: ಈ ಬ್ಯಾಂಕಿನಲ್ಲಿ ಸಿಗಲಿಗೆ 5 ವಿಶೇಷ ತುರ್ತು ಸಾಲ

ಕೊರೋನಾ  ಕೋವಿಡ್ -19 (Covid-19) ಹೊಡೆತಕ್ಕೆ ಸಿಲುಕಿ ಇಟಲಿ (Italy), ಅಮೆರಿಕ (America), ಸ್ಪೇನ್ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಇಟಲಿ ಸೋಂಕು ಪೀಡಿತರ ಮತ್ತು ಸತ್ತವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇಟಲಿಯಲ್ಲಿ ಸೋಂಕಿನಿಂದ 18,279 ಮಂದಿ ಮೃತಪಟ್ಟಿದ್ದರೆ, ಪ್ರಕರಣಗಳ ಸಂಖ್ಯೆ 1,43,626ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನ ಅಮೆರಿಕದ್ದಾಗಿದೆ. ಅಮೇರಿಕಾದಲ್ಲಿ ಕೊರೋನಾ ಸೋಂಕಿನಿಂದ 16,498 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ಸೋಂಕಿತರ ಸಂಖ್ಯೆ 4,64,865ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಸ್ಪೇನ್​​ನಲ್ಲಿ 15,447 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಸೋಂಕು 1,53,222 ಮಂದಿಗೆ ಹರಡಿದೆ. ಇದಾದ ಮೇಲೆ ಫ್ರಾನ್ಸ್​ (France)ನಲ್ಲಿ 86,334 ಮಂದಿಗೆ ಸೋಂಕು ತಗುಲಿದ್ದು, 12,210 ಜನರು ಮೃತಪಟ್ಟಿದ್ದಾರೆ. ಕೊರೋನಾ ಮಹಾಮಾರಿಯ ತವರು ದೇಶವಾದ ಚೀನಾದಲ್ಲಿ 81,907 ಜನರಿಗೆ ಸೋಂಕು ತಗುಲಿದ್ದು 3,336 ಜನ ಬಲಿಯಾಗಿದ್ದಾರೆ. ಜರ್ಮನಿಯಲ್ಲಿ 1,18,245 ಜನರಿಗೆ ಸೋಂಕು ತಗುಲಿದೆ. 2607 ಮಂದಿ ಮೃತಪಟ್ಟಿದ್ದಾರೆ. ಈ ನಡುವೆವಿಶ್ವಾದ್ಯಂತ 3,54,464 ಮಂದಿ ಗುಣಮುಖರಾಗಿದ್ದಾರೆ. 

ಲಾಕ್‌ಡೌನ್ ಮಧ್ಯೆ ಟ್ರೆಂಡ್ ಆಗಿದೆ ಈ App, ಆದರೂ ಬಳಕೆದಾರರು ಇದನ್ನ ಡಿಲೀಟ್ ಮಾಡ್ತಿರೋದು ಏಕೆ?

ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಈ ಪೈಕಿ 199 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಒಟ್ಟು 503 ಜನ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 678 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ 33 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.