ಪಾಕ್ ನಲ್ಲಿ ರೈಲನ್ನೇ ಹೈಜಾಕ್‌ ಮಾಡಿದ ಉಗ್ರರು

ರಾತ್ರಿ ಪೂರ್ತಿ ನಡೆದ ಕಾರ್ಯಾಚರಣೆಯಲ್ಲಿ ರೈಲಿನಲ್ಲಿದ್ದ 15 ಜನ ಮಕ್ಕಳು, 58 ಪುರುಷರು ಹಾಗೂ 31 ಮಹಿಳೆಯರು ಸೇರಿದಂತೆ ಒಟ್ಟು 104 ಪ್ರಯಾಣಿಕರನ್ನು ಪಾಕ್‌ ಭದ್ರತಾ ಪಡೆ ರಕ್ಷಿಸಿದೆ. 

Written by - Manjunath Naragund | Last Updated : Mar 12, 2025, 12:46 PM IST
  • ಪಾಕಿಸ್ತಾನದ ಬಲೂಚಿಸ್ತಾನ್ ಎಂಬಲ್ಲಿ ನಿನ್ನೆ (ಮಂಗಳವಾರ) ಉಗ್ರರು ರೈಲಿನ ಮೇಲೆ ದಾಳಿ ಮಾಡಿ, ಅಲ್ಲಿರುವ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡಿದ್ದರು
  • ರೈಲಿನಲ್ಲಿದ್ದ 182 ಭದ್ರತಾ ಸಿಬ್ಬಂದಿಗಳನ್ನು ಪ್ರತ್ಯೇಕತಾವಾದಿ ಉಗ್ರರು ವತ್ತೆಯಾಳಾಗಿ ಇರಿಸಿಕೊಂಡಿದ್ದರು
  • ರೈಲಿನ ಮೇಲೆ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಬಂಡುಕೋರರು ದಾಳಿ ಮಾಡಿದ್ದರು ಎನ್ನಲಾಗುತ್ತಿದೆ
 ಪಾಕ್ ನಲ್ಲಿ ರೈಲನ್ನೇ ಹೈಜಾಕ್‌ ಮಾಡಿದ ಉಗ್ರರು

Terrorists Hijack Train in Pakistan: ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಎಂಬಲ್ಲಿ ನಿನ್ನೆ (ಮಂಗಳವಾರ) ಉಗ್ರರು ರೈಲಿನ ಮೇಲೆ ದಾಳಿ ಮಾಡಿ, ಅಲ್ಲಿರುವ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡಿದ್ದರು.ಆ ರೈಲಿನಲ್ಲಿ ಸುಮಾರು 450 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Add Zee News as a Preferred Source

ರೈಲಿನಲ್ಲಿದ್ದ 182 ಭದ್ರತಾ ಸಿಬ್ಬಂದಿಗಳನ್ನು ಪ್ರತ್ಯೇಕತಾವಾದಿ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.ಈಗ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಪಾಕಿಸ್ತಾನದ ಸೇನೆಯು ನಿರತರಾಗಿದ್ದು, ಈಗಾಗಲೇ ದಾಳಿಕೋರರಿಂದ 104 ಪ್ರಯಾಣಿಕರನ್ನು ರಕ್ಷಿಸಲಾಗಿದೆ.ಗುಂಡಿನ ದಾಳಿಯಲ್ಲಿ 16 ಜನ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಧೋನಿ ಮಾತ್ರವಲ್ಲ... 4 ಸೂಪರ್‌ಸ್ಟಾರ್ ಆಟಗಾರರ ವೃತ್ತಿಜೀವನವೂ ಐಪಿಎಲ್‌ 2025ರ ಬಳಿಕ ಕೊನೆಯಾಗುವುದು

ಈ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.ಇನ್ನೊಂದೆಡೆಗೆ ಚಾಂಪಿಯನ್ಸ್‌ ಟ್ರೋಫಿ ಮುಕ್ತಾಯವಾಗುತ್ತಿದ್ದಂತೆಯೇ ಪಾಕ್ ನಲ್ಲಿ ಈ ರೀತಿ ಭಯಾನಕ ಬೆಳವಣಿಗೆ ಕಂಡುಬಂದಿದ್ದನ್ನು ನೋಡಿ ನಮ್ಮ ಜನರು ಭಾರತ ತಂಡ ಅಲ್ಲಿಗೆ ಹೋಗದೆ ಇರುವುದು ಒಳ್ಳೆಯದೇ ಆಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.ಪಾಕಿಸ್ತಾನದಲ್ಲಿ ನಿನ್ನೆ ರಾತ್ರಿ ಇಡೀ ಗುಂಡಿನ ಚಕಮಕಿ ಮುಂದುವರೆದಿದೆ.

ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುವ ಜಾಫರ್ ಎಕ್ಸ್‌ಪ್ರೆಸ್‌ ರೈಲು ಎಂದಿನಂತೆ ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಟಿತ್ತು. ರೈಲು ಕ್ವೆಟಾದ ಸ್ಟೇಷನ್‌ ನಿಂದ ಸ್ವಲ್ಪ ಮುಂದೆ ಹೋದಂತೆ ಏಕಾಏಕಿ ರೈಲಿನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.ರೈಲಿನ ಮೇಲೆ ದಾಳಿ ಮಾಡಿರುವವರನ್ನು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಯ ಬಂಡುಕೋರರು ಎನ್ನಲಾಗುತ್ತಿದೆ.ರಾತ್ರಿ ಇಡೀ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 450 ಜನರಿಗೆ ಜೀವ ಭಯ ಎದುರಾಗಿತ್ತು.ಕೆಲವು ಗಂಟೆಗಳ ನಂತರ ಉಗ್ರರು ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದರು.ಆದರೆ, ಇಲ್ಲಿನ ಭದ್ರತಾ ಸಿಬ್ಬಂದಿಯನ್ನು ಟಾರ್ಗೆಟ್‌ ಮಾಡಿ 182 ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ರಾತ್ರಿ ಪೂರ್ತಿ ನಡೆದ ಕಾರ್ಯಾಚರಣೆಯಲ್ಲಿ ರೈಲಿನಲ್ಲಿದ್ದ 15 ಜನ ಮಕ್ಕಳು, 58 ಪುರುಷರು ಹಾಗೂ 31 ಮಹಿಳೆಯರು ಸೇರಿದಂತೆ ಒಟ್ಟು 104 ಪ್ರಯಾಣಿಕರನ್ನು ಪಾಕ್‌ ಭದ್ರತಾ ಪಡೆ ರಕ್ಷಿಸಿದೆ. 

ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಲ್ಲ.. ಈ ಇಬ್ಬರು ಯುವ ಆಟಗಾರರಿಗೆ ಟೀಂ ಇಂಡಿಯಾ ಬಾಗಿಲು ಬಂದ್!‌?   

ದಾಳಿಗೆ ಕಾರಣ

ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪತ್ಯೇಕಗೊಳಿಸಬೇಕು ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ.ಪಾಕಿಸ್ತಾನದಿಂದ ಪ್ರತ್ಯೇಕವಾಗಬೇಕು ಎಂದು ಇಲ್ಲಿನ ಬಲೂಚ್ ಲಿಬರೇಶನ್ ಆರ್ಮಿಯು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ.ಇದೀಗ ಇದರ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.ಇದರ ಪರಿಣಾಮ ರೈಲುಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಬಾಂಬ್‌ ದಾಳಿಗಳನ್ನು ನಡೆಸುವ ಹಂತಕ್ಕೆ ಈಗ ಉಗ್ರರು ಮುಂದುವರೆದಿದ್ದಾರೆ.

ಇನ್ನು ಈ ರೈಲು ಕಾರ್ಯಾಚರಣೆಯು ಸಿನಿಮೀಯ ರೀತಿಯಲ್ಲಿ ತೀವ್ರ ರೋಚಕತೆಯಿಂದ ಕೂಡಿತ್ತು. ಘಟನೆ ತಿಳಿದ ತಕ್ಷಣವೇ ರೈಲಿನ ಪ್ರಯಾಣಿಕರ ರಕ್ಷಣೆಗೆ ಧಾವಿಸಿದ ಪಾಕ್‌ ಸೇನೆ ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದೆ.ಉಗ್ರರು ಹಾಗೂ ಪಾಕ್‌ ಸೇನಾಪಡೆಯ ನಡುವೆ ನಿರಂತರ ಗುಂಡಿನ ಕಾಳಗವೇ ನಡೆದಿದೆ.ಕೊನೆಗೆ ಎಲ್ಲಾ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕ್ ಸೇನೆ ಯಶಸ್ವಿಯಾಗಿದೆ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

 

About the Author

Trending News