ಇತ್ತೀಚಿಗೆ ಭಾರತವು ಬೇರೆ ದೇಶಗಳ ಮೇಲೆ ವಿಧಿಸಿರುವ ಹೆಚ್ಚಿನ ಸರಕು ತೆರಿಗೆಯನ್ನು ಟೀಕಿಸಿ ಮಾತನಾಡಿದ್ದ ಟ್ರಂಪ್ ತಾವು ಕೂಡ ಇದೇ ಮಾರ್ಗವನ್ನು ಬಳಸುವುದಾಗಿ ಹೇಳಿದ್ದಾರೆ.
ಹಾಗಾಗಿ ಇನ್ನು ಮುಂದೆ ಅಮೆರಿಕದಿಂದ ಭಾರತಕ್ಕೆ ಬರುವ ಆಟೋಮೋಟಿವ್ ಬಿಡಿಭಾಗಗಳ ಮೇಲೆ ಶೇ. 100 ಕ್ಕಿಂತ ಹೆಚ್ಚಿನ ತೆರಿಗೆಯನ್ನು ಅಮೇರಿಕಾ ವಿಧಿಸಲಿದೆ. ಅಮೆರಿಕಾದ ಈ ನಿರ್ಧಾರದಿಂದ ಗ್ರಾಹಕರು ಬಳಸುವ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಖರೀದಿಸುವ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸರಕುಗಳ ತೆರಿಗೆಯಲ್ಲಿ ಕೆಲವು ಬದಲಾವಣೆಯಾಗಿವೆ, ಇದರನುಸಾರ ಅಮೇರಿಕಾದಲ್ಲಿ ತಯಾರಾಗುವ ವಸ್ತುಗಳನ್ನು ಖರೀದಿಸಬೇಕಾದರೆ ಇನ್ನು ಮುಂದೆ ಮೊದಲಿಗಿಂತ ಹೆಚ್ಚಿನ ತೆರಿಗೆ ಸುಂಕವನ್ನು ಕಟ್ಟಬೇಕಾಗುತ್ತದೆ, ಆದ್ದರಿಂದ ಇನ್ನು ಮುಂದೆ ಜನರು ಹೆಚ್ಚಾಗಿ ಖರೀದಿಸಲು ಇಷ್ಟಪಡುವ ಐಫೋನ್‌ಗಳು ಮತ್ತು ಮ್ಯಾಕ್‌ಬುಕ್‌ಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳು ದುಬಾರಿಯಾಗಬಹುದು.
ಟ್ರಂಪ್ ರವರ ಹೊಸ ತೆರಿಗೆ ನಿರ್ಧಾರದಿಂದ ಈ ಕ್ರಮಗಳನ್ನು ಅಮೇರಿಕಾ ಸರ್ಕಾರ ಕೈಗೊಂಡಿದ್ದು, ಮುಂದಿನ ಏಪ್ರೀಲ್ ತಿಂಗಳಿನಿಂದ ಇದು ಜಾರಿಗೆ ಬರಲಿದೆ.ಭಾರತ ಯಾವ ರೀತಿ ತನ್ನ ಸರಕುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಬೇರೆ ದೇಶಗಳ ಮೇಲೆ ವಿಧಿಸುತ್ತಿದೆಯೋ ಅದೇ ಮಾರ್ಗವನ್ನು ಅಮೇರಿಕಾವು ಸಹ ಕೈಗೊಳ್ಳಲು ಮುಂದಾಗಿದೆ.
ಇನ್ನು ಮುಂದೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುವ ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಆಪಲ್ ಕಂಪನಿಗೆ ದೊಡ್ಡ ಹೊಡೆತ ಬೀಳಬಹುದು ಎನ್ನಲಾಗುತ್ತಿದೆ. ನೇರವಾಗಿ ಟ್ರಂಪ್ ತಮ್ಮ ಹೇಳಿಕೆಯಲ್ಲಿ ಪ್ರತ್ಯೇಕವಾಗಿ ಎಲೆಕ್ಟ್ರಾನಿಕ್ ಸರಕುಗಳ ಬೆಲೆ ಹೆಚ್ಚಿಸುವುದರ ಬಗ್ಗೆ ಉಲ್ಲೇಖಿಸಿಲ್ಲ, ಆದರೆ ಈ ವಿಷಯವಾಗಿ ಟ್ರಂಪ್ ತೆಗೆದುಕೊಂಡಿರುವ ಕೆಲವು ನಿಲುವುಗಳು ಪರೋಕ್ಷವಾಗಿ ಪರಿಣಾಮ ಬಿರಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆ್ಯಪಲ್ ಕಂಪನಿಯ ಮೇಲೆ ಪರಿಣಾಮ:
ಭಾರತದಲ್ಲಿ ಆ್ಯಪಲ್ ಕಂಪನಿಯು ಬಹಳ ಸಮಯದಿಂದಲೂ ತನ್ನ ಉತ್ಪಾದನೆಯನ್ನು ವಿಸ್ತರಿಸುತ್ತಲೇ ಬಂದಿದೆ.ಆದರೆ ಅಮೇರಿಕಾದ ಈ ದಿಡೀರ್ ನಿರ್ಧಾರವು ಇನ್ನು ಮುಂದೆ ಆ್ಯಪಲ್ ಉತ್ಪನ್ನಗಳ ಮಾರಾಟದಲ್ಲಿ ಪರಿಣಾಮ ಬೀರಲಿದೆ. ಇದರಿಂದಾಗಿ ಭಾರತದಲ್ಲಿ ಇನ್ನು ಮುಂದೆ ಆ್ಯಪಲ್ ಫೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗಲಿವೆ.
ಇಷ್ಟು ದಿನ ಬೇರೆ ದೇಶಗಳು ತಮ್ಮ ಮೇಲೆ ವಿಧಿಸಿರುವ ಸರಕುಗಳ ತೆರಿಗೆಯಿಂದ ಅಮೆರಿಕಾ ಹೆಚ್ಚು ನಷ್ಟ ಅನುಭವಿಸಿದೆ, ಆದ ಕಾರಣ ನಾವು ಕೂಡ ಇನ್ನು ಮುಂದೆ ಅಂಥದ್ದೇ ಮಾರ್ಗವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









