Gold Card Visa: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಮ್ಮ ಹೊಸ ವೀಸಾ ಕಾರ್ಯಕ್ರಮ ‘ಟ್ರಂಪ್ ಗೋಲ್ಡ್ ಕಾರ್ಡ್’ ಅನ್ನು ಅಧಿಕೃತವಾಗಿ ಘೋಷಿಸಿದರು. ತಮ್ಮ ‘ಟ್ರುತ್ ಸೋಷಿಯಲ್’ ವೇದಿಕೆಯ ಮೂಲಕ ಟ್ರಂಪ್, ಈ ಯೋಜನೆ ಅಮೆರಿಕಕ್ಕೆ ಭಾರಿ ಆದಾಯ ತಂದುಕೊಡಲು ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ಪೌರತ್ವದ ಮಾರ್ಗವನ್ನು ತೆರೆದು ಕೊಡುತ್ತದೆ ಎಂದೂ ತಿಳಿಸಿದರು.
ಟ್ರಂಪ್ ಅವರ ಹೇಳಿಕೆ ಪ್ರಕಾರ, ಈ ಯೋಜನೆ ಅಮೆರಿಕದಲ್ಲಿ ಪದವಿ ಪೂರೈಸಿದ ನಂತರ ಭಾರತ, ಚೀನಾ ಸೇರಿದಂತೆ ತಮ್ಮ ದೇಶಗಳಿಗೆ ವಾಪಸ್ ಹೋಗುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಸಹಾಯಕವಾಗಲಿದೆ. ಈ ಸಂಬಂಧ ಆಪಲ್ ಸಿಇಒ ಟಿಮ್ ಕುಕ್ ಕೂಡ ತಮ್ಮ ಚಿಂತನೆ ವ್ಯಕ್ತಪಡಿಸಿದ್ದುದನ್ನು ಟ್ರಂಪ್ ಉಲ್ಲೇಖಿಸಿದರು.
ಇದನ್ನೂ ಓದಿ: 2005 ರ ನಂತರ ಜನಿಸಿದ ಮಹಿಳೆಯರಿಗೆ ಮಕ್ಕಳಾಗಲ್ಲ! ಏಕಾಏಕಿ ಜನನ ಪ್ರಮಾಣ ಇಳಿಕೆಯಾಗುತ್ತಾ?
ಈ ‘ಗೋಲ್ಡ್ ಕಾರ್ಡ್’ EB-1 ಮತ್ತು EB-2 ವೀಸಾ ವರ್ಗಗಳ ಅಡಿಯಲ್ಲಿ ಬರುವುದರಿಂದ, ಇದು ಸಂಶೋಧಕರು, ಪ್ರಾಧ್ಯಾಪಕರು, ಕಲಾವಿದರು ಹಾಗೂ ಉದ್ಯಮಿಗಳಂತಹ ಅತ್ಯುನ್ನತ ನೈಪುಣ್ಯ ಹೊಂದಿದವರಿಗೆ ಮಾತ್ರ ಲಭ್ಯ. ಇದನ್ನು ಗ್ರೀನ್ ಕಾರ್ಡ್ ಹಾಗೂ ನಂತರ ಪೌರತ್ವಕ್ಕೆ ನೇರ ಮಾರ್ಗವನ್ನು ನೀಡುವ ವಿಶೇಷ ಯೋಜನೆ ಎಂದೇ ಪರಿಗಣಿಸಲಾಗಿದೆ.
ಅದೇ ವೇಳೆ, “ಪ್ಲಾಟಿನಂ ಕಾರ್ಡ್” ಎಂಬ ಮೂರನೇ ಆಯ್ಕೆಯನ್ನೂ ಟ್ರಂಪ್ ಪ್ರಸ್ತಾಪಿಸಿದ್ದಾರೆ. ಇದರ ಶುಲ್ಕ 5 ಮಿಲಿಯನ್ ಡಾಲರ್ ಆಗಿದ್ದು, ಇದರಿಂದ ಒಬ್ಬ ವ್ಯಕ್ತಿ ವರ್ಷಕ್ಕೆ 270 ದಿನಗಳವರೆಗೆ ಅಮೆರಿಕದಲ್ಲಿ ಉಳಿಯಲು ಅನುಮತಿ ದೊರೆಯುತ್ತದೆ. ಆದರೆ ಇದು ಅಧಿಕೃತ ಯೋಜನೆಯ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಭಾರತದ ನಿರೀಕ್ಷೆಯನ್ನು ಹುಸಿಯಾಗಿಸಿದ ರಷ್ಯಾ! ಪುಟಿನ್ ನೀಡಿದ ಭರವಸೆಗಳೆಲ್ಲಾ ಸುಳ್ಳಾ?
ಈ ಹೊಸ ಯೋಜನೆ ಭಾರತೀಯರಿಗೆ ದೊಡ್ಡ ಸಂಕಷ್ಟ ತಂದಿದೆ. ಸಾಮಾನ್ಯ ಅರ್ಜಿದಾರರಿಗೆ ‘ಗೋಲ್ಡ್ ಕಾರ್ಡ್’ ಶುಲ್ಕ 1 ಮಿಲಿಯನ್ ಡಾಲರ್ (ಸುಮಾರು ₹9 ಕೋಟಿ), ಶ್ರೀಮಂತರಿಗೆ ಪ್ರೀಮಿಯಂ ಆಯ್ಕೆ 5 ಮಿಲಿಯನ್ ಡಾಲರ್ (ಸುಮಾರು ₹44 ಕೋಟಿ). ಸಾಲ ಅಥವಾ ಹೂಡಿಕೆ ಹಂಚಿಕೆಗಳನ್ನೂ ಈ ಯೋಜನೆಯಲ್ಲಿ ಅನುಮತಿಸಲಾಗುವುದಿಲ್ಲ, ಹೀಗಾಗಿ ಮೊತ್ತವನ್ನು ಸಂಪೂರ್ಣ ನಗದಿನಲ್ಲಿ ಪಾವತಿಸಬೇಕಾಗುತ್ತದೆ.
ಈಗಾಗಲೇ ಗ್ರೀನ್ ಕಾರ್ಡ್‌ಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಭಾರತೀಯ H-1B ವೀಸಾ ಹೊಂದಿರುವ ಉದ್ಯೋಗಿಗಳಿಗೆ ಇದು ಮತ್ತಷ್ಟು ಹೊರೆ ಆಗಲಿದೆ. ಅವರು ಸಹ ಗೋಲ್ಡ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು, ಆದರೆ ಭಾರೀ ಶುಲ್ಕವನ್ನು ಭರಿಸಲು ಸಾಧ್ಯವಾದರೆ ಮಾತ್ರ. ಇದು ಭಾರತ ಮೂಲದ ವೃತ್ತಿಪರರ ಭವಿಷ್ಯವನ್ನು ಮತ್ತಷ್ಟು









