Trump New visa move: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ನಿರ್ಧಾರವು ಭಾರತೀಯರಿಗೆ, ವಿಶೇಷವಾಗಿ ಉದ್ಯೋಗಿಗಳಿಗೆ ದೊಡ್ಡ ಆತಂಕ ತಂದಿದೆ. ಪುಟಿನ್ರ ಭಾರತ ಭೇಟಿಯ ನಂತರ ಅಮೆರಿಕಾ ತೆಗೆದುಕೊಂಡ ಈ ಕ್ರಮ ಎಲ್ಲರ ಗಮನ ಸೆಳೆದಿದೆ.
)
Trump New visa move: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಭೇಟಿಯಲ್ಲಿ ಇದ್ದರು. ಈ ವೇಳೆ ಭಾರತ ಮತ್ತು ರಷ್ಯಾ ಹಲವು ಒಪ್ಪಂದಗಳಿಗೆ ಸಹಿ ಹಾಕಿದವು. ಭಾರತ ಅಮೆರಿಕದ ಒತ್ತಡವನ್ನು ಲೆಕ್ಕಿಸದೆ ರಷ್ಯಾ ಜೊತೆ ಒಪ್ಪಂದ ಮಾಡಿದುದು ವಾಷಿಂಗ್ಟನ್ಗೆ ತಲೆನೋವಾಗಿದೆ. ಇದಾಗಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರತಿಕ್ರಿಯೆಯಂತೆ ಹೊಸ ನಿರ್ಧಾರ ಹೊರಬಂದಿದೆ.
ಪುಟಿನ್ ಭೇಟಿ ನಡೆಯುತ್ತಿದ್ದಂತೆಯೇ, ಟ್ರಂಪ್ ಅಮೆರಿಕಾ ವಲಸೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯ ಉದ್ದಯೋಗಿಗಳ ಮೇಲೆ ಪರಿಣಾಮ ಬೀರಿದೆ.
USCIS ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈಗ Employment Authorization Document (EAD) ಗರಿಷ್ಠ ಮಾನ್ಯಾವಧಿಯನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ಕೆಲಸಕ್ಕೆ ಅನುಮತಿ ಪಡೆಯುವವರು ಹೆಚ್ಚು ಪರಿಶೀಲನೆಗಳಿಗೆ ಒಳಗಾಗಬೇಕಾಗಿದೆ. ದೇಶದ ಭದ್ರತೆಯನ್ನು ಹೆಚ್ಚಿಸಲು ಈ ಕ್ರಮ ಎಂದು ಅಮೆರಿಕಾ ತಿಳಿಸಿದೆ.
ಹೊಸ ನಿಯಮಗಳ ಪ್ರಕಾರ, ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವವರು ಹೆಚ್ಚುವರಿ ಪರಿಶೀಲನೆ, ದಾಖಲೆ ಪರಿಶೀಲನೆ ಮತ್ತು ಸುರಕ್ಷತಾ ತಪಾಸಣೆಗಳನ್ನು ಅವಾಗಾವಾಗ ಎದುರಿಸಬೇಕಿದೆ. ಸಾಧ್ಯತೆಯಿರುವ ಭದ್ರತಾ ಬೆದರಿಕೆಗಳನ್ನು ತಡೆಯುವುದು ಮುಖ್ಯ ಉದ್ದೇಶವೆಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ರಾಷ್ಟ್ರೀಯ ಗಾರ್ಡ್ ಸೈನಿಕನ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ಹಿಂದಿನ ಆಡಳಿತದಲ್ಲಿ ಪ್ರವೇಶ ನೀಡಲಾಗಿತ್ತು ಎಂಬ ಘಟನೆ ನಂತರ, ವ್ಯವಸ್ಥೆಯಲ್ಲಿ ಬದಲಾವಣೆ ಅವಶ್ಯಕ ಎಂದು ಹೇಳಲಾಗಿದೆ. ಈ ಕಾರಣದಿಂದ H-1B ವೀಸಾದ ಮೇಲೆ ಅಮೆರಿಕಾಗೆ ಹೋಗುವ ಭಾರತೀಯ ಯುವಜನತೆಗೆ ಇದು ದೊಡ್ಡ ಆತಂಕ ತಂದಿದೆ.
ಹೊಸ ನಿಯಮಗಳು ಜಾರಿಗೆ ಬಂತೆಯೇ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅಥವಾ ಕೆಲಸಕ್ಕೆ ಅರ್ಜಿ ಹಾಕುತ್ತಿರುವ ಸಾವಿರಾರು ಭಾರತೀಯರಿಗೆ ಇದು ಪ್ರಭಾವ ಬೀರುತ್ತಿದೆ. ತಾತ್ಕಾಲಿಕವಾಗಿ, ಉದ್ಯೋಗ ಅನುಮತಿ ಮತ್ತು ವೀಸಾ ಪ್ರಕ್ರಿಯೆಗಳು ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ.