)
Trump on India’s Russian oil purchase : ಭಾರತ ಶೀಘ್ರದಲ್ಲೇ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ರಷ್ಯಾ ಗುರುವಾರ (ಅಕ್ಟೋಬರ್ 16) ಪ್ರತಿಕ್ರಿಯಿಸಿ, ಮಾಸ್ಕೋದ "ತೈಲ ಪೂರೈಕೆಗಳು ಭಾರತೀಯ ಆರ್ಥಿಕತೆಗೆ ಬಹಳ ಪ್ರಯೋಜನಕಾರಿ" ಎಂದು ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, "ಭಾರತ ಮತ್ತು ಅಮೆರಿಕ ತಮ್ಮ ನಿರ್ಧಾರಗಳಲ್ಲಿ ಸ್ವತಂತ್ರವಾಗಿವೆ ಮತ್ತು ನಾವು ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.
ರಷ್ಯಾ ತೈಲದಿಂದ ಭಾರತಕ್ಕಿರುವ ಉಪಯೋಗ
"ರಷ್ಯಾದಿಂದ ತೈಲವನ್ನು ರಫ್ತು ಮಾಡುತ್ತಿರುವ ಉದ್ದೇಶ ಭಾರತೀಯರಿಗೆ ಸಹಾಯವಾಗಬೇಕೆಂಬುವುದು, ಭಾರತ ಮತ್ತು ಅಮೆರಿಕ ತಮ್ಮ ನಿರ್ಧಾರಗಳಲ್ಲಿ ಸ್ವತಂತ್ರವಾಗಿವೆ, ಮತ್ತು ನಾವು ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಮ್ಮ ತೈಲ ಸರಬರಾಜುಗಳು ಭಾರತೀಯ ಆರ್ಥಿಕತೆಗೆ ಮತ್ತು ಭಾರತೀಯ ಜನರ ಆರ್ಥಿಕ ಒಳಿತಿಗೆ ಬಹಳ ಪ್ರಯೋಜನಕಾರಿ" ಎಂದು ಅವರು ಹೇಳಿದರು. ಭಾರತ ಸರ್ಕಾರವು "ಮೊದಲನೆಯದಾಗಿ ದೇಶದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿತ್ತು ಅವರ ಈ ನಿಲುವಿಗೆ ನಮ್ಮ ಸಹಕಾರವಿದೆ" ಎಂದು ಅಲಿಪೋವ್ ಹೇಳಿದರು.
ಅವರ ಹೇಳಿಕೆಯು ಟ್ರಂಪ್ ಹೇಳಿಕೆಗೆ ಭಾರತದ ಪರೋಕ್ಷ ಪ್ರತಿಕ್ರಿಯೆ ಎನ್ನುವಂತಿದೆ. ನವದೆಹಲಿಯು ತನ್ನ ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟವಾದ ಹೇಳಿಕೆಯಲ್ಲಿ, "ಇಂಧನ ನೀತಿಯು ವಿಶಾಲ-ಆಧಾರಿತ ಇಂಧನ ಮೂಲವನ್ನು ಒಳಗೊಂಡಿದೆ, ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಸೂಕ್ತವಾಗುವಂತೆ ವೈವಿಧ್ಯಗೊಳಿಸುವುದು" ಎಂದು ತಿಳಿಸಲಾಗಿದೆ. ಈ ಮೂಲಕ ಎರಡು ದೇಶಗಳ ನೇತೃತ್ವದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಸ್ಥಿರ ಆದ್ಯತೆಯಾಗಿದೆ" ಎಂಬ ನಿಲುವನ್ನು ಭಾರತ ತೆಗೆದುಕೊಂಡಿದೆ.
ರಷ್ಯಾ ಮತ್ತು ಭಾರತ ತೈಲ ಒಪ್ಪಂದದ ಕುರಿತು ಟ್ರಂಪ್ ಹೇಳಿಕೆ
ಈ ವಿಷಯದ ಕುರಿತು ವರದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿ ಮಾಡದಿರಲು ಭರವಸೆ ನೀಡಿದೆ ಎಂದು ಹೇಳಿದ್ದಾರೆ. “ಭಾರತದಿಂದ ನನಗೆ ಸ್ಪಷ್ಟ ಭರವಸೆ ದೊರೆತಿದೆ. ಅವರು ರಷ್ಯಾದಿಂದ ಯಾವುದೇ ತೈಲ ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ತಕ್ಷಣ ಸಾಧ್ಯವಿಲ್ಲ, ಕೆಲವು ಸಮಯ ತೆಗೆದುಕೊಳ್ಳುತ್ತದೆ. ಪ್ರಕ್ರಿಯೆ ಆರಂಭವಾಗಿದೆ ಮತ್ತು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ,” ಎಂದು ಟ್ರಂಪ್ ಹೇಳಿದರು. ಆದರೆ, ಅವರ ಮುಂದಿನ ಮಾತುಗಳು ಎಲ್ಲರ ಗಮನ ಸೆಳೆದವು. “ನಾನು ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ವೃತ್ತಿಜೀವನವನ್ನು ಹಾಳುಮಾಡಲು ಬಯಸುವುದಿಲ್ಲ. ಅವರು ಒಬ್ಬ ಮಹಾನ್ ವ್ಯಕ್ತಿ, ನನ್ನ ಹತ್ತಿರದ ಅಂತಾರಾಷ್ಟ್ರೀಯ ಸ್ನೇಹಿತರಲ್ಲಿ ಒಬ್ಬರು. ಭಾರತದಲ್ಲಿ ಜನರು ಅವರನ್ನು ತುಂಬಾ ಪ್ರೀತಿಸುತ್ತಾರೆ.” ಎಂಬ ಮಾತುಗಳನ್ನು ಆಡುವ ಮೂಲಕ ಟ್ರಂಪ್ ರಷ್ಯಾ ಮತ್ತು ಭಾರತದ ತೈಲ ಒಪ್ಪಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಈ ಹೇಳಿಕೆ, ಅಮೆರಿಕಾ–ಭಾರತ–ರಷ್ಯಾ ನಡುವಿನ ತೈಲ ವ್ಯವಹಾರಗಳ ಹಿನ್ನೆಲೆಯಲ್ಲಿ ರಾಜತಾಂತ್ರಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
#WATCH | Delhi: On being asked if India will continue importing Russian oil, Russian Ambassador to India, Denis Alipov, says, "This is the question for the Indian govt. The Indian Government is having in mind the national interest of this country in the first place, and our… pic.twitter.com/73Kx2uDOIl
— ANI (@ANI) October 16, 2025