ತಾಲಿಬಾನ್ ನಲ್ಲಿ ಶಾಂತಿ ನೆಲೆಗೆ ಪಾಕ್ ಸಹಕಾರ ಕೇಳಿದ ಡೊನಾಲ್ಡ್ ಟ್ರಂಪ್

ತಾಲಿಬಾನ್ ನಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವರು ಪಾಕ್ ಗೆ ಪತ್ರ ಬರೆದು ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Updated: Dec 3, 2018 , 06:41 PM IST
 ತಾಲಿಬಾನ್ ನಲ್ಲಿ ಶಾಂತಿ ನೆಲೆಗೆ ಪಾಕ್ ಸಹಕಾರ ಕೇಳಿದ ಡೊನಾಲ್ಡ್ ಟ್ರಂಪ್

ಇಸ್ಲಾಮಾಬಾದ್: ತಾಲಿಬಾನ್ ನಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವರು ಪಾಕ್ ಗೆ ಪತ್ರ ಬರೆದು ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈಗ ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿರುವ ಪಾಕ್ ಮಾಹಿತಿ ಸಚಿವ ಫವಾದ್ ಚೌಧರಿ" ಟ್ರಂಪ್ ಅವರು ಪತ್ರ ಬರೆದು ತಾಲಿಬಾನ್ ವಿಚಾರದಲ್ಲಿ ಮಾತುಕತೆಗೆ ಪಾಕ್ ನ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು  ತಿಳಿಸಿದ್ದಾರೆ. ಟ್ರಂಪ್ ಅವರು ತಾಲಿಬಾನ್ ನಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪಾಕ್ ಪಾತ್ರ ಮಹತ್ವದ್ದಾಗಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಆದರೆ ಈ ಪತ್ರದ ವಿಚಾರವಾಗಿ ಇಸ್ಲಾಮಾಬಾದ್ ನಲ್ಲಿರುವ ಅಮೇರಿಕಾದ ರಾಯಬಾರಿ ಕಚೇರಿ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ. ಕಳೆದ ತಿಂಗಳು ಟ್ರಂಪ್ ಸಂದರ್ಶನವೊಂದರಲ್ಲಿ ಅಮೆರಿಕಾದ  ಬಿಲಿಯನ್ ಡಾಲರ್ ನೆರವಿನ ಮಧ್ಯದಲ್ಲಿಯೂ ಸಹ ಪಾಕ್ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಪಾದನೆ ಮಾಡಿದ್ದರು.    

ಕಳೆದ ವಾರವಷ್ಟೇ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘಾನಿ 12 ತಂಡಗಳನ್ನು ಸಿದ್ದಪಡಿಸಿ ತಾಲಿಬಾನ್ ಜೊತೆ ಮಾತುಕತೆಗೆ ಕೈಜೋಡಿಸಿದ್ದರು ಎಂದು ಹೇಳಿದ್ದರು, ಆದರೆ ಇದೆಲ್ಲವನ್ನು ಜಾರಿಗೆ ತರಬೇಕಾದರೆ ಕನಿಷ್ಠ ಐದು ವರ್ಷಗಳ ಕಾಲಾವಧಿ ಅವಶ್ಯಕ ಎಂದು ಅವರು ತಿಳಿಸಿದ್ದರು ಎನ್ನಲಾಗಿದೆ.