ನ್ಯೂಯಾರ್ಕ್: ಎಲಾನ್ ಮಾಸ್ಕ್ ಟ್ವಿಟ್ಟರ್ ಮಾಲೀಕನಾದ ನಂತರ ಟ್ವಿಟ್ಟರ್ ಈಗ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಮಾಸ್ಕ್ ನೀತಿಯನ್ನು ವಿರೋಧಿಸಿ ಹಲವಾರು ಟ್ವಿಟ್ಟರ್ ನೌಕರರು ಈ ಹಿಂದೆ ರಾಜೀನಾಮೆ ನೀಡಿದ್ದರು.
ಈಗ ಇದರ ಮುಂದುವರೆದಿರುವ ಭಾಗವಾಗಿ ನೌಕರರು ಸಾಮೂಹಿಕ ರಾಜೀನಾಮೆ ನೀಡಿರುವ ಬೆನ್ನಲ್ಲೇ ತಕ್ಷಣದಿಂದ ಜಾರಿಗೆ ಬರುವಂತೆ ಕಂಪನಿಯ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಟ್ವಿಟರ್ ಉದ್ಯೋಗಿಗಳಿಗೆ ತಿಳಿಸಿದೆ.ನವೆಂಬರ್ 21 ಸೋಮವಾರದಂದು ಕಛೇರಿಗಳು ಪುನಃ ತೆರೆಯಲ್ಪಡುತ್ತವೆ ಎಂದು ನೌಕರರಿಗೆ ತಿಳಿಸಲಾಗಿದೆ.
ಇದನ್ನೂ ಓದಿ-Vastu Tips: ಈ ಶಕ್ತಿಶಾಲಿ ಸಸ್ಯದಿಂದ ಮನೆಯ ಎಲ್ಲಾ ವಾಸ್ತು ದೋಷಗಳಿಗೆ ಪರಿಹಾರ..!
ಇನ್ನೊಂದೆಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟ್ಟರ್ ಭವಿಷ್ಯ ಅಂತ್ಯವಾಯಿತು ಎಂದೆಲ್ಲಾ ಜನರು ಟ್ವಿಟ್ ಮಾಡಿದ್ದಾರೆ.ಮಸ್ಕ್ ಅವರ ಹೊಸ ನಿಯಮಗಳನ್ನು ಒಪ್ಪಿಕೊಳ್ಳದ ಕಾರಣ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!
ಈ ವಾರ, ಶ್ರೀ ಮಸ್ಕ್ ಅವರು ಟ್ವಿಟರ್ ಸಿಬ್ಬಂದಿಗೆ ಅವರು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಲು ಬದ್ಧರಾಗಿರಬೇಕು ಇಲ್ಲವೇ ಕಂಪನಿಯನ್ನು ತೊರೆಯಬೇಕು ಎಂದು ಹೇಳಿದ್ದರು. ಇನ್ನೊಂದೆಡೆಗೆ ಕಂಪನಿಯಲ್ಲಿನ ಪ್ರಕ್ಷುಬ್ಧತೆಯ ಹೊರತಾಗಿಯೂ ಮಸ್ಕ್ ಟ್ವೀಟ್ ಮಾಡಿ: " ನಾವು ಟ್ವಿಟರ್ ಬಳಕೆಯಲ್ಲಿ ಮತ್ತೊಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದೇವೆ." ಎಂದು ಬರೆದುಕೊಂಡಿದ್ದಾರೆ.
ಮಸ್ಕ್ ಟ್ವಿಟರ್ ನಿಯಂತ್ರಣವನ್ನು ತೆಗೆದುಕೊಳ್ಳುವ ಮೊದಲು ಕಂಪನಿಯು ಸುಮಾರು 7,500 ಸಿಬ್ಬಂದಿಯನ್ನು ಹೊಂದಿತ್ತು. ಸಂಸ್ಥೆಯು ಸಾವಿರಾರು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ, ಅವರಲ್ಲಿ ಹೆಚ್ಚಿನವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!
ಕಳೆದ ತಿಂಗಳು $44bn (£37bn) ಒಪ್ಪಂದದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದ್ದರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.