Sunita Williams Love Story: ಸುನೀತಾ ವಿಲಿಯಮ್ಸ್ ಈಗ ಸುಮಾರು 9 ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ ಇಂದು ಭೂಮಿಗೆ ಮರಳಿದ್ದಾರೆ. ಅವರ ಜೀವನವು ನಿಜಕ್ಕೂ ಸಾಹಸಮಯವಷ್ಟೇ ಅಲ್ಲದೆ ಕೋಟ್ಯಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ. ಅಮೇರಿಕದ ಪ್ರಜೆಯಾಗಿದ್ದರೂ ಸಹ ಇಂದಿಗೂ ಕೂಡ ಭಾರತದ ಜೊತೆಗಿನ ನಂಟನ್ನು ಅವರು ಬಿಟ್ಟಿಲ್ಲ. ಹಾಗಾಗಿ ಅವರು ಭಾರತೀಯ ಮೌಲ್ಯಗಳ ಪ್ರತೀಕವಾಗಿದ್ದಾರೆ.
9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ತಮ್ಮ ಬಾಹ್ಯಾಕಾಶ ಯಾತ್ರೆಯ ಸಮಯದಲ್ಲಿ ಭಗವದ್ಗೀತೆ ಮತ್ತು ಉಪನಿಷತ್ತುಗಳಂತಹ ಪವಿತ್ರ ಹಿಂದೂ ಗ್ರಂಥಗಳನ್ನು ಹಾಗೂ ಶಿವ ಮತ್ತು ಗಣೇಶನ ವಿಗ್ರಹಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.ಇದೆಲ್ಲವೂ ಕೂಡ ಅವರ ವೈಜ್ಞಾನಿಕ ಪ್ರಯಾಣದಲ್ಲಿಯೂ ಧಾರ್ಮಿಕ ದರ್ಶನವನ್ನು ಪಡೆಯುವ ಒಂದು ಸನ್ಮಾರ್ಗವಾಗಿದೆ ಎಂದು ಹೇಳಬಹುದು.
ಇತ್ತೀಚಿಗೆ ನಡೆದ ಕುಂಭಮೇಳ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ? ಎಂದು ಭಾರತದಲ್ಲಿನ ಅವರ ಸಂಬಂಧಿಕರೊಬ್ಬರು ಕೇಳಿದಾಗ, ಅವರು ಪ್ರಯಾಗ ರಾಜ್ ದಲ್ಲಿ ನಡೆದ ಕುಂಭ ಮೇಳದ ಫೋಟೋವೊಂದನ್ನು ಕಳಿಸಿದ್ದರು. ಇದೆಲ್ಲವೂ ಕೂಡ ಅವರು ಇಂದಿಗೂ ಭಾರತದ ಜೊತೆಗಿರುವ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ಸುನೀತಾ ವಿಲಿಯಮ್ಸ್ ಎಂದರೆ ಒಂದು ರೀತಿ ಅಚ್ಚರಿ, ವಿಜ್ಞಾನ, ಧರ್ಮ, ಆಧ್ಯಾತ್ಮಿಕತೆ ಇವೆಲ್ಲವೂಗಳ ಪ್ರತಿರೂಪವೆಂದು ಹೇಳಬಹುದು.ಇಂತಹ ಸುನೀತಾ ಅವರ ಸಾಹಸದ ಬದುಕಿನಲ್ಲಿ ಆಗಸದಲ್ಲಿಯೇ ಪ್ರೇಮಾಂಕುರವಾಗಿತ್ತು ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಅಲ್ಲವೇ?
ಸುನೀತಾ ವಿಲಿಯಮ್ಸ್-ಮೈಕೆಲ್ ಜೆ. ವಿಲಿಯಮ್ಸ್ ಅವರ ಪ್ರೇಮಕಥೆ: (Sunita Williams Love Story)
ಪ್ರತಿಯೊಬ್ಬರ ಜೀವನದಲ್ಲಿಯೂ ಯಾವುದೇ ಸಾಧನೆ ಮಾಡಬೇಕಾದರೆ ಬೆಂಬಲ, ಸಹಕಾರ ಬೇಕಾಗುತ್ತದೆ. ಇದಿಲ್ಲದೇ ಹೋದರೆ ನಿಜಕ್ಕೂ ಸಾಧನೆ ಮಾಡುವುದು ಕಷ್ಟಕರ. ಇಂತಹ ಬೆಂಬಲ ಮತ್ತು ಸಹಕಾರ ನೀಡಿದಂತವರು ಪತಿ ಮೈಕೆಲ್ ಜೆ.ವಿಲಿಯಮ್ಸ್. ಈಗ ಜಾಗತಿಕ ಐಕಾನ್ ಆಗಿ ಸ್ಪೂರ್ತಿಯಾಗಿರುವ ಸುನೀತಾ ಅವರ ಬದುಕಿನ ಪಯಣದಲ್ಲಿ ಎಲೆ ಮರೆಯ ಕಾಯಿಯಂತೆ ಬೆನ್ನೆಲುಬಾಗಿ ಅವರು ನಿಂತಿದ್ದಾರೆ. ಯಾವುದೇ ಪ್ರಚಾರವನ್ನು ಬಯಸದೇ ಅವರು ಮಾಧ್ಯಮದಿಂದ ದೂರ ಉಳಿದಿದ್ದಾರೆ.ಸುನೀತಾ ಮತ್ತು ಮೈಕೆಲ್ ಅವರ ಪರಿಚಯವಾಗಿದ್ದು 1987 ರಲ್ಲಿ ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ನೌಕಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ. ಇಲ್ಲಿ ಮೊದಲ ಬಾರಿಗೆ ಭೇಟಿಯಾದ ಅವರು, ಆರಂಭದಲ್ಲಿ ಸ್ನೇಹಿತರಾಗಿ ಕ್ರಮೇಣ ಅವರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಇಬ್ಬರಿಗೂ ಒಂದೇ ರೀತಿಯ ಮಹತ್ವಾಕಾಂಕ್ಷೆಗಳಿದ್ದವು ಮತ್ತು ಇಬ್ಬರ ನಡುವೆ ಪರಸ್ಪರ ಅಪಾರ ಗೌರವವಿತ್ತು. ಹಲವಾರು ವರ್ಷಗಳ ಕಾಲ ಜೊತೆಯಾಗಿ ಕಳೆದ ನಂತರ ತಮ್ಮ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ಸದ್ಯ ಮೈಕೆಲ್ ಜೆ. ವಿಲಿಯಮ್ಸ್ ಕಾನೂನು ಜಾರಿ ಮತ್ತು ನ್ಯಾಯಾಲಯದ ಭದ್ರತೆಯಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಾರೆ. ಕಾನೂನು ಜಾರಿ ಅಧಿಕಾರಿಯ ಜವಾಬ್ದಾರಿಗಳ ಜೊತೆಗೆ ಅವರು ಹೆಲಿಕಾಪ್ಟರ್ ಪೈಲಟ್ ಆಗಿಯೂ ಕೆಲಸ ಮಾಡುತ್ತಾರೆ. ಶಿಸ್ತು ಕಾಯ್ದುಕೊಳ್ಳುವಲ್ಲಿ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲಿ ಅವರ ಅನುಭವವು ಸುನೀತಾ ಅವರ ಬಾಹ್ಯಾಕಾಶ ವೃತ್ತಿಜೀವನಕ್ಕೆ ಸಹಕಾರಿಯಾಗಿದೆ.ವಿಶ್ವದ ಅತ್ಯಂತ ಪ್ರಸಿದ್ಧ ಗಗನಯಾತ್ರಿಯನ್ನು ಅವರು ಮದುವೆಯಾಗಿದ್ದರೂ, ಸುನೀತಾ ಅವರ ಖ್ಯಾತಿಯಲ್ಲಿ ಅವರೆಂದಿಗೂ ತಮ್ಮ ಪ್ರಚಾರವನ್ನು ಬಯಸಲಿಲ್ಲ.
ಸುನೀತಾ ವಿಲಿಯಮ್ಸ್ ಮತ್ತು ಮೈಕೆಲ್ ದಂಪತಿಗಳಿಗೆ ಸ್ವಂತ ಮಕ್ಕಳಿಲ್ಲ. ಆದರೆ ಸುನೀತಾ ಒಮ್ಮೆ ಅಹಮದಾಬಾದ್‌ನ ಬಾಲಕಿಯನ್ನು ದತ್ತು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು.ಆದರೆ ಆ ಅಸೆ ಇನ್ನೂ ಕೈಗೂಡಿಲ್ಲ. ಇಬ್ಬರಿಗೂ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇರುವುದರಿಂದ ಮೂರು ಸಾಕು ಪ್ರಾಣಿಗಳನ್ನು ಅವರು ಸಾಕಿದ್ದಾರೆ. ಈಗ ಅವು ಅವರ ಜೀವನದ ಅವಿಭಾಜ್ಯ ಅಂಗವಾಗಿವೆ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









