)
Iran Israel Ceasefire: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿದ್ದೇ ಎಂದು ಹೇಳಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಕದನಕ್ಕೆ ವಿರಾಮ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಸೋಮವಾರ ಒಂದೇ ದಿನ ಮೂರೂ ದೇಶಕ್ಕೆ ಹಬ್ಬಿ ದೊಡ್ಡ ಯುದ್ಧವೇ ನಡೆಯುತ್ತದೆ ಎಂದು ಮೂಡಿದ್ದ ಆತಂಕ ತಕ್ಷಣಕ್ಕೆ ಮರೆಯಾಗಿದೆ.
ತನ್ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ್ದ ಅಮೇರಿಕಾದ ವಿರುದ್ಧ ಸೇಡುತೀರಿಸಿಕೊಳ್ಳಲು ಇರಾನ್ ಸೋಮವಾರ ಒಂದೇ ದಿನ ಕತಾರ್, ಇರಾಕ್ ಮತ್ತು ಸಿರಿಯಾಗಳಲ್ಲಿರುವ ಅಮೇರಿಕಾದ ಏರ್ ಬೇಸ್ ಗಳ ಮೇಲೆ ದಾಳಿ ಮಾಡಿತ್ತು. ಇರಾನ್ ಈ ರೀತಿ ತಿರುಗಿ ಬೀಳುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಂಪುಟದ ಹಿರಿಯರು ಮತ್ತು ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು.
ಸಭೆಯ ಬಳಿಕ ಡೊನಾಲ್ಡ್ ಟ್ರಂಪ್ ಇಸ್ರೇಲ್ ಮತ್ತು ಇರಾನ್ ನಡುವಿನ ಕದನಕ್ಕೆ ವಿರಾಮ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಅಮೇರಿಕಾ, ಇರಾನ್ ದಾಳಿಯಿಂದ ತಮ್ಮ ಸೇನಾ ನೆಲೆಗಳಿಗೆ ಯಾವುದೇ ಅನಾಹುತವಾಗಿಲ್ಲ. ಇರಾನ್ ನಿಂದ 14 ಕ್ಷಿಪಣಿ ದಾಳಿ ಮಾಡಿತ್ತು. ನಾವು 13 ಕ್ಷಿಪಣಿಗಳನ್ನು ಹೊಡೆದು ಹಾಕಿದ್ದೇವೆ ಎಂದು ಕೂಡ ಹೇಳಿಕೊಂಡಿದೆ.
ಕದನ ವಿರಾಮ ಘೋಷಣೆ ಮಾಡಿರುವುದಾಗಿ ಹೇಳಿರುವ ಅಮೇರಿಕಾ ಬಗ್ಗೆ ಇನ್ನೂ ಇರಾನ್ ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಾಲು ಕೆರೆದುಕೊಂಡು ಯುದ್ಧ ಆರಂಭಿಸಿದ್ದ ಇಸ್ರೇಲ್ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಒಟ್ಟಾರೆಯಾಗಿ ಕದನ ವಿರಾಮ ಘೋಷಣೆಯ ಸುದ್ದಿ ಮಧ್ಯಪ್ರಾಚ್ಯದಲ್ಲಿ ತುಸು ಸಮಾಧಾನ ತಂದಿದೆ. ಏಕೆಂದರೆ ತನ್ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ್ದ ಅಮೇರಿಕಾದ ವಿರುದ್ಧ ಸೇಡುತೀರಿಸಿಕೊಳ್ಳಲು ಇರಾನ್ ಸೋಮವಾರ ಕತಾರ್, ಇರಾಕ್ ಮತ್ತು ಸಿರಿಯಾಗಳಲ್ಲಿರುವ ಅಮೇರಿಕಾದ ಏರ್ ಬೇಸ್ ಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಆತಂಕ ಮನೆಮಾಡಿತ್ತು.
ಇದಲ್ಲದೆ ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಯುದ್ಧ ಇರಾನ್ ನ ಟೆಹ್ರಾನ್ ಜನರನ್ನು ಅತ್ಯಂತ ಆತಂಕಕ್ಕೀಡು ಮಾಡಿತ್ತು. ಏಕೆಂದರೆ ಯುದ್ಧ ತೀವ್ರಗೊಂಡರೆ ಇಸ್ರೇಲ್ ಹೆಚ್ಚು ಗುರಿ ಮಾಡುವುದೇ ಟೆಹ್ರಾನ್ ಅನ್ನು ಎನ್ನುವ ಕಾರಣಕ್ಕೆ ಲಕ್ಷಾಂತರ ಜನ ಬದುಕುಳಿಯುವುದಕ್ಕಾಗಿ ಟೆಹ್ರಾನ್ನಿಂದ ಬೇರೆ ಕಡೆಗೆ ಪಲಾಯನ ಮಾಡಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.