ಟ್ರಂಪ್ ಮತ್ತು ಮಸ್ಕ್ ನಡುವಿನ ಸಂಬಂಧವನ್ನು ಅಲುಗಾಡಿಸುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ. ಹೀಗಿರುವಾಗ ಇದೊಂದು ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ- ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ, ಸಕಲೈಶ್ವರ್ಯ ಪ್ರಾಪ್ತಿ
ಅಮೆರಿಕದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ಆಗಮಿಸಿದ ಉದ್ಯೋಗಿಗಳಿಗೆ ಈ ವಿಡಿಯೋ ಆಘಾತವನ್ನುಂಟು ಮಾಡಿದ್ದು, ಕಚೇರಿಯ ಎಲ್ಲಾ ಪರದೆಗಳ ಮೇಲೆ ಡೊನಾಲ್ಡ್ ಟ್ರಂಪ್ ಎಲೋನ್ ಮಸ್ಕ್ ಅವರ ಪಾದಗಳಿಗೆ ಮುತ್ತಿಡುತ್ತಿರುವ ವೀಡಿಯೊ ಕಾಣಿಸಿಕೊಂಡಿದೆ. ನೌಕರರು ಎಷ್ಟೇ ಪ್ರಯತ್ನ ಪಟ್ಟರೂ ವಿಡಿಯೋ ಪ್ಲೇ ಆಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಸಿಬ್ಬಂದಿ ಕೊನೆಗೂ ಮಾನಿಟರ್‌ಗಳ ಸಂಪರ್ಕ ಕಡಿತಗೊಳಿಸಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
WOW! This actually just happened!
The Monitors were just hacked at the U.S. Department of Housing and Urban Development (HUD) to display an AI video of Trump licking Elon Musk’s toes.
The caption over it read: “LONG LIVE THE REAL KING.” pic.twitter.com/11JWuH2XfZ
— Brian Krassenstein (@krassenstein) February 24, 2025
ಕಳೆದ ವಾರ, ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಟ್ರೂತ್‌ನಲ್ಲಿ ನ್ಯೂಯಾರ್ಕ್ ನಗರದ ವಿವಾದಾತ್ಮಕ ಮ್ಯಾನ್‌ಹ್ಯಾಟನ್ ಟೋಲ್ ಕಾರ್ಯಕ್ರಮವನ್ನು ರದ್ದುಗೊಳಿಸುವ ನಿರ್ಧಾರದ ಕುರಿತು ಪೋಸ್ಟ್ ಹಂಚಿಕೊಂಡಿದ್ದರು, ಇದರ ಪರಿಣಾಮವಾಗಿ ಡೀಪ್‌ಫೇಕ್ ವೀಡಿಯೊಗಳು ಕಂಡುಬಂದಿವೆ . ಈ ವಿಡಿಯೋ ಕಚೇರಿಯ ಪರದೆಯ ಮೇಲೆ ಹೇಗೆ ಕಾಣಿಸಿಕೊಂದಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿವೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ಅಧಿಕಾರಿಗಳ ಆರಂಭಿಕ ಅಂದಾಜಿನ ಪ್ರಕಾರ, ಕಚೇರಿಯ ಸಿಸ್ಟಮನ್ನು ಹ್ಯಾಕ್ ಮಾಡಲಾಗಿದೆ ಮತ್ತು ಇದರ ಹಿಂದೆ ಯಾರದೋ ಕೈವಾಡ ಇದೆ ಎಂದು ಶಂಕಿಸಿದ್ದಾರೆ. ಇನ್ನೂ ವೀಡಿಯೊದ ಮೂಲದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ವಕ್ತಾರೆ ಕ್ಯಾಸ್ಸಿ ಲೊವೆಟ್, ಬಿಸಿನೆಸ್ ಇನ್ಸೈಡರ್‌ಗೆ ನೀಡಿದ ಹೇಳಿಕೆಯಲ್ಲಿ, ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಇದನ್ನೂ ಓದಿ- 30 ವರ್ಷಗಳ ಬಳಿಕ ಮೀನದಲ್ಲಿ ಪಿತಾ-ಪುತ್ರರ ಸಂಯೋಗ: ಈ ರಾಶಿಯವರಿಗೆ ಭಾಗ್ಯೋದಯ, ಧನ ವೃಷ್ಟಿ, ಇಷ್ಟಾರ್ಥ ಸಿದ್ಧಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









