)
Donald Trump Aide Charlie Kirk Murder: ಅಮೆರಿದಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮತ್ತು ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರನ್ನ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಅಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ರಾಜಕೀಯ ಹತ್ಯೆ ಅಮೆರಿಕವನ್ನ ಅಕ್ಷರಶಃ ಬೆಚ್ಚಿಬೀಳಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಉಟಾವಾ ವ್ಯಾಲಿಯ ಕ್ಯಾಂಪಸ್ನಲ್ಲಿ ಚಾರ್ಲಿ ಕಿರ್ಕ್ ಅವರು "ದಿ ಅಮೆರಿಕನ್ ಕಮ್ ಬ್ಯಾಕ್" ಮತ್ತು "ಪ್ರೂವ್ ಮಿ ರಾಂಗ್" ಘೋಷವಾಕ್ಯಗಳೊಂದಿಗೆ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ವೇಳೆ ಆಗಂತುಕನೊಬ್ಬ ಚಾರ್ಲಿ ಕಿರ್ಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾರ್ಲಿ ಕಿರ್ಕ್ ಮೇಲೆ ನಡೆದ ಗುಂಡಿನ ದಾಳಿಯ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
This was a snipper shot damn! ? pic.twitter.com/V7nzoHau6Q
— Green ?️ (@Degen_Green) September 10, 2025
ಚಾರ್ಲಿ ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೇ ಕ್ಯಾಂಪಸ್ನಲ್ಲಿದ್ದ ವಿದ್ಯಾರ್ಥಿಗಳು ಭಯಭೀತರಾಗಿ ಓಡಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹತ್ಯೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಟ್ರಂಪ್, ʼಚಾರ್ಲಿ ಕಿರ್ಕ್ ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಬದುಕನ್ನ ಮುಡುಪಿಟ್ಟಿದ್ದರೋ ಮತ್ತು ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೋ ಆ ಮೌಲ್ಯಗಳಿಗೆ ಬದ್ಧರಾಗಬೇಕೆಂದು ನಾನು ಎಲ್ಲಾ ಅಮೆರಿಕನ್ನರಲ್ಲಿ ಮನವಿ ಮಾಡುತ್ತೇನೆʼ ಅಂತಾ ಹೇಳಿದ್ದಾರೆ.
ಚಾರ್ಲಿ ಕಿರ್ಕ್ ಅವರ ಗೌರವಾರ್ಥ ಭಾನುವಾರದವರೆಗೆ ಅಮೆರಿಕನ್ ಧ್ವಜ ಅರ್ಧ ಮಟ್ಟಕ್ಕೆ ಹಾರಿಸಲು ಡೊನಾಲ್ಡ್ ಟ್ರಂಪ್ ಆದೇಶಿಸಿದ್ದು, ದೇಶದ ಜನರಿಗೆ ಭಾವನಾತ್ಮಕ ಸಂದೇಶವನ್ನ ನೀಡಿದ್ದಾರೆ. ಚಾರ್ಲಿ ಕಿರ್ಕ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಶಂಕಿತನನ್ನ ಬಂಧಿಸಿ, ವಿಚಾರಣೆ ಬಳಿಕ ಆತನನ್ನ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಫ್ಬಿಐ ನಿರ್ದೇಶಕರು, ʼಚಾರ್ಲಿ ಕಿರ್ಕ್ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಓರ್ವ ಶಂಕಿತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆತ ಹತ್ಯೆಯಲ್ಲಿ ಭಾಗಿಯಾಗಿಲ್ಲವೆಂಬುದನ್ನ ಖಚಿತಪಡಿಸಿಕೊಂಡ ಬಳಿಕ ಆತನನ್ನ ಬಿಡುಗಡೆ ಮಾಡಲಾಗಿದೆ. ನಿಜವಾದ ಕೊಲೆಗಾರನ ಬಂಧನಕ್ಕೆ ಶೋಧಕಾರ್ಯ ನಡೆಯುತ್ತಿದೆʼ ಅಂತಾ ತಿಳಿಸಿದ್ದಾರೆ.
President Trump shares a message on the assassination of Charlie Kirk.
“I ask all Americans to commit themselves to the American values for which Charlie Kirk lived & died. The values of free speech, citizenship, the rule of law & the patriotic devotion & love of God.” pic.twitter.com/3fBSgs4Zxa
— The White House (@WhiteHouse) September 11, 2025
ಹತ್ಯೆ ಖಂಡಿಸಿದ ರಾಜಕೀಯ ನಾಯಕರುಚಾರ್ಲಿ ಕಿರ್ಕ್ ಹತ್ಯೆಗೆ ಅಮೆರಿಕದ ಪ್ರಮುಖ ರಾಜಕೀಯ ನಾಯಕರು ಪಕ್ಷಬೇಧ ಮರೆತು ಖಂಡಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್, ಡೆಮಾಕ್ರೆಟಿಕ್ ನಾಯಕರಾದ ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್, ಮಾಜಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿದಂತೆ ಅನೇಕ ನಾಯಕರು ಚಾರ್ಲಿಕಯವರ ಹತ್ಯೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. 2024ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಲಾಗಿತ್ತು.