ಅಮೇರಿಕಾ: ಕ್ಯಾಲಿಫೋರ್ನಿಯಾದ ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆ

ಸ್ಯಾನ್ ಬ್ರೂನೋ ಪೋಲಿಸ್ ಮುಖ್ಯಸ್ಥ ಎಡ್ ಬಾರ್ಬೆರಿನಿ, ಯೂಟ್ಯೂಬ್ ಮುಖ್ಯಕಾರ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆ, ಭದ್ರತಾ ಸಿಬ್ಬಂದಿ ಧಾವಿಸುತ್ತಿದ್ದಂತೆ ಆಕೆ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು.

Last Updated : Apr 4, 2018, 09:05 AM IST
ಅಮೇರಿಕಾ: ಕ್ಯಾಲಿಫೋರ್ನಿಯಾದ ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆ title=
Pic: Reuters

ವಾಷಿಂಗ್ಟನ್: ಅಮೆರಿಕಾದ ಕ್ಯಾಲಿಫೋರ್ನಿಯಾದ ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ದಾಳಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬನ ಸ್ಥಿತಿ ಗಂಭೀರವಾಗಿದೆ. ಸಿಲಿಕಾನ್ ವ್ಯಾಲಿಯ ಬಳಿ ಸ್ಯಾನ್ ಬ್ರುನೊದಲ್ಲಿನ ಯೂಟ್ಯೂಬ್ ಪ್ರಧಾನ ಕಛೇರಿಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ-ಅಮೆರಿಕನ್ ವೃತ್ತಿಪರರು ಕೆಲಸ ಮಾಡುತ್ತಾರೆ.

ಅಮೇರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದರು ಮತ್ತು "ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಪ್ರತಿಯೊಬ್ಬರೊಂದಿಗೂ ಇವೆ. ನಮ್ಮ ಅಭೂತಪೂರ್ವ ಲಾ ಎನ್ಫೋರ್ಸ್ಮೆಂಟ್ ಅಧಿಕಾರಿಗಳಿಗೆ ಮತ್ತು ಸ್ಥಳದಲ್ಲೇ ಮೊದಲ  ಪ್ರತಿಕ್ರಿಯಾಶೀಲರಿಗೆ ಧನ್ಯವಾದಗಳು ಎಂದು ತಿಳಿಸಿದಿದ್ದಾರೆ.

ಯೂಟ್ಯೂಬ್ ಪ್ರಧಾನ ಕಚೇರಿ ಬಳಿ ಬಂದ ಮಹಿಳೆ ಒಳ ಪ್ರವೇಶಿಸುವುದಕ್ಕೂ ಮೊದಲೇ ಗುಂಡಿನ ದಾಳಿ ಆರಂಭಿಸಿದ್ದಾಳೆ. ಇದರಿಂದ ಭಯಭೀತರಾದ ಸಿಬ್ಬಂದಿ ಪೋಲಿಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಭದ್ರತಾ ಸಿಬ್ಬಂದಿ ಧಾವಿಸುತ್ತಿದ್ದಂತೆ ಆಕೆ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಸ್ಯಾನ್ ಬ್ರೂನೋ ಪೋಲಿಸ್ ಮುಖ್ಯಸ್ಥ ಎಡ್ ಬಾರ್ಬೆರಿನಿ ವಿವರಿಸಿದ್ದಾರೆ.

ಗುಂಡಿನ ದಾಳಿ ಬಳಿಕ, ಸ್ಟಾಂಪೀಡಿ ಸ್ಥಳದಲ್ಲೇ ಕಂಡುಬಂದಿದೆ ಮತ್ತು ಜನರು ಹೆದರಿದ್ದರು ಎಂದು ಅವರು ಹೇಳಿದರು. ಘಟನೆ ಬಗ್ಗೆ ಮಾಹಿತಿಯನ್ನು ಪಡೆದ ನಂತರ, ಆಂಬುಲೆನ್ಸ್ ಸ್ಥಳಕ್ಕೆ ತಲುಪಿತು ಮತ್ತು ಪೊಲೀಸರು ಜನರನ್ನು ಆ ಪ್ರದೇಶದಿಂದ ದೂರವಿರಲು ತಿಳಿಸಿದರು. ಅದರ ನಂತರ ಯೂಟ್ಯೂಬ್ ಆಫೀಸ್ ಅನ್ನು ಮುಚ್ಚಲಾಯಿತು ಎಂದು ಹೇಳಲಾಗಿದೆ.

Trending News