Vasuki Snake : ಶಿವನ ಕಂಠಾಭರಣ, ಸಮುದ್ರ ಮಂಥನ ಸಮಯದಲ್ಲಿ ಹಗ್ಗವಾಗಿ ಬಳಸಲಾಗಿದ್ದ ವಾಸುಕಿ ಸರ್ಪದ ಅವಶೇಷಗಳು ಪತ್ತೆಯಾಗಿವೆ. ಗುಜರಾತ್ನ ಕಚ್ ಕರಾವಳಿಯಲ್ಲಿ ಈ ಪಳೆಯುಳಿಕೆ ಪತ್ತೆಯಾಗಿದ್ದು, ಸಂಶೋಧಕರು ಮತ್ತು ಇತಿಹಾಸಕಾರರ ಗಮನ ಸೆಳೆದಿದೆ. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..

Vasuki Indicus : 42 ಅಡಿ ಎತ್ತರದ ಬೃಹತ್ ಟೈಟಾನೊಬೊವಾ ವಿಶ್ವದ ಅತಿದೊಡ್ಡ, ಉದ್ದನೆಯ ಹಾವು ಎಂಬ ದಾಖಲೆ ಇತ್ತು. ಆದರೆ ಭಾರತದ ಗುಜರಾತ್ನಲ್ಲಿ ಇತ್ತೀಚೆಗೆ ನಡೆದ ಘಟನೆ ಒಂದು ಇತಿಹಾಸವನ್ನು ಪುನಃ ಸ್ಥಾಪಿಸಿದೆ. ಕಚ್ ಕರಾವಳಿಯಲ್ಲಿ, ಸಂಶೋಧಕರು ಐತಿಹಾಸಿಕ ಮಹತ್ವದ ಘಟನೆಗೆ ಸುಳಿವು ನೀಡುವ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ. 49 ಅಡಿ ಉದ್ದ ಮತ್ತು ಸುಮಾರು 1,000 ಕಿಲೋಗ್ರಾಂಗಳಷ್ಟು ತೂಕವಿರುವ ಒಂದು ಅದ್ಭುತ ಹಾವು ಉತ್ಖನ್ನದ ವೇಳೆ ಪತ್ತೆಯಾಗಿದೆ.
ಸುಮಾರು ಎರಡು ದಶಕಗಳಿಂದ, ಐಐಟಿ ರೂರ್ಕಿಯ ಸಂಶೋಧಕರು ಈ ಅವಶೇಷಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಸಂಶೋಧನೆಗಳಲ್ಲಿ, ಶಿವನ ಕಂಠಾಭರಣ ವಾಸಕಿಗೆ ಮತ್ತು ಸಂಶೋಧನೆಯ ವೇಳೆ ಸಿಕ್ಕ ಹಾವಿನ ಪಳೆಯುಳಿಕೆಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ವಾಸುಕಿಯಂತಹ ಬಲಿಷ್ಠ ಸರ್ಪಗಳ ಬಗ್ಗೆ ಉಲ್ಲೇಖಿಸಿರುವ ಪ್ರಾಚೀನ ಭಾರತೀಯ ಗ್ರಂಥಗಳ ಜೊತೆ ಸಂಬಂಧ ಕಲ್ಪಸಿದೆ.
ಈ ಆವಿಷ್ಕಾರ ಗುಜರಾತ್ನ ಕಚ್ ಕರಾವಳಿಯಿಂದ ಪ್ರಾರಂಭವಾಯಿತು. ಇದೀಗ ಈ ಪ್ರದೇಶವು ವಿಶ್ವದ ಗಮನ ಸೆಳೆದಿದೆ. ಅಲ್ಲದೆ, ಇತಿಹಾಸಕಾರರನ್ನು ಆಕರ್ಷಿಸುತ್ತಿದೆ. ಇಷ್ಟು ದಿನ, ಟೈಟಾನೊಬೊವಾವನ್ನು ವಿಶ್ವದ ಅತಿದೊಡ್ಡ ಹಾವು ಎಂದು ತಿಳಿಯಲಾಗಿತ್ತು. ಇದು 42 ಅಡಿಗಳಷ್ಟು ಉದ್ದವಾಗಿದೆ ಎಂದು ನಂಬಲಾಗಿತ್ತು. ಇದೀಗ ಹೊಸದಾಗಿ ಪತ್ತೆಯಾದ 49 ಅಡಿ ಉದ್ದದ ವಾಸುಕಿ ಪಳೆಯುಳಿಕೆ ಈ ದಾಖಲೆಯನ್ನು ಬದಲಾಯಿಸಿದೆ.
ಸುಮಾರು 1,000 ಕಿಲೋಗ್ರಾಂಗಳಷ್ಟು ತೂಕ ಇದೆ ಅಂದ್ರೆ ಈ ಹಾವು ಎಷ್ಟು ದೊಡ್ಡದಿರಬಹುದು ಅಂತ ಊಹಿಸಿಕೊಳ್ಳಿ. ಇದು ಹಾವಿನ ಅಂದಾಜು ತೂಕ ಅಷ್ಟೇ. ಹಿಂದೂ ಧರ್ಮಗ್ರಂಥಗಳಲ್ಲಿ ವಾಸುಕಿ ಸರ್ಪದ ಬಗ್ಗೆ ಗಮನಾರ್ಹ ಉಲ್ಲೇಖಗಳು ಇವೆ. 160 ಮಿಲಿಯನ್ ವರ್ಷಗಳಷ್ಟು ಹಿಂದಿನ ಆರಂಭಿಕ ಹಾವುಗಳು ಮೊದಲು ಸಾಗರಗಳಲ್ಲಿ ಹುಟ್ಟಿದ್ದವು ಎನ್ನಲಾಗಿದೆ. ಸಮುದ್ರ ಮಂಥನಕ್ಕೆ ಹಗ್ಗವಾಗಿ ವಾಸುಕಿ ಸರ್ಪವನ್ನು ಬಳಸಲಾಗಿತ್ತು ಎನ್ನುವುದನ್ನು ಮರೆಯಬಾರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ